ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೀತಿಗಳಿಂದಾಗಿ ವಿಐಎಸ್’ಎಲ್ #VISL ಕಾರ್ಖಾನೆ ಮುಚ್ಚುವ ಹಂತಕ್ಕೆ ಬಂದಿದೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ತಾಲ್ಲೂಕಿನ ಹಿರಿಯೂರು ಜಿಪಂ ವ್ಯಾಪ್ತಿಯ ಅಂತರಗಂಗೆ, ಬಾರಂದೂರು, ಕಾಂಗ್ರೆಸ್ #Congress ಮುಖಂಡರು ಮತ್ತು ಕಾರ್ಯಕರ್ತರ ಬೃಹತ್ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಈ ಬಾರಿ ಗೀತಾ ಶಿವರಾಜಕುಮಾರ್ #GeethaShivarajkumar ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ #Bangarappa ಅವರು ರೈತರ ಕೃಷಿ ಪಂಪ್ ಸೆಟ್’ಗಳಿಗೆ ಉಚಿತ ವಿದ್ಯುತ್ ನೀಡುವ ಮೂಲಕ, ಸಾಮಾನ್ಯ ಜನರು ಉಸಿರಾಡುವಂತಹ ವಾತಾವರಣ ಸೃಷ್ಟಿಸಿ ಹೋಗಿದ್ದಾರೆ. ಅದರ ಋಣ ತೀರಿಸಲು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಮತ ನೀಡಿ ಆಶೀರ್ವದಿಸಬೇಕು. ಬಿಜೆಪಿ ಪಕ್ಷವನ್ನು ನಂಬಿಕೊಂಡರೆ, ಬಡವರಿಗೆ ಆಶಾಕಿರಣವಾಗಿರುವ ಅನೇಕ ಯೋಜನೆಗಳಿಗೆ ಬಿಜೆಪಿಯಿಂದ ಪೆಟ್ಟು ಬೀಳಲಿದೆ ಎಂದರು.









Discussion about this post