ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ರಾತ್ರಿ ವೇಳೆ ಅಡಿಕೆ ಕಳ್ಳತನ ಮಾಡುತ್ತಿದ್ದ ಭದ್ರಾವತಿ ಮೂಲದ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನು ನಾಲ್ವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಎಸ್’ಪಿ ರಾಧಿಕಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಭದ್ರಾವತಿ ಮೂಲದ ಅಡಿಕೆ ಕಳ್ಳರನ್ನು ಬಂಧಿಸಿ ಅವರಿಂದ 17 ಅಡಿಕೆ ಮೂಟೆಗಳು ಹಾಗೂ ಬುಲೆರೋ ವಾಹನ ಸೇರಿದಂತೆ ಒಟ್ಟು 15 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಭದ್ರಾವತಿ ಮೂಲದ ಧನು ಅಲಿಯಾಸ್ ಧನಂಜಯ, ಗುಡ್ಡ ರಾಮ, ಚಿಟ್ಟೆ ಕೃಷ್ಣ, ಅಶೋಕ್ ಮತ್ತು ಕೃಷ್ಣ ಹಾಗೂ ಬುಲೆರೋ ವಾಹನದ ಚಾಲಕ ಒಟ್ಟು 6 ಜನ ಕಳ್ಳರಲ್ಲಿ ಇಬ್ಬರು ಮಾತ್ರ ಸಿಕ್ಕಿದ್ದು ಇನ್ನು ನಾಲ್ಕು ಜನರಿಗಾಗಿ ಹುಡುಕಾಟ ನಡೆದಿದೆ. ಇವರೆಲ್ಲರೂ ಕೂಡ ಹಗಲು ಸಮಯದಲ್ಲಿ ಬಂದು ಅಡಿಕೆ ವ್ಯಾಪಾರ ಮಾಡುವವರಂತೆ ಬಂದು ಎಲ್ಲವನ್ನು ನೋಡಿಕೊಂಡು ರಾತ್ರಿ ವೇಳೆಯಲ್ಲಿ ಬಂದು ಅಡಿಕೆ ಕಳುವು ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
(ವರದಿ: ಸುರೇಶ ಬೆಳಗೆರೆ, ಚಿತ್ರದುರ್ಗ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post