ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವಿಐಎಸ್’ಎಲ್ ಕಾರ್ಖಾನೆಯಲ್ಲಿ ಇನ್ಮುಂದೆ ಆನ್ ಲೈನ್ ಗೇಟ್ ಎಂಟ್ರಿ ಸಿಸ್ಟಂ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಕಾರ್ಖಾನೆಯ ವ್ಯವಸ್ಥೆ ಸುಧಾರಣೆ ಮತ್ತು ಡಿಜಿಟಲೀಕರಣದ ಅಂಗವಾಗಿ ಆನ್ ಲೈನ್ ಗೇಟ್ ಎಂಟ್ರಿ ಸಿಸ್ಟಂ ಅನ್ನು ಕಾರ್ಯಪಾಲಕ ನಿರ್ದೇಶಕರಾದ ಬಿ.ಎಲ್. ಚಂದ್ವಾನಿ ಅವರು ವಿಐಎಸ್’ಎಲ್ ಮುಖ್ಯದ್ವಾರದಲ್ಲಿರುವ ಭದ್ರಾತಾ ಕಚೇರಿಯ ಬಳಿ ಉದ್ಘಾಟಿಸಿದರು.
ಮಹಾಪ್ರಬಂಧಕರು (ಎಚ್.ಆರ್ ಮತ್ತು ಸಾರ್ವಜನಿಕ ಸಂಪರ್ಕ) ಪ್ರಭಾರಿ ಸೆಕ್ಯೂರಿಟಿ ಎಲ್. ಪ್ರವೀಣ್ ಕುಮಾರ್, ಸಹಾಯಕ ಮಹಾಪ್ರಬಂಧಕರಾ(ಕಂಪ್ಯೂಟರ್ ಮತ್ತು ಐಟಿ) ನಿತಿನ್ ಜೋಶ್, ಸಹಾಯಕ ಮಹಾಪ್ರಬಂಧಕರಾದ(ವಿಜಿಲೆನ್ಸ್) ಕುಥಲನಾಥನ್, ಉಪಪ್ರಬಂಧಕರಾದ(ಎಚ್.ಆರ್.) ಕೆ.ಎಸ್. ಶೋಭಾ, ಕಿರಿಯ ಪ್ರಬಂಧಕರಾದ(ಎಚ್.ಆರ್-ಎಚ್.ಆರ್.ಎಲ್.ಡಿ) ಎಂ.ಎಲ್. ಯೋಗೀಶ್, ಇಂಜಿಯರಿಂಗ್ ಅಸೋಸಿಯೇಟ್ಸ್(ಕಂಪ್ಯೂಟರ್ ಐಟಿ) ಯಶವಂತಾಚಾರ್, ಭದ್ರತಾ ವಿಭಾಗದ ಅಸೋಸಿಯೇಟ್ಸ್ ರೇವಣಪ್ಪ ಮೂಡಿ ಹಾಗೂ ಭದ್ರತಾ ವಿಭಾಗದ ಇತರರು ಇದ್ದರು.
ಈ ಎರಡು ಚಟುವಟಿಕೆಗಳನ್ನು ವಿಐಎಸ್’ಎಲ್‌ನ ಮಾನವ ಸಂಪನ್ಮೂಲ ವಿಭಾಗ ಮತ್ತು ಭದ್ರತಾ ವಿಭಾಗಗಳು ಸಂಯೋಜಿಸಿವೆ.
ಇನ್ನು, ಈ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ಕಾರ್ಯಪಾಲಕ ನಿರ್ದೆಶಕ ಬಿ.ಎಲ್. ಚಂದ್ವಾನಿ ಅವರು ಗುತ್ತಿಗೆ ಕಾರ್ಮಿಕರ ಸಹಾಯ ಕೇಂದ್ರವನ್ನು ಉದ್ಘಾಟಿಸಿದರು.
ಗುತ್ತಿಗೆ ಕಾರ್ಮಿಕರ ಸಹಾಯ ಕೇಂದ್ರವು ಗುತ್ತಿಗೆ ಕಾರ್ಮಿಕರ ಕುಂದು-ಕೊರತೆಗಳು, ಸಮಸ್ಯೆಗಳನ್ನು ಸಮಯಕ್ಕೆ ಅನುಗುಣವಾಗಿ ವ್ಯವಸ್ಥಿತ ರೀತಿಯಲ್ಲಿ ಪರಿಹರಿಸುವ ಗುರಿಯನ್ನು ಹೊಂದಿದೆ, ಈ ಕೇಂದ್ರದ ಮೇಲ್ವಿಚಾರಣೆಯನ್ನು ವಿಐಎಸ್’ಎಲ್ ಮಾನವ ಸಂಪನ್ಮೂಲ ಇಲಾಖೆಯು ಮಾಡುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















Discussion about this post