ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನವರಾತ್ರಿ ಸಂಭ್ರಮಕ್ಕೆ ಹೆಚ್ಚಿನ ಮೆರುಗು ನೀಡುವ ಸಂಪ್ರದಾಯ ಗೊಂಬೆ ಅಲಂಕಾರ. ವಿಜಯನಗರ ಸಾಮ್ರಾಜ್ಯ ಕಾಲದಿಂದಲೂ ಗೊಂಬೆ ಅಲಂಕಾರ ಮಾಡುವ ಪದ್ದತಿ ಇತ್ತೆಯಂದು ಹೇಳಲಾಗಿದ್ದು, ಮೈಸೂರು ಅರಸರ ಕಾಲದಿಂದ ಇದು ವೈಭವಯುತವಾಗಿ ನಡೆದುಕೊಂಡು ಬಂದಿದೆ. ಇಂತಹ ಒಂದು ಆಚರಣೆಯಲ್ಲಿ ನಗರದ ಈ ಮನೆಯಲ್ಲಿ ಸುಮಾರು 24 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ.
ಹೌದು.. ನ್ಯೂ ಕಾಲೋನಿಯಲ್ಲಿ ವಾಸವಾಗಿರುವ ಶ್ರೀಮತಿ. ಕುಸುಮ ಮತ್ತು ಉಮೇಶ್ ಅವರ ಮನೆಯಲ್ಲಿ ಕಳೆದ 24 ವರ್ಷಗಳಿಂದ ದಸರಾ ಗೊಂಬೆಗಳನ್ನು ಇಡುತ್ತಿದ್ದು, ವಿಭಿನ್ನವಾಗಿ ಅಲಂಕಾರ ಮಾಡುವ ಇವರ ಮನೆ ದಸರಾದಲ್ಲಿ ಆಕರ್ಷಣೆಯ ಕೇಂದ್ರ ಬಿಂದು.
ಶಿವಮೊಗ್ಗ ನ್ಯಾಯಾಲಯದಲ್ಲಿ ಕುಸುಮರವರು ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ಬು ತಂದೆ ತಾಯಿಯಿಂದ ಈ ಸಂಸ್ಕೃತಿಯನ್ನು ಕಲಿತಿದ್ದಾರೆ. ಓದುತ್ತಿರುವಾಗಲೂ ಸಹ ತಂದೆ ತಾಯಿಯವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಿಂದ ಗೊಂಬೆಗಳನ್ನು ಕೂರಿಸುತ್ತಿದ್ದಾರೆ.ಮದುವೆಯಾದ ನಂತರ ಅತ್ತೆಯವರಾದ ಶ್ರೀಮತಿ ನಾಗರತ್ನ ಅವರ ಮಾರ್ಗದರ್ಶನದಲ್ಲಿ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಕುಸುಮರವರ ಪತಿ ಉಮೇಶ್ ರವರು ವೆಸ್ಟೀಜ್ ಹೆಲ್ತ್ ಕೇರ್’ನಲ್ಲಿ ಉದ್ಯೋಗಿಯಾಗಿದ್ದು ಅವರ ಅಜ್ಜ ಅಜ್ಜಿಯವರಿಂದ ಗೊಂಬೆ ಕೂರಿಸುವ ಸಂಪ್ರದಾಯವನ್ನು ಕಲಿತಿದ್ದಾರೆ. ಆದ್ದರಿಂದ ಅವರಿಗೂ ಇದರಲ್ಲಿ ಆಸಕ್ತಿ ಇರುತ್ತದೆ. ಮಕ್ಕಳಾದ ಸ್ಕಂದ ಭಾರದ್ವಾಜ್ ರವರು ಈ ವರ್ಷ ಚಿತ್ರದುರ್ಗ ದ ಕಲ್ಲಿನ ಕೋಟೆ, ಸಂಪೂರ್ಣ ರಾಮಾಯಣ, ಆಪರೇಶನ್ ಸಿಂಧೂರ, ಶೃಂಗೇರಿ ಶಾರದಾಂಬ ಇನ್ನು ಹಲವಾರು ವಿಚಾರ ಧಾರೆಯನ್ನು ಗೊಂಬೆಗಳ ಮೂಲಕ ಪರಿಚಯಿಸಿದ್ದಾರೆ.
ಸ್ಕಂದ ಭಾರದ್ವಾಜ್ ಮತ್ತು ಸ್ತುತಿ ಭಾರದ್ವಾಜ್ ಅವರು ಶ್ರೀ ಕೃಷ್ಣನ ಬಾಲ ಲೀಲೆಗಳನ್ನು ಹಂತ ಹಂತವಾಗಿ ಜೋಡಿಸಿದ್ದಾರೆ. ಗೊಂಬೆ ಇಡುವ ಈ ಕಾರಣದಲ್ಲಿ ಮಕ್ಕಳೂ ಸಹ ತುಂಬಾ ಆಸಕ್ತಿಯಿಂದ ಸಹಕರಿಸುತ್ತಾರೆ. ಈ ವರ್ಷ ಇವರ ಮನೆಯಲ್ಲಿ ಸರಿ ಸುಮಾರು 58 ಕ್ಕೂ ಹೆಚ್ಚು ವಿಧದ ಗೊಂಬೆಗಳನ್ನು ಕೂರಿಸಿರುತ್ತಾರೆ.
ಕುಸುಮ ಉಮೇಶ್ ದಂಪತಿಗಳಬ್ಬರೂ ಸಹ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬಂದಿದ್ದು, ಮನೆಗೆ ಬರುವವರಿಗೆ ಅಷ್ಟೇ ಸಮಾಧಾನವಾಗಿ ವಿವರಿಸುತ್ತಾರೆ. ಇದನ್ನು ವೀಕ್ಷಿಸಲು ನೂರಾರು ಜನ ಪ್ರತಿನಿತ್ಯ ಇವರ ಮನೆಗೆ ಬರುತ್ತಾರೆ.ಈ ಬಾರಿ ಯಾವೆಲ್ಲಾ ಅಲಂಕಾರ
1.ನೂರು ವರ್ಷ ಹಳೆಯದಾದ ಪಟ್ಟದ ಗೊಂಬೆ
2.ಅಷ್ಠ ಲಕ್ಷ್ಮಿ ಯರು
3.ನವದುರ್ಗೆಯರು
4.ವಿಷ್ಣುವಿನ ದಶಾವತಾರ
5.ಭದ್ರಾವತಿಯ ಲಕ್ಷ್ಮಿ ನರಸಿಂಹಸ್ವಾಮಿ
6.ರಾವಣ ಆತ್ಮಲಿಂಗ ಪಡೆದಿದ್ದು
7.ರುಕ್ಮಿಣಿ ಪಾಂಡುರಂಗ
8.ತಿರುಪತಿ ಪದ್ಮಾವತಿ
9.ವೆಂಕಟರಮಣ
10.ಭೂ ವೈಕುಂಠ
11.ಅರ್ಜುನನಿಗೆ ಸಾರತಿಯಾದ ಶ್ರೀಕೃಷ್ಣ
12 .ಅರ್ಜುನನಿಗೆ ವಿಶ್ವರೂಪ ದರ್ಶನ
13 ಆಚಾರ್ಯತ್ರಯರು
14.ಕೈಲಾಸ
15.ತ್ರಿಶಕ್ತಿ
16.ಲಲಿತಾ ದೇವಿ
17.ಹಾಲು ಮೊಸರು ಬೆಣ್ಣೆಗಾಗಿ ಕಾಡುತ್ತಿರುವ ಕೃಷ್ಣ
18.ಅಯೋಧ್ಯಯಲ್ಲಿ ಶ್ರೀ ರಾಮನ ಪಟ್ಟಾಭಿಷೇಕ
19 ವಿಜಯನಗರ ವೈಭವ
20 ಪೂರ್ಣ ಪ್ರಜ್ಞಾ ವಿದ್ಯಾ ಸಂಸ್ಥೆ
21.ರೈತನೇ ದೇಶದ ಬೆನ್ನೆಲುಬು
22.ಹಳ್ಳಿಮನೆ ಸೊಗಡು
23. ಭಕ್ತೆ ಮೀರಾ
24.ಶಿರಡಿ ಸಾಯಿಬಾಬ
25.ಸಂಗೀತ ವಾದ್ಯಗಳು
26.ಬುದ್ಧ ಗೋಲ್ಡನ್ ಟೆಂಪಲ್
27.ಹಳೆಯ ಕಾಲದ ಅಡುಗೆ ಮನೆ
28.ಆರೋಗ್ಯಧಾಮ
29 ಹೋಟೆಲ್ ಪದ್ಮ ನಿಲಯ
30 ಗುಡವಿ ಪಕ್ಷಿಧಾಮ
31.ತ್ಯಾವರೆಕೊಪ್ಪ ಹುಲಿ ಸಿಂಹಧಾಮ
32.ಸಕ್ರೆಬೈಲು ಆನೆಬಿಡಾರ
33.ಭದ್ರಾ ಅಭಯಾರಣ್ಯ
34.ಪುಣ್ಯಕೋಟಿ
35.ಭಾರತದ ವೀರಯೋಧ
36.ಹಳ್ಳಿ ಆಟಗಳು
37.ಕ್ರಿಕೆಟ್
38 ಮೈಸೂರಿನ ದಸರಾ ಮೆರವಣಿಗೆ
39.ಬೃಂದಾವನ್ ಗಾರ್ಡನ್
40.ಶ್ರೀ ಕೃಷ್ಣನ ಲೀಲೆಗಳು
41.ISHA FOUNDATION
42.ಭಾರತರತ್ನ ಎ ಪಿ ಜೆ ಅಬ್ದುಲ್ ಕಲಾಂ
43.ಆಧುನಿಕ ಅಡುಗೆಮನೆ
44. Vestige Car Achievers
45 ಉತ್ತರ ಭಾರತ ಪ್ರವಾಸ ತಾಣಗಳು
46. ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು
47. ಮತ್ಸ್ಯ ಪ್ರದರ್ಶನ
48 ಗಾಣಗಪುರ ದತ್ತಾತ್ರೇಯ
49 ಮೈಸೂರಿನ ಚಾಮುಂಡಿ ಬೆಟ್ಟ
50. ಶ್ರೀರಂಗಪಟ್ಟಣ
51.ಚಂದ್ರಯಾನ್ 3
52.ನಾಗರಾಜ್ ಪ್ರಾವಿಶನ್ಸ್ ಸ್ಟೋರ್
53 Ashok Jewellery
54. Madhu Textiles
55. ಶೃಂಗೇರಿ ಶಾರದಾಂಬ
56.ಸಂಪೂರ್ಣ ರಾಮಾಯಣ
57. ನಂಜನಗೂಡು
58. ಚಿತ್ರದುರ್ಗದ ಕಲ್ಲಿನಕೋಟೆ
59. Operation Sindhoor
60. ನಂದಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post