ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಅ.28ರಂದು ಆಚರಿಸಿಕೊಳ್ಳಬೇಕಿದ್ದ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳದೇ ಇರಲು ಶಾಸಕ ಬಿ.ಕೆ. ಸಂಗಮೇಶ್ವರ ಅವರು ನಿರ್ಧರಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಭದ್ರಾವತಿಯ ಪ್ರತಿಷ್ಠಿತ ಕಾರ್ಖಾನೆಯಾದ ಎಂಪಿಎಂ ಅವನತಿ ಹೊಂದುತ್ತಿದ್ದು, ವಿಐಎಸ್’ಎಲ್ ಸಹ ಅವನತಿಯ ಸ್ಥಿತಿಗೆ ತಲುಪುತ್ತಿದೆ. ಈ ಎರಡೂ ಕಾರ್ಖಾನೆಗಳು ಸಮೃದ್ಧವಾಗಿ ನಡೆಯುವ ಸಂದರ್ಭದಲ್ಲಿ ಕ್ಷೇತ್ರವು ಆರ್ಥಿಕವಾಗಿ ಸಮೃದ್ಧವಾಗಿತ್ತು. ರೈತರು, ಕೂಲಿ ಕಾರ್ಮಿಕರು, ಮಹಿಳೆಯರು, ವರ್ತಕರು ಸೇರಿದಂತೆ ಭದ್ರಾವತಿಯ ಜನತೆಯು ನೆಮ್ಮದಿಯ ಜೀವನ ನಡೆಸುತ್ತಿದ್ದರು. ಈ ಎರಡೂ ಕಾರ್ಖಾನೆಗಳು ಅವನತಿ ಹೊಂದಿದ ಕಾರಣದಿಂದ ನನ್ನ ಮನಸ್ಸಿಗೆ ತುಂಬಾ ನೋವುಂಟಾಗಿದೆ. ಎಂಪಿಎಂ ಕಾರ್ಖಾನೆಯ ಅವನತಿಯಿಂದ ೨೧೪ ಬ್ಯಾಕ್ ಲಾಗ್ ಕಾರ್ಮಿಕರ ಜೀವನವು ಅಸ್ತವ್ಯಸ್ತವಾಗಿದ್ದು, ಇವರ ಜೀವನರು ರೂಪುಗೊಳ್ಳದೇ ಇರುವುದು ಸಹ ನನ್ನ ಮನಸ್ಸಿಗೆ ತೀರಾ ನೋವುಂಟಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಅ.೨೮ರಂದು ನನ್ನ ಜನ್ಮದಿನವನ್ನು ಆಚರಿಸಿಕೊಳ್ಳದೇ ಇರಲು ನಾನು ನಿರ್ಧರಿಸಿದ್ದೇನೆ. ಹೀಗಾಗಿ, ಕ್ಷೇತ್ರದ ಜನರು, ಅಭಿಮಾನಿಗಳು, ಬಂಧುಗಳು ಹಾಗೂ ಪಕ್ಷದ ಕಾರ್ಯಕರ್ತರು ಯಾವುದೇ ರೀತಿಯಲ್ಲೂ ವಿಜೃಂಭಣೆಯಿಂದ ನನ್ನ ಜನ್ಮದಿನವನ್ನು ಆಚರಿಸಬಾರದು. ನನ್ನ ಮುಂದಿನ ರಾಜಕೀಯ ಜೀವನ ಹಾಗೂ ಕ್ಷೇತ್ರವನ್ನು ಸಮೃದ್ಧವಾಗುವಂತೆ ಅಂದು ದೇವರಲ್ಲಿ ಪ್ರಾರ್ಥಿಸಿ ಎಂದು ವಿನಂತಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post