ಭದ್ರಾವತಿ: ತಾಲೂಕಿನ ತಾಷ್ಕೆಂಟ್ ನಗರದ ವಾಸಿ ಕೆ.ಪಿ. ವನಿತಾ ರವರಿಗೆ ಎಂಎಸ್ಸಿ ಮೈಕ್ರೋ ಬಯಾಲಜಿ ಮಹಾಪ್ರಬಂಧಕ್ಕೆ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ದಾವಣಗೆರೆ ಬಾಪೂಜಿ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿಯ ಪ್ರೊಪೆಸರ್ ಡಾ.ಬಿ.ಇ. ರಂಗಸ್ವಾಮಿ ಮಾರ್ಗದರ್ಶನದಲ್ಲಿ ಸೂಕ್ಷ್ಮಜೀವಿಯ ಸೆಲ್ಯುಲೋಸ್ನ ಹುದಗಿಸುವ ಉತ್ಪಾದನೆ ಎಂಬ ಶೀರ್ಷಿಕೆ ಹೊಂದಿರುವ ಜೈವಿಕ ತಂತ್ರಜ್ಞಾನ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿರುವ ಇವರಿಗೆ ಬೆಳಗಾವಿಯ ವಿಶ್ವೇಶ್ವರಾಯ ತಾಂತ್ರಿಕ ಮಹಾವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇವರು ಕೆ.ಆರ್.ಪುಟ್ಟಸ್ವಾಮಿ ಹಾಗು ಭಾಗ್ಯಮ್ಮ ರವರ ಪುತ್ರಿಯಾಗಿದ್ದಾರೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

















