ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರದಲ್ಲಿ ಇಂದು ಈದ್ ಮಿಲಾದ್ #EidMilad ಮೆರವಣಿಗೆ ನಡೆಯಲಿದ್ದು, ಇದಕ್ಕೂ ಮುನ್ನ ರಾತ್ರಿ ಖಾಜಿ ಮೊಹಲ್ಲಾದಲ್ಲಿ ವಿವಾದಿತ ಫ್ಲೆಕ್ಸ್ ಹಾಕಲಾಗಿತ್ತು.
ನಗರದ ಖಾಜಿ ಮೊಹಲ್ಲಾದಲ್ಲಿ ಔರಂಗಜೇಬ್ ಫ್ಲೆಕ್ಸ್ ಹಾಗೂ ಟಿಪ್ಪು ಖಡ್ಗದ #TippuSulatan ಮಾದರಿ ಪ್ರದರ್ಶನ ಮಾಡಲಾಗಿದ್ದು, ಈ ವಿಚಾರ ವಿವಾದವಾಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸ್ ಇಲಾಖೆ #Police ಅವುಗಳನ್ನು ತೆರವು ಮಾಡಿದ್ದಾರೆ.
ಖಾಜಿ ಮೊಹಲ್ಲಾದ ಝಂಡಾ ಕಟ್ಟೆ ಸರ್ಕಲ್ ಬಳಿಯಲ್ಲಿ ಔರಂಗಜೇಬ್ ಫ್ಲೆಕ್ಸ್ ಹಾಗೂ ಟಿಪ್ಪುವಿನ ಖಡ್ಗದ ಮಾದರಿಯಲ್ಲಿ ಅಳವಡಿಸಲಾಗಿತ್ತು.

ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟು, ಹಗಲು ರಾತ್ರಿ ಶ್ರಮಿಸುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post