ಭದ್ರಾವತಿ: ಕೇಂದ್ರದಲ್ಲಿ ನರೇಂದ್ರ ಮೋದಿ 2ನೇ ಬಾರಿಗೆ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ ಹಿನ್ನಲೆಯಲ್ಲಿ ನಗರದ ಮೋದಿ ಅಭಿಮಾನಿಗಳಿಂದ ಕೇಸರಿ ಬಣ್ಣದ ಲಾಡು ಉಂಡೆಯನ್ನು ಹಂಚಿ ಸಂತಸ ವ್ಯಕ್ತಪಡಿಸಿದರು.
ನಗರದ ಮೋದಿ ಅಭಿಮಾನಿಗಳು ನ್ಯಾಯಾಲಯದ ಆವರಣದಲ್ಲಿದ್ದ ಕಕ್ಷೀದಾರರಿಗೆ, ವಕೀಲರಿಗೆ, ಸಿಬ್ಬಂದಿಗಳಿಗೆ ಲಾಡು ಉಂಡೆ ಹಂಚಿದ ನಂತರ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಸೋಮಶೇಖರ್, ತಾಪಂ ಕಾರ್ಯನಿರ್ವಹಣಾಧಿಕಾರಿ ತಮ್ಮೇಗೌಡ, ಸಮಾಜಕಲ್ಯಾಣ ಇಲಾಖೆಯ ಸಿಬ್ಬಂದಿಗಳಿಗೆ ಸಾರ್ವಜನಿಕರಿಗೆ ಸಿಹಿ ಹಂಚಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಧರ್ಮಪ್ರಸಾದ್, ಮಧು, ಕುಮಾರ್, ವಕೀಲರಾದ ಕೆ.ಎನ್. ಶ್ರೀಹರ್ಷ, ಮಗೇಶ್‍ಬಾಬು, ಹೆಚ್.ಎಲ್.ವಿಶ್ವನಾಥ್, ಧನುಷ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post