ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಹಳೇನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಅಭಿವೃದ್ಧಿಗಾಗಿ ಶಾಸಕರೂ, ಕೆ.ಎಲ್.ಆರ್.ಡಿ ಅಧ್ಯಕ್ಷರೂ ಆದ ಬಿ.ಕೆ. ಸಂಗಮೇಶ್ ಅವರು 4 ಲಕ್ಷ ರೂ. ಅನುದಾನ ನೀಡಿದ್ದಾರೆ.
ಕೆ.ಎಲ್.ಆರ್.ಡಿ ವತಿಯಿಂದ ರಾಘವೇಂದ್ರ ಸ್ವಾಮಿಗಳ ಮಠ ಹಾಗೂ ಭೂವರಾಹ ಸಮುದಾಯ ಭವನದ ಅಭಿವೃದ್ಧಿಗಾಗಿ 4 ಲಕ್ಷ ರೂ. ಅನುದಾನವವನ್ನು ನೀಡಿದ್ದಾರೆ.
ಶ್ರೀಮಠಕ್ಕೆ ಭೇಟಿ ನೀಡಿದ ಶಾಸಕರು ಅನುದಾನ ಕುರಿತಾಗಿ ದಾಖಲೆಗಳನ್ನು ನೀಡಿದರು. ಶ್ರೀಮಠಕ್ಕೆ ಭೇಟಿ ನೀಡಿದ ಶಾಸಕರಿಗೆ ಮಠದ ಅಧ್ಯಕ್ಷರಾದ ಮುರಳಿಧರ ತಂತ್ರಿ, ಉಪಾಧ್ಯಕ್ಷರಾದ ಸುಮ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್, ಶುಭ ಗುರುರಾಜ್, ಗೋಪಾಲಕೃಷ್ಣ ಆಚಾರ್ ಮತ್ತು ಸಮೀರಾಚಾರ್ ಅವರುಗಳು ಪ್ರಸಾದ ಕೊಟ್ಟು ಅವರಿಗೆ ಆಶೀರ್ವಾದ ಮಾಡಿದರು.
ಮಧ್ವ ಮಂಡಳಿಯ ಅಧ್ಯಕ್ಷರಾದ ಜಯತೀರ್ಥ, ಸುಧೀಂದ್ರ ವಿದ್ಯಾನಂದ ನಾಯಕ್, ಶೇಷಗಿರಿ, ಗೋಪಾಲಕೃಷ್ಣ ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post