ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ SSLC Result ತಾಲೂಕು ಜಿಲ್ಲೆಗೆ ಕೊನೆಯ 7ನೇ ಸ್ಥಾನ ಕಾಯ್ದುಕೊಂಡಿದ್ದು, ಶೇ.75.38ರಷ್ಟು ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆಗೆ ಹಾಜರಿದ್ದ 4126 ವಿದ್ಯಾರ್ಥಿಗಳ ಪೈಕಿ 1367 ಬಾಲಕರು, 1743 ಬಾಲಕಿಯರು ಸೇರಿದಂತೆ ಒಟ್ಟು 3110 ಮಂದಿ ಉತ್ತೀರ್ಣರಾಗಿದ್ದಾರೆ. ಉಳಿದಂತೆ 1016 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಸರ್ಕಾರಿ ಶಾಲೆಯ 4, ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಶಾಲೆಗಳ 7, ಅನುದಾನಿತ ಶಾಲೆಯ 1 ಮತ್ತು ಖಾಸಗಿ ಶಾಲೆಯ 39 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 51 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.
ಗ್ರಾಮಾಂತರ ಭಾಗದ 2297 ವಿದ್ಯಾರ್ಥಿಗಳ ಪೈಕಿ 1715 ಹಾಗು ನಗರ ಭಾಗದ 1829 ವಿದ್ಯಾರ್ಥಿಗಳ ಪೈಕಿ 1395 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ತಾಲೂಕಿನ 1 ಸರ್ಕಾರಿ ಶಾಲೆ, ಸಮಾಜ ಕಲ್ಯಾಣ ಇಲಾಖೆಗೆ ಸೇರಿದ 4 ಶಾಲೆಗಳು ಮತ್ತು 9 ಖಾಸಗಿ ಶಾಲೆಗಳು ಸೇರಿದಂತೆ ಒಟ್ಟು 14 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿವೆ.
Also read: ಗಾಂಜಾ ಸೇವಿಸಿ ಅಸಭ್ಯ ವರ್ತನೆ ಹಿನ್ನೆಲೆ: ಓರ್ವನ ಬಂಧನ
ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ, ಪ್ರೌಢಶಾಲೆ, ಲೋಯರ್ ಹುತ್ತಾ, ಬಿ.ಎಚ್ ರಸ್ತೆ, ಪೂರ್ಣಪ್ರಜ್ಞ ವಿದ್ಯಾಸಂಸ್ಥೆ, ಆನವೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹುತ್ತಾ ಕಾಲೋನಿ ಅನನ್ಯ ಪ್ರೌಢಶಾಲೆ, ಮಾವಿನಕೆರೆ ಸರ್ಕಾರಿ ಪ್ರೌಢಶಾಲೆ, ನ್ಯೂಟೌನ್ ತರಂಗ ಕಿವುಡು ಮತ್ತು ಮೂಕ ಮಕ್ಕಳ ಪ್ರೌಢಶಾಲೆ, ಕಾರೇಹಳ್ಳಿ ಶ್ರೀ ಆದಿಚುಂಚನಗಿರಿ ಕೇಂದ್ರೀಯ ವಿದ್ಯಾಲಯ(ಬಿಜಿಎಸ್ ಶಾಲೆ), ಹಂಚಿನ ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವರನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕವಲಗುಂದಿ ಹಳೇಜೇಡಿಕಟ್ಟೆ ಸೇಂಟ್ ತೆರೇಸಾ ಪ್ರೌಢ ಶಾಲೆ, ಹೊಳೆಹೊನ್ನೂರು ವಿವೇಕಾನಂದ ಲಯನ್ಸ್ ಆಂಗ್ಲ ಮಾದ್ಯಮ ಪ್ರೌಢಶಾಲೆ, ಅಂತರಗಂಗೆ ರಾಘವೇಂದ್ರ ಪ್ರೌಢಶಾಲೆ, ಹಳೇನಗರ ಬಸವೇಶ್ವರ ವೃತ್ತದ ಶ್ರೀ ಕನಕ ಪ್ರೌಢಶಾಲೆ ಮತ್ತು ದೊಡ್ಡೇರಿ ಅಲ್ಪ ಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇಕಡ 100ರಷ್ಟು ಫಲಿತಾಂಶ ಪಡೆದುಕೊಂಡಿವೆ.
ಹಳ್ಳಿಕೆರೆ ಸೇಂಟ್ ಡೊಮೆನಿಕ್ ಶಾಲೆಯ ವಿದ್ಯಾರ್ಥಿನಿ ಎಸ್. ನಿಖಿತಾ 625ಕ್ಕೆ 623, ನ್ಯೂಟೌನ್ ಎಸ್.ಎ.ವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶೈನಿ ಅಂಜಲ್ 625ಕ್ಕೆ 621, ಲೋಯರ್ ಹುತ್ತಾ, ಬಿ.ಎಚ್ ರಸ್ತೆ, ಪೂರ್ಣಪ್ರಜ್ಞ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಎಸ್. ಹರ್ಷಿಣಿ 625ಕ್ಕೆ 619 ಹಾಗು ಆರ್.ಎಲ್ ಮೌಲ್ಯ 625ಕ್ಕೆ 619 ತಾಲೂಕಿನಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗು ಶೇ.100ರಷ್ಟು ಫಲಿತಾಂಶ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post