ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಇಂದು ಸೋಂಕು ಪತ್ತೆಯಾದ ಲೋಯರ್ ಹುತ್ತಾದ 40 ವರ್ಷದ ನಿವಾಸಿ, ತಾಲೂಕು ಸಾರ್ವಜನಿಕ ಆಸ್ಪತ್ರೆಯಿಂದ ತೆರಳಿದ್ದು, ತಾವೇ ಸ್ವಯಂ ಪ್ರೇರಿತರಾಗಿ ಶಿವಮೊಗ್ಗದ ನಾರಾಯಣ ಹೃದಯಾಲಯಕ್ಕೆ ದಾಖಲಾಗಿದ್ದಾರೆ.
ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ ಎಂಬ ಕುರಿತಾಗಿ ಆರೋಗ್ಯ ಇಲಾಖೆಯಿಂದ ದೊರೆತ ಮಾಹಿತಿ ಆಧರಿಸಿ ಈ ಮೊದಲು ಸುದ್ದಿ ಪ್ರಕಟಿಸಲಾಗಿತ್ತು. ಆದರೆ, ಈ ಸುದ್ದಿಯನ್ನು ಗಮನಿಸಿದ ಅವರ ಸ್ನೇಹಿತರು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾವನ್ನು ಸಂಪರ್ಕಿಸಿ ಸ್ಪಷ್ಟೀಕರಣ ನೀಡಿದ್ದು, ಅವರು ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೇರೆಲ್ಲೂ ಹೋಗಿಲ್ಲ ಎಂದು ದಾಖಲೆ ಸಹಿತ ಮಾಹಿತಿ ನೀಡಿದ್ದಾರೆ.
ಇನ್ನು, ಸದರಿ ಸೋಂಕಿತ ವ್ಯಕ್ತಿಯೇ ಕಲ್ಪ ನ್ಯೂಸ್ ಸಂಪಾದಕರೊಂದಿಗೆ ಮಾತನಾಡಿದ್ದು, ತಾವು ಆರೋಗ್ಯದ ದೃಷ್ಠಿಯಿಂದ ಭಯಗೊಂಡು ಅಲ್ಲಿಂದ ತೆರಳಿದೆ. ತಮಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಎಂದು ವಿನಂತಿಸಿದೆ. ಆದರೆ, ಸದ್ಯಕ್ಕೆ ಅದು ಸಾಧ್ಯವಿಲ್ಲ ಎಂದು ಹೇಳಿದ ಕಾರಣದಿಂದ ನಾನೇ ನೇರವಾಗಿ ಬಂದು ನಾರಾಯಣ ಹೃದಯಾಲಯಕ್ಕೆ ದಾಖಲಾಗಿದ್ದೇನೆಯೇ ಹೊರತು ಯಾವುದೇ ದುರುದ್ದೇಶಪೂರ್ವಕವಾಗಿ ಬೇರೆಲ್ಲೂ ಹೋಗಿಲ್ಲ. ನನ್ನಿಂದ ಬೇರೆ ಯಾರಿಗೂ ಸೋಂಕು ಹರಡದೇ ಇರಲಿ ಹಾಗೂ ನನ್ನಲ್ಲಿ ಆದಂತಹ ಆತಂಕದಿಂದಾಗಿ ಅಲ್ಲಿಂದ ಹೊರಟೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಕಲ್ಪ ನ್ಯೂಸ್’ಗೆ ಸ್ವತಃ ಸೋಂಕಿತ ವ್ಯಕ್ತಿಯೇ ಒದಗಿಸಿರುವ ಫೋಟೋ ಹಾಗೂ ಅಡ್ಮಿಷನ್ ಆಗಿರುವ ಚೀಟಿಗಳ ಆಧಾರದಂತೆ ಅವರು ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post