ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ವಿಶ್ವದಾದ್ಯಾಂತ ಆತಂಕ ಹುಟ್ಟಿಸಿರುವ ಕೊರೋನಾ ಕುರಿತು ರಾಜ್ಯ ಹಾಗೂ ಕೇಂದ್ರ ಸರಕಾರಗಳು ವಿಶೇಷ ಜಾಗೃತಿ ಮೂಡಿಸುವ ಮೂಲಕ ನಾನಾ ವಿಧವಾದ ಅರಿವು ಮೂಡಿಸುತ್ತಿದ್ದರೆ, ವಿಭಿನ್ನ ಎಂಬಂತೆ ಕಾಗದ ನಗರದ ಕಲಾವಿದ ಭದ್ರಾವತಿ ಗುರು ಎಂಬುವವರು ಸ್ವಂತ ಖರ್ಚಿನಲ್ಲಿ ಗೋಡೆ ಬರಹದ ಮೂಲಕ ಜನ ಜಾಗೃತಿ ಅರಿವು ಮೂಡಿಸಲು ಮುಂದಾಗಿದ್ದಾರೆ.
ನಗರಸಭಾ ಕಚೇರಿ ಮುಂಭಾಗದಲ್ಲಿ ಪೌರಾಯುಕ್ತ ಮನೋಹರ್ ಗೋಡೆಯ ಮೇಲೆ ಕೊರೋನಾ ಕುರಿತಾದ ಜಾಗೃತಿ ಕುರಿತು ಸ್ವತಃ ಬರೆಯುವುದರೊಂದಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಎಂ.ಆರ್. ಗಾಯಿತ್ರಿ, ಆರೋಗ್ಯ ಇಲಾಖೆಯ ಅಧ್ಯಕ್ಷ ನೀಲೇಶ್ ರಾಜ್, ಪರಿಸರ ಇಂಜಿನಿಯರ್ ರುದ್ರೇಗೌಡ ಸೇರಿದಂತೆ ಅನೇಕರಿದ್ದರು.
ಕಲಾವಿದ ಗುರು ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ಮತದಾನದ ಅರಿವು ಮೂಡಿಸುವ ಸಲುವಾಗಿ ಕ್ಷೇತ್ರದಾದ್ಯಂತ ಗ್ರಾಮಾಂತರ ಹಾಗೂ ನಗರ ಪ್ರದೇಶಗಳ ಬಸ್ ನಿಲ್ದಾಣ, ರೈಲು ನಿಲ್ದಾಣ, ಕಲ್ಯಾಣ ಮಂಟಪ, ದೇವಾಲಯಗಳು ಹಾಗು ಜನನಿಬಿಡ ಪ್ರದೇಶಗಳಲ್ಲಿ ಬರಹದ ಮೂಲಕ ಮತದಾನದ ಜಾಗೃತಿ ಮೂಡಿಸಿದ್ದರು.
Get in Touch With Us info@kalpa.news Whatsapp: 9481252093
Discussion about this post