ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಅಭಿವೃದ್ಧಿಯ ಹರಿಕಾರ, ಯುವಕರ ಕಣ್ಮಣಿ, ಜಿಲ್ಲೆಯ ನೆಚ್ಚಿನ ಸಂಸದ ಬಿ.ವೈ. ರಾಘವೇಂದ್ರರವರ ಹುಟ್ಟುಹಬ್ಬ ವಿಧಾನಸಭಾ ಕ್ಷೇತ್ರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಬಿ.ವೈ ರಾಘವೇಂದ್ರ ಅಭಿಮಾನಿಗಳ ಬಳಗದ ವತಿಯಿಂದ ಶನಿವಾರ ಅದ್ದೂರಿಯಾಗಿ ಜರುಗಿತು.
ಬಳಗದ ಸಂಚಾಲಕ, ಆನಂದ ಸಾಮಾಜಿಕ ಸೇವಾ ಸಂಸ್ಥೆ ಅಧ್ಯಕ್ಷ ಜಿ. ಆನಂದ ಕುಮಾರ್ ನೇತೃತ್ವದಲ್ಲಿ ಬೆಳಿಗ್ಗೆ ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಸಂಸದ ಬಿ.ವೈ. ರಾಘವೇಂದ್ರ ರವರ 53ನೇ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು.ಬಿಜೆಪಿ ಪಕ್ಷ ದ ಮಂಡಲ ನಗರ ಘಟಕದ ಅಧ್ಯಕ್ಷ ಜಿ. ಧರ್ಮಪ್ರಸಾದ್, ಗ್ರಾಮಾಂತರ ಘಟಕದ ಅಧ್ಯಕ್ಷ ಕೆ.ಎಚ್. ತೀರ್ಥಯ್ಯ, ಪಕ್ಷ ದ ಮುಖಂಡರಾದ ಕೂಡ್ಲಿಗೆರೆ ಹಾಲೇಶ್, ಮಂಗೋಟೆ ರುದ್ರೇಶ್, ಎಂ. ಮಂಜುನಾಥ್, ಮಹಿಳಾ ಅಧ್ಯಕ್ಷೆ ಸರಸ್ವತಮ್ಮ, ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ರಘುರಾವ್, ಅಣ್ಣಪ್ಪ, ಹನುಮಂತನಾಯ್ಕ, ಎಚ್.ಎಸ್. ಸುಬ್ರಹ್ಮಣ್ಯ, ಕೃಷ್ಣ ಛಲವಾದಿ, ರವಿಕುರ್ಮಾ, ನರೇಂದ್ರ, ರಾಜು ರೇವಣಕರ್, ಕಾ.ರಾ. ನಾಗರಾಜ್, ಓಬಿಸಿ ರಾಜ ಮೆಡಿಕಲ್, ಮೋಹನ್, ಕಲ್ಲು ಮಂಜು, ಭವಾನಿ, ಯೋಗಿ(ಗ್ಯಾಸ್), ಅರುಣ ಬಾದ್ರಿ, ತಿಪ್ಪಣ್ಣ, ದೊಡ್ಡಮನೆ ನಾರಾಯಣ, ಎಂ.ಎಸ್ ಸುರೇಶಪ್ಪ, ಯೋಗಿ(ಲಾರಿ), ಕೊಮಾರನಹಳ್ಳಿ ರವಿಕುಮಾರ್, ನಂಜಪ್ಪ ಗೌಡ್ರು, ಪ್ರಕಾಶಣ್ಣ, ಹರೀಶ್ ತರುಣ ಭಾರತಿ, ರಾಮಚಂದ್ರ ಹಾಗೂ ಪಕ್ಷ ದ ಕಾರ್ಯಕರ್ತರು ಮತ್ತು ದೇವಸ್ಥಾನದ ಸಮಿತಿ ಸದಸ್ಯರಾದ ಸತ್ಯವತಿ, ಅಕ್ಕಿ ಬಾಬು, ಶೇಖರಪ್ಪ, ನಾಗರಾಜ್, ವೆಂಕಟೇಶ್, ಮುರುಗನ್, ಸಂತೋಷ ಹಾಗೂ ಭಕ್ತರು ಉಪಸ್ಥಿತರಿದ್ದರು. ದೇವಸ್ಥಾನದ ಅರ್ಚಕ ಸಂತೋಷ್ ಅವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post