ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವಾಹನ ಸವಾರರಿಗೆ ಸುರಕ್ಷಿತವಲ್ಲದ, ತಾವು ವಶ ಪಡಿಸಿಕೊಂಡಿರುವ ಸಾವಿರಾರು ಕಳಪೆ ಗುಣಮಟ್ಟದ ಹೆಲ್ಮೆಟ್’ಗಳನ್ನು #Helmet ಪೊಲೀಸರು ನಾಶ ಮಾಡಿದರು.
ವಾಹನ ಸವಾರರು ಧರಿಸಿದ್ದ ಸುರಕ್ಷಿತವಲ್ಲದ ಹೆಲ್ಮೆಟ್’ಗಳನ್ನು ಪೊಲೀಸರು #Police ವಶಪಡಿಸಿಕೊಂಡಿದ್ದರು.
Also Read>> ಮಂಡ್ಯ | ಜಿಲೆಟಿನ್ ಸ್ಫೋಟಿಸಿಕೊಂಡು ಯುವಕ ಭೀಕರ ಆತ್ಮಹತ್ಯೆ | ದೇಹ ಛಿದ್ರ-ಛಿದ್ರ | ಕಾರಣವೇನು?
ಸಾರ್ವಜನಿಕರಿಗೆ ಸಂಚಾರಿ ನಿಯಮಗಳ ಕುರಿತಾಗಿ ಜಾಗೃತಿ ಮೂಡಿಸಲು ಹಾಗೂ ಸುರಕ್ಷಿತವಾಗಿರುವ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸುವ ಸಲುವಾಗಿ ಸಾರ್ವಜನಿಕವಾಗಿಯೇ ಕಳಪೆ ಹೆಲ್ಮೆಟ್’ಗಳನ್ನು ನಾಶ ಮಾಡಲಾಯಿತು.
ನಗರದ ರಂಗಪ್ಪ ಸರ್ಕಲ್’ನಲ್ಲಿ ಸಾವಿರಾರು ಕಳಪೆ ಗುಣಮಟ್ಟದ ಹೆಲ್ಮೆಟ್’ಗಳನ್ನು ರಾಶಿ ಹಾಕಿ, ಗುಲ್ಡೋಜರ್ ಮೂಲಕ ಅವುಗಳನ್ನು ನಾಶ ಮಾಡಲಾಯಿತು.
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಎಷ್ಟು ಮುಖ್ಯ, ಅದರಲ್ಲೂ ಗುಣಮಟ್ಟದ ಹೆಲ್ಮೆಟ್ ಧರಿಸುವುದು ಅತೀ ಮುಖ್ಯ. ವಾಹನ ಚಾಲನೆ ವೇಳೆ ತಪ್ಪದೇ ಹೆಲ್ಮೆಟ್ ಧರಿಸಬೇಕು ಎಂಬ ಕುರಿತಾಗಿ ಸಾರ್ವಜನಿಕರಿಗೆ ಪೊಲೀಸರು ಜಾಗೃತಿ ಮೂಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post