ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಭದ್ರಾ ನಾಲೆಯಲ್ಲಿ ಬಟ್ಟೆ ಸ್ವಚ್ಚಗೊಳಿಸಲು ತೆರಳಿ ನೀರಿನಲ್ಲಿ ಕಾಣೆಯಾಗಿದ್ದ ನಾಲ್ವರ ಪೈಕಿ ಓರ್ವನ ಶವ ಪತ್ತೆಯಾಗಿದೆ.
ಸುಮಾರು 24 ಗಂಟೆಗಳ ಕಾಲ ಹುಡುಕಾಟದ ಬಳಿ ನೀಲಬಾಯಿಯ ಪುತ್ರ ರವಿ ಎನ್ನುವವರ ಶವ ಪತ್ತೆಯಾಗಿದೆ.
ಕಾಲುವೆಯ ನೀರಿನ ಆಳದಲ್ಲಿ ರವಿ ಶವ ಪತ್ತೆಯಾಗಿದ್ದು, ಇನ್ನುಳಿದ ಮೂವರ ಶವಕ್ಕಾಗಿ ಶೋಧ ಕಾರ್ಯ ನಡೆದಿದೆ.
ಅಗ್ನಿಶಾಮಕ ದಳ, ಎನ್’ಡಿಆರ್’ಎಫ್ ತಂಡ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದ ನೇತೃತ್ವದಲ್ಲಿ ಶೋಧ ಕಾರ್ಯ ನಡೆದಿದೆ.
ಭದ್ರಾವತಿ ತಾಲೂಕಿನ ಅರೆಬಿಳಚಿ ಗ್ರಾಮದಲ್ಲಿ ನಿನ್ನೆ ಸಂಜೆ ಘಟನೆ ನಡೆದಿದ್ದು, ಬಟ್ಟೆ ಸ್ವಚ್ಚಗೊಳಿಸಲು ತೆರಳಿದ್ದ ಇಬ್ಬರು ಮಹಿಳೆಯರು ಹಾಗೂ ಅವರನ್ನು ರಕ್ಷಿಸಲು ತೆರಳಿದ್ದ ಇಬ್ಬರು ಪುರುಷರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕೊಚ್ಚಿ ಹೋದ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















