No Result
View All Result
Indian Railway Fine Hike
English Articles

Jan Vishwas Act 2026: Revised Railway Penalty Rules Likely from July 1

by ಕಲ್ಪ ನ್ಯೂಸ್
June 23, 2026
2

Kalpa Media House  | New Delhi | The Indian Railways is set to implement revised penalty provisions under the Jan...

Read moreDetails
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
  • Advertise With Us
  • Grievances
  • About Us
  • Contact Us
Wednesday, June 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಭದ್ರಾವತಿ: ಬಿಎಸ್‌ವೈ-ಬಿವೈಆರ್ ಕ್ಷೇತ್ರಕ್ಕೆ ಬಾರದಂತೆ ನಿರ್ಬಂಧಕ್ಕೆ ಅಪ್ಪಾಜಿ ನಿರ್ಧಾರ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 16, 2019
in Small Bytes, ಭದ್ರಾವತಿ
0
ಭದ್ರಾವತಿ: ಬಿಎಸ್‌ವೈ-ಬಿವೈಆರ್ ಕ್ಷೇತ್ರಕ್ಕೆ ಬಾರದಂತೆ ನಿರ್ಬಂಧಕ್ಕೆ ಅಪ್ಪಾಜಿ ನಿರ್ಧಾರ
Share on FacebookShare on TwitterShare on WhatsApp

ಭದ್ರಾವತಿ: ಪ್ರತಿಷ್ಠಿತ ವಿಐಎಸ್‌ಎಲ್ ಕಾರ್ಖಾನೆಯನ್ನು ಕೇಂದ್ರ ಸರಕಾರ ಖಾಸಗೀಕರಣ ಅಥವಾ ಮಾರಾಟ ಮಾಡಲು ಮುಂದಾದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಕ್ಷೇತ್ರಕ್ಕೆ ಪ್ರವೇಶ ಮಾಡದಂತೆ ನಿರ್ಬಂಧ ಮಾಡಬೇಕಾಗುತ್ತದೆ ಎಂದು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ರಾಘವೇಂದ್ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿಐಎಸ್‌ಎಲ್ ಕಾರ್ಖಾನೆಯ ಖಾಸಗೀಕರಣ ಅಥವಾ ಮಾರಾಟ ಮಾಡಲು ಬಿಡದೆ ಅಭಿವೃದ್ಧಿ ಮಾಡುವುದಾಗಿ ಕಾರ್ಮಿಕರಿಗೆ ಪೊಳ್ಳು ಭರವಸೆ ನೀಡುವುದರೊಂದಿಗೆ ಮತ ಪಡೆದು ಅಧಿಕಾರ ಪಡೆಯತ್ತಾ ಬಂದಿರುತ್ತಾರೆ. ಆದರೆ ಇವರಿಬ್ಬರು ಕೊಟ್ಟ ಮಾತನ್ನು ಉಳಿಸಿಕೊಳ್ಳದಿರುವುದು ದುರ್ದೈವ ಎಂದು ಟೀಕಿಸಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕಾಗದ ಕಾರ್ಖಾನೆಗೆ ಅಗತ್ಯವಾಗಿದ್ದ ಬಂಡವಾಳವನ್ನು ಬ್ಯಾಂಕ್ ಶ್ಯೂರಿಟಿ ಮೂಲಕ ಒದಗಿಸಿದ್ದರೆ ಕಾರ್ಖಾನೆ ಉಳಿಯುತ್ತಿತ್ತು. ಆದರೆ ಅವರು ಕೇವಲ ಕಾರ್ಮಿಕರ ಮತ್ತು ಅವಲಂಭಿತರ ಮತಗಳಿಕೆ ಮೇಲೆ ಕಣ್ಣಿಟ್ಟರೆ ಹೊರತು ಕಾರ್ಮಿಕರಿಗಾಗಿ, ಕಾರ್ಖಾನೆ ಉಳಿಗೆ ಪ್ರಾಮಾಣಿಕತೆ ತೋರಿಸಲಿಲ್ಲ. ಅದರ ಪರಿಣಾಮ ಎಂಪಿಎಂ ಕಾರ್ಖಾನೆಯು ಮುಚ್ಚಲ್ಪಟ್ಟಿತು. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯದಿಂದ 26 ಸಂಸದರು ಆಯ್ಕೆ ಆಗಿದ್ದಾರೆ. ಆದರೆ ಇಲ್ಲಿನ ಕಾರ್ಖಾನೆಯ ಅಭಿವೃದ್ದಿಗೆ ಅಗತ್ಯವಾದ ಬಂಡವಾಳವನ್ನು ತರಿಸುವಲ್ಲಿ ವಿಫಲರಾಗಿದ್ದಾರೆ. ಕಾರ್ಖಾನೆ ಖಾಸಗೀಕರಣ ಆಗುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಆದರೆ ಮೇಲ್ನೋಟಕ್ಕೆ ಖಾಸಗೀಕರಣ ಮಾಡಲು ಬಿಡುವುದಿಲ್ಲ ಎನ್ನುತ್ತಿದ್ದಾರೆ. ಕ್ಷೇತ್ರದ ಜನತೆ ಹಾಕಿರುವ ಮತಗಳ ಕುರಿತು ಅವರಲ್ಲಿ ಕೃತಜ್ಞತೆ ಎನ್ನುವುದಿದ್ದರೆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಬಿಡುವುದಿಲ್ಲ ಹಾಗೂ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ ಅಗತ್ಯವಾದ ಬಂಡವಾಳ ತೊಡಗಿಸುವಂತೆ ಮಾಡುತ್ತೇನೆ ಎಂದು ಮತದಾರರ ಮುಂದೆ ಹೇಳಲಿ ಎಂದರು.

ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಖಾನೆಗಳನ್ನು ಉಳಿಸಿದರೆ ನಾನು ರಾಜಕೀಯವಾಗಿ ಸದಾ ನಿಮ್ಮೊಂದಿಗಿರುತ್ತೇನೆ ಎಂದು ಯಡಿಯೂರಪ್ಪ ಮತ್ತು ಬಿ.ವೈ. ರಾಘವೇಂದ್ರ ಅವರಿಗೆ ಹೇಳುತ್ತಲೇ ಬಂದಿದ್ದೇನೆ. ಅವರಿಬ್ಬರಿಗೂ ಭದ್ರಾವತಿಯ ಜನರ ಮತಗಳು ಮಾತ್ರ ಬೇಕೇ ವಿನಾ ಕಾರ್ಮಿಕರ ತರಬೇಡವಾಗಿದೆ. ಆದರೂ ಮತದಾರರು ಅವರನ್ನೇ ಚುನಾಯಿಸುತ್ತಾ ಬಂದಿರುವುದು ಜನರ ಮೂರ್ಖತನವಾಗಿದೆ. ಕಾರ್ಖಾನೆಗಳು ಉಳಿದರೆ ಊರು, ಊರು ಉಳಿದರೆ ರಾಜಕಾರಣ, ವಿಐಎಸ್‌ಎಲ್ ಕಾರ್ಖಾನೆ ಉಳಿಸಲು ಎಲ್ಲರೂ ಒಂದಾಗಿ ಹೋರಾಟಕ್ಕೆ ಇಳಿಯುವ ಅಗತ್ಯವಿದೆ ಎಂದರು.

ಕಳೆದ ಲೋಕಸಭಾ ಚುನಾವಣೆ ವೇಳೆ ನೀವು ಮತ್ತು ಶಾಸಕ ಬಿ.ಕೆ. ಸಂಗಮೇಶ್ ದೋಸ್ತಿಗಳಾಗಿ ಕೈ-ಕೈ ಹಿಡಿದು ಒಂದಾಗಿದ್ದೀರಿ. ಈಗ ರಾಜ್ಯದಲ್ಲಿ ನಿಮ್ಮ ದೋಸ್ತಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಎಂಪಿಎಂ ಕಾರ್ಖಾನೆಯ ಮರು ಆರಂಭಕ್ಕೆ ಏಕೆ ಪ್ರಯತ್ನಿಸಬಾರದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ದೋಸ್ತಿ ಸರಕಾರದ ಅವಾಂತರಗಳು ಎಲ್ಲರಿಗೂ ತಿಳಿದಿದೆ. ಅಲ್ಲಿ ಏನೂ ಆಗುವುದಿಲ್ಲ. ಇನ್ನು ನಾನು ಮತ್ತು ಶಾಸಕ ಸಂಗಮೇಶ್ ಅವರ ಜೊತೆ ಕೈ ಜೋಡಿಸದೆ ಇದ್ದಿದ್ದರೆ ನಮ್ಮ ಅಭ್ಯರ್ಥಿಗೆ 15 ಸಾವಿರ ಮತಗಳು ಹೆಚ್ಚಾಗಿ ಬರುತ್ತಿದ್ದವು ಎಂದರು.

ತಾವು ಶಾಸಕನಾದರೆ ಎಂಪಿಎಂ ಕಾರ್ಖಾನೆಯನ್ನು ಉಳಿಸುತ್ತೇನೆ. ಕಾರ್ಮಿಕರಿಗೆ ವಾಸಿಸಲು ಮನೆಗಳನ್ನು ಕೊಡಿಸುತ್ತೇನೆ ಎಂದು ಹೇಳುತ್ತಿದ್ದರು. ಇದರಿಂದ ಕ್ಷೇತ್ರದ ಜನತೆ ಅವರನ್ನು ಶಾಸಕರನ್ನಾಗಿ ಮಾಡಿದ್ದಾರೆ. ಆದರೂ ಏನು ಮಾಡದೆ ಸುಮ್ಮನೇಕಿದ್ದಾರೆ ಎಂದು ಶಾಸಕ ಸಂಗಮೇಶ್ ಹೆಸರು ಪ್ರಸ್ತಾಪಿಸದೆ ಅಪ್ಪಾಜಿ ಹೇಳಿದರು.

ವಿಐಎಸ್‌ಎಲ್ ಕಾರ್ಖಾನೆ ಖಾಸಗೀಕರಣಗೊಳಿಸದಂತೆ ಮತ್ತು ಕೇಂದ್ರ ಸರ್ಕಾರ ಅಗತ್ಯವಾದ ಬಂಡವಾಳ ತೊಡಗಿಸುವಂತೆ ಒತ್ತಾಯಿಸಿ ಶೀಘ್ರದಲ್ಲಿ ಕ್ಷೇತ್ರದ ವಿವಿಧ ಸಂಘಟನೆಗಳ ಜೊತೆ ಚರ್ಚಿಸಿ ಭದ್ರಾವತಿ ಬಂದ್’ಗೆ ಕರೆ ನೀಡುವ ಮೂಲಕ ಹೋರಾಟದ ಮುಂದಿನ ರೂಪುರೇಷೆ ನಿರ್ಧರಿಸಲಾಗುವುದು. ಈ ಎಲ್ಲ ಹೋರಾಟಗಳಲ್ಲಿ ಕ್ಷೇತ್ರದ ಸಮಸ್ತ ನಾಗರಿಕರು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಹೋರಾಟದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಮಾಜಿ ನಗರಸಭಾಧ್ಯಕ್ಷೆ ಸುಧಾಮಣಿ, ವಿಶಾಲಾಕ್ಷಿ, ಸದಸ್ಯರಾದ ಬದ್ರಿ ನಾರಾಯಣ್, ರಾಜು, ಮುಖಂಡರಾದ ಜಿ.ಟಿ. ಶ್ರೀಧರ್, ಕರಿಯಪ್ಪ, ಸುಜಾತ, ರಾಮಕೃಷ್ಣ, ಫೀರ್ ಷರೀಫ್, ರಾಮಕೃಷ್ಣೇ ಗೌಡ ಮುಂತಾದವರಿದ್ದರು.

(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

Tags: B K SangameshBhadravathiKannada NewsM J AppajiMalnad NewsMPMVISLಎಂಪಿಎಂ ಕಾರ್ಖಾನೆಬಿ.ಎಸ್. ಯಡಿಯೂರಪ್ಪಬಿ.ವೈ. ರಾಘವೇಂದ್ರಭದ್ರಾವತಿವಿಐಎಸ್‌ಎಲ್ ಕಾರ್ಖಾನೆ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭದ್ರಾವತಿ: ಭೂಮಿ ಹಕ್ಕು ನೀಡಲು ಒತ್ತಾಯಿಸಿ ಜೂ: 17 ರಂದು ಪ್ರತಿಭಟನೆಗೆ ನಿರ್ಧಾರ

Next Post

ಕರಾವಳಿಗರ ಕನಸಿನ ಕಲೆ ಯಕ್ಷಗಾನದ ಕೂಸು ‘ಶ್ವೇತಾ ಪೂಜಾರಿ’

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕರಾವಳಿಗರ ಕನಸಿನ ಕಲೆ ಯಕ್ಷಗಾನದ ಕೂಸು ‘ಶ್ವೇತಾ ಪೂಜಾರಿ’

ಕರಾವಳಿಗರ ಕನಸಿನ ಕಲೆ ಯಕ್ಷಗಾನದ ಕೂಸು 'ಶ್ವೇತಾ ಪೂಜಾರಿ'

Leave a Reply Cancel reply

Your email address will not be published. Required fields are marked *

No Result
View All Result
Indian Railway Fine Hike
English Articles

Jan Vishwas Act 2026: Revised Railway Penalty Rules Likely from July 1

by ಕಲ್ಪ ನ್ಯೂಸ್
June 23, 2026
2

Kalpa Media House  | New Delhi | The Indian Railways is set to implement revised penalty provisions under the Jan...

Read moreDetails
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL