ಭದ್ರಾವತಿ: ಸ್ವಾತಂತ್ರ್ಯೋತ್ಸವ ನಿಮಿತ್ತ ನಡೆಯುವ ರಾಷ್ಟ್ರಧ್ವಜಾ ಅಪಮಾನ ಹಾಗು ಪ್ಲಾಸ್ಟಿಕ್ ಧ್ವಜ ವಿತರಣೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರು ಶನಿವಾರ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ರಾಷ್ಟ್ರಧ್ವಜ ಗೌರವದ ಸಂಕೇತವಾಗಿದ್ದು ದೇಶದ ಜನರು ಕೇವಲ ಆ: 15 ಹಾಗು ಜ: 26 ರ ಗಣರಾಜ್ಯೋತ್ಸವ ದಿನಗಳಂದು ಮಾತ್ರ ರಾಷ್ಟ್ರಧ್ವಜಕ್ಕೆ ಗೌರವ ಸಮರ್ಪಣೆ ಮಾಡುವ ಮೂಲಕ ಹಾರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಕಾಗದ ಮತ್ತು ಪ್ಲಾಸ್ಟಿಕ್ ಧ್ವಜಗಳು ಸಂಜೆಯಾಗುತ್ತಿದ್ದಂತೆ ರಸ್ತೆಯ ಮೇಲೆ ಹರಡುವುದರಿಂದ ಧ್ವಜಕ್ಕೆ ಅಪಮಾನ ಮಾಡಿದಂತಾಗಿರುವುದಲ್ಲದೆ ಅಗೌರವ ನೀಡಿದಂತಾಗಿದೆ. ಈ ಹಿನ್ನಲೆಯಲ್ಲಿ ಅಗೌರವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿ ಮುಂಬೈ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡಲಾಗಿ ಅಲ್ಲಿನ ನ್ಯಾಯಾಲಯವು ಪ್ಲಾಸ್ಟಿಕ್ ರಾಷ್ಟ್ರ ಧ್ವಜದ ಅಗೌರವ ತಡೆಗಟ್ಟಲು ಸರಕಾರಕ್ಕೆ ಆದೇಶ ನೀಡಲಾಗಿತ್ತು.
ಕೇಂದ್ರೀಯ ಮತ್ತು ರಾಜ್ಯದ ಗೃಹ ವಿಭಾಗ ಹಾಗು ಶಿಕ್ಷಣ ವಿಭಾಗದ ಮೂಲಕ ಸುತ್ತೋಲೆಯನ್ನು ಹೊರಡಿಸಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಸರಕಾರವು ಪ್ಲಾಸ್ಟಿಕ್ ಧ್ಜಜ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಇದರ ಸಲುವಾಗಿ ಸಮಿತಿಯು ಕಳೆದ 16 ವರ್ಷಗಳಿಂದ ರಾಷ್ಟ್ರಧ್ಜಜ ಗೌರವ ಕಾಪಾಡುವ ಅಭಿಯಾನ ಮಾಡುತ್ತಾ ಸಾಗಿದೆ. ಸ್ವಾತಂತ್ರ್ಯೋತ್ಸವ ಹಾಗು ಗಣ ರಾಜ್ಯೋತ್ಸವ ದಿನಗಳಂದು ವಿದ್ಯಾರ್ಥಿಗಳು, ಪಾಲಕರು ಹಾಗು ಸಾರ್ವಜನಿಕರು ವಾಹನಗಳ ಮೇಲೆ, ಉಪಯೋಗಿಸಿ ಸಂಜೆ ಯಾಗುತ್ತಿದ್ದಂತೆ ರಸ್ತೆಬದಿ, ಚರಂಡಿ ಮತ್ತಿತರೆಡೆ ಬಿಸಾಡುವುದು ವಾಡಿಕೆಯಾಗಿದೆ. ಇದನ್ನು ತಡೆಗಟ್ಟಲು ಅನೇಕ ಕ್ರಾಂತಿಕಾರಿಗಳು ಗೌರವ ಕಾಪಾಡಲು ತಮ್ಮ ಪ್ರಾಣತಾಗವನ್ನು ಮಾಡಿದ್ದಾರೆ. ಈ ರೀತಿಯಲ್ಲಿ ಲಾಂಛನಗಳನ್ನು ಬಳಸುವುದು ಕ್ರಾಂತಿಕಾರಿಗಳ ಅಪಮಾನವಾಗಿದೆ ಎಂದು ದೂರಿದರು. ಅದ್ದರಿಂದ ಸರಕಾರಿ ಆದೇಶ ಉಲ್ಲಂಘಿಸಿ ಧ್ವಜ ಮಾರಾಟ ಮಾಡುವ ಅಂಗಡಿ ಹಾಗು ಮಾರಾಟಗಾರರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸುಧಾ ಗುರುಪ್ರಸಾದ್, ಪವನ್, ವಸಂತ್, ಹಾಲೇಶ್, ಕೇಸರಿ ಪಡೆಯ ಗಿರೀಶ್, ಎಬಿವಿಪಿ ವಿಜಯ ಸಿದ್ದಾರ್ಥ ನವೀನ್ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post