ಭದ್ರಾವತಿ: ತಾಲೂಕು ಗ್ರಾಮಾಂತರ ವ್ಯಾಪ್ತಿಯ ಎಚ್.ಕೆ. ಜಂಕ್ಷನ್ ಚೆಕ್ ಪೋಸ್ಟ್ ನಲ್ಲಿ ಮಂಗಳವಾರ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು ಐವತ್ತು ಸಾವಿರದ ನಾಲ್ಕು ನೂರ ಐವತ್ತು ರೂಗಳನ್ನು ಜಪ್ತಿ ಮಾಡಿ ತಾಲ್ಲೂಕು ಖಜಾನೆಗೆ ಒಪ್ಪಿಸಲಾಗಿದೆ.
ಕೊಪ್ಪ ತಾಲೂಕಿನ ಕುದುರೆಗುಂಡಿ ವಾಸಿ ರಾಮಚಂದ್ರ ಎಂಬುವವರು ಟಾಟಾ ಏಸ್ ವಾಹನ ಸಂಖ್ಯೆ ಕೆ.ಎ.18- 0885 ವಾಹನದಲ್ಲಿ ಕೊಪ್ಪದಿಂದ ತಾಲೂಕಿನ ಅರಳಿಕೊಪ್ಪ ಗ್ರಾಮಕ್ಕೆ ರಾಸುಗಳನ್ನು ಕೊಂಡುಕೊಳ್ಳುವ ಸಲುವಾಗಿ ಹೊಗುತ್ತಿರುವುದಾಗಿ ತಿಳಿಸಿದ್ದಾರೆ. ಚುನಾವಣಾ ಎಸ್‌ಎಸ್‌ಟಿ-2 ತಂಡದ ನಗರಸಭಾ ಇಂಜಿನಿಯರಿಂಗ್ ಸತೀಶ್ ಇವರ ನೇತೃತ್ವದ ತಂಡ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಕಾಗದನಗರ ವ್ಯಾಪ್ತಿಯ ಕಾರೇಹಳ್ಳಿ ಚೆಕ್ ಪೋಸ್ಟ್
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಗದ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಾರೇಹಳ್ಳಿ ಗ್ರಾಮದ ಚೆಕ್ ಪೋಸ್ಟ್ ಮಂಗಳವಾರ ಎಸ್‌ಎಸ್‌ಟಿ-2 ಹಾಗು ಎಫ್‌ಎಸ್‌ಟಿ-2 ಅಧಿಕಾರಿಯಾದ ರಾಜಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಅನೀಲ್ ಕುಮಾರ್ ಮತ್ತು ಉಮೇಶ್ ನಾಯ್ಕ ಇವರುಗಳು ವಾಹನ ತಪಾಸಣಾ ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಬೆಂಗಳೂರಿನಿಂದ ಉಡುಪಿ ತೆರಳುತ್ತಿದ್ದ ಕೆ.ಎ.20 ಎನ್ 9821 ಮಾರುತಿ ಸ್ವಿಫ್ಟ್ ಕಾರಿನ್ನು ತಪಾಸಣೆಗೆ ಒಳಪಡಿಸಿದಾಗ 55 ಸಾವಿರ ರೂ ಹಣ ವಶ ಪಡಿಸಿಕೊಂಡಿದ್ದಾರೆ.
ಈ ಸಂಬಂಧ ವಾಹನ ಚಾಲಕ ಶ್ರೀನಿವಾಸನನ್ನು ವಿಚಾರಣೆಗೆ ಒಳಪಡಿಸಿದಾಗ ಬೆಂಗಳೂರಿನಿಂದ ಉಡುಪಿಗೆ ತೆರಳುತ್ತಿರುವುದಾಗಿ ತಿಳಿಸಿರುತ್ತಾರೆ. ಮತ್ತೊಂದು ಪ್ರಕರಣದಲ್ಲಿ ಕೆ.ಎ.12 ಜಡ್ 8012 ಆಲ್ಟೋಕಾರನ್ನು ತಪಾಸಣೆ ಮಾಡಲಾಗಿ ಹನ್ನೆರಡು ಸಾವಿರದ ಒಂಬೈನೂರು ರೂ ನಗದು ದೊರೆತ್ತಿದ್ದು ವಾಹನ ಚಾಲಕ ಶ್ರೀನಿವಾಸನನ್ನು ವಿಚಾರಣೆ ಮಾಡಿದಾಗ ತರೀಕೆರೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ವಶ ಪಡಿಸಿಕೊಂಡ ಹಣವನ್ನು ತಾಲೂಕು ಚುನಾವಣಾಧಿಕಾರಿಗಳ ಸಮಕ್ಷಮದಲ್ಲಿ ಖಜಾನೆಯಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿರುತ್ತದೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

















