ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮಲೆನಾಡಿನ ಹೆಬ್ಬಾಗಿಲಿನ ಶಿವಮೊಗ್ಗ ಜಿಲ್ಲೆ ರಾಜಧಾನಿ ದಿಕ್ಕಿನಲ್ಲಿ ಆರಂಭವಾಗುವ ಭದ್ರಾವತಿ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರದಲ್ಲೇ ನೂರಾರು ವರ್ಷಗಳಿಂದ ಹೆಸರು ಮಾಡಿದ ಉಕ್ಕಿನ ನಗರಿ.
ಭದ್ರಾ ನದಿಯ ತಟದಲ್ಲಿರುವ ಭದ್ರಾವತಿ ಎಂಪಿಎಂ, ವಿಐಎಸ್’ಎಲ್, ಪುರಾಣ ಪ್ರಸಿದ್ದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ, ಭದ್ರಾ ಅಣೆಕಟ್ಟೆ ಸೇರಿದಂತೆ ಹಲವು ಕ್ಷೇತ್ರಗಳ ಮೂಲಕ ವಿಭಿನ್ನ ಹೆಸರು ಮಾಡಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಾ, ವಿಜೃಂಭಿಸುತ್ತಿದೆ.
ಇಂತಹ ಉಕ್ಕಿನ ನಗರಿ ಭದ್ರಾವತಿ ಸೌಂದರ್ಯ ಹಾಗೂ ಮಹತ್ವದ ಕುರಿತಾಗಿ ಇಂದು ಯೂಟ್ಯೂಬ್’ನಲ್ಲಿ ಬಿಡುಗಡೆಯಾಗಿರುವ ಹಾಡೊಂದು ಸೆನ್ಸೇಷನ್ ಕ್ರಿಯೇಟ್ ಮಾಡಿದೆ.‘ಭದ್ರಾವತಿ ಗೋಲ್ಡ್’ ಎಂಬ ಹೆಸರಿನ ಅದ್ಬುತವಾದ ಹಾಡೊಂಡು ಇಂದು ಯೂಟ್ಯೂಬ್’ನಲ್ಲಿ ರಿಲೀಸ್ ಆಗಿದ್ದು, ಇಡೀ ತಾಲೂಕಿನ ಸಮಗ್ರ ಚಿತ್ರಣವನ್ನು ಮನಮುಟ್ಟುವಂತೆ ಇದರಲ್ಲಿ ಚಿತ್ರಿಸಲಾಗಿದೆ.
Light House Pictures ಬ್ಯಾನರ್ ಅಡಿಯಲ್ಲಿ ಈ ಆಲ್ಬಂ ಹಾಡು ಹೊರ ಬಂದಿದ್ದು, ಮಂಜುನಾಥ್ ಎಸ್. ಜನ್ನಾಪುರ ಅವರು ನಿರ್ಮಾಣ ಮಾಡಿದ್ದಾರೆ.
ಸೂರಿ ಅಣಚುಕ್ಕಿ ಅವರು ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದು, ಮಂಜು ಮಹಾದೇವ್ ಅದ್ಬುತವಾಗಿ ಸಂಗೀತ ಸಂಯೋಜಿಸಿದ್ದಾರೆ. ಅನಿರುದ್ ಶಾಸ್ತ್ರಿ ಅವರು ಅಮೋಘವಾಗಿ ಈ ಗೀತೆಯನ್ನು ಹಾಡಿದ್ದಾರೆ.
ಭದ್ರಾವತಿ ತಾಲೂಕಿನ ನೈಸರ್ಗಿಕ ಸಂಪತ್ತು, ಧಾರ್ಮಿಕ ಮಹತ್ವ, ರಾಜಕೀಯ ಹಾಗೂ ಸಾಮಾಜಿಕ ಮಹತ್ವ, ಪ್ರತಿ ಬಡಾವಣೆಗಳು ಹಾಗೂ ಜನರ ಆಪ್ಯಾಯತೆ ಸೇರಿದಂತೆ ಇಡೀ ನಗರವನ್ನು ಅತ್ಯಂತ ಸುಂದರವಾಗಿ ಈ ಹಾಡಿನಲ್ಲಿ ಚಿತ್ರಿಸಲಾಗಿದ್ದು, ಭದ್ರಾವತಿಯ ಮಂದಿ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಸಹ ಈ ಒಂದು ಹಾಡು ನೋಡಿದರೆ ಉಕ್ಕಿನ ನಗರಿಯಲ್ಲೇ ಇರುವಂತಹ ಅನುಭವ ನೀಡುವ ರೀತಿಯಲ್ಲಿ ಅಮೋಘವಾಗಿ ಚಿತ್ರಿಸಲಾಗಿದೆ.
ನಮ್ಮ ಬೆಂಕಿಪುರವನ್ನು `ಭದ್ರಾವತಿ ಗೋಲ್ಡ್’ ಮೂಲಕ ಚಿತ್ರಿಸಿದ ಇಡೀ ತಂಡದ ಪ್ರಯತ್ನ ಅಭಿನಂದನೀಯ. ಸಮಸ್ತ ಭದ್ರಾವತಿ ಜನತೆಯ ಪರವಾಗಿ ಈ ತಂಡಕ್ಕೆ ಕಲ್ಪ ನ್ಯೂಸ್ ಅಭಿನಂದಿಸುತ್ತದೆ.
ಇಲ್ಲಿದೆ ನೋಡಿ ವೀಡಿಯೋ:
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post