ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ಬಡವರಿಗೆ ಹಿಂದಿನ 7 ಕೆಜಿ ಬದಲಾಗಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಎಂದು ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ Siddaramaiah ಭರವಸೆ ನೀಡಿದ್ದಾರೆ.
ಶಾಸಕ ಬಿ.ಕೆ. ಸಂಗಮೇಶ್ವರ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಡವರು ಹೊಟ್ಟೆ ತುಂಬಾ ಪ್ರತಿದಿನ ಊಟ ಮಾಡಬೇಕು. ಎಲ್ಲರೂ ನೆಮ್ಮದಿಯಿಂದ ಜೀವಿಸಬೇಕು. ಹೀಗಾಗಿ, 10 ಕೆಜಿ ಉಚಿತ ಅಕ್ಕಿಯನ್ನು ನೀಡುತ್ತೇವೆ ಎಂದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದು, ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ಅಭಿವೃದ್ಧಿಯಲ್ಲಿ 10 ವರ್ಷ ಹಿಂದಕ್ಕೆ ಹೋಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಅಭಿವೃದ್ಧಿ ಕಾರ್ಯಗಳು ಹಾಗೂ ಯೋಜನೆಗಳನ್ನು ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ನಿಲ್ಲಿಸಲಾಗಿದೆ. ಯುಪಿಎ ಅವಧಿಯಲ್ಲಿ ಪೆಟ್ರೋಲ್ 71 ರೂ., ಡೀಸೆಲ್ 46 ರೂ. ಗ್ಯಾಸ್ ಸಿಲಿಂಡರ್ 414 ರೂ. ಇತ್ತು. ಆದರೆ, ಈಗ ಗಗನಕ್ಕೆ ಏರಿದ್ದು, ಮೋದಿ ಹೇಳಿದ ಅಚ್ಛೇದಿನ್ ಆಯೇಗಾ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
Also read: ಅಪ್ಪು ಗುಣಕ್ಕೆ ಗಂಧದ ಗುಡಿ, ಅವನ ಸಂಪಾದನೆಗೆ ಅಭಿಮಾನಿಗಳೇ ಸಾಕ್ಷಿ: ರಾಘವೇಂದ್ರ ರಾಜಕುಮಾರ್
ಮೋದಿ ಟೋಪಿ ಹಾಕಿದ್ದಾರೆ:
ಮೋದಿ ಜನರಿಗೆ ಸುಳ್ಳು ಹೇಳಿ ಟೋಪಿ ಹಾಕಿದ್ದಾರೆ. ಅವರೇ ಹೇಳಿದಂತೆ ಇಷ್ಟು ವರ್ಷದಲ್ಲಿ 16 ಕೋಟಿ ಉದ್ಯೋಗ ಸೃಷ್ಠಿಸಬೇಕಿತ್ತು. ಎಲ್ಲಿದೆ ಉದ್ಯೋಗ ಎಂದು ಪ್ರಶ್ನಿಸಿದ ಅವರು, ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ ಎಂದು ಕಿಡಿ ಕಾರಿದರು.

ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಪ್ರಧಾನಿಯವರೆಗೂ ದೂರು ಹೋದರೂ ಏನೂ ಪ್ರಯೋಜನವಾಗಿಲ್ಲ. ಬಿಜೆಪಿಯವರು ಲಜ್ಜೆಗೆಟ್ಟ, ಮಾನಗೆಟ್ಟ ಜನ. ಜನರಿಗೆ ಸುಳ್ಳು ಹೇಳುವುದೇ ಬಿಜೆಪಿಯ ಕೆಲಸ. ಬಿಜೆಪಿಯ ಒಬ್ಬರಾದರೂ ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ್ದಾರಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ತಂದುಕೊಟ್ಟ ಸ್ವಾತಂತ್ರವನ್ನು ಇವರು ಮಜಾ ಮಾಡುತ್ತಿದ್ದಾರೆ ಎಂದರು.











Discussion about this post