ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
ಜಿಲ್ಲೆಯ ಭರಮಸಾಗರ ಗ್ರಾಮದಲ್ಲಿ ಜನರೇಶನ್ ಅರೇನಾ ಯುನಿಸೆಕ್ಸ್ ಫಿಟ್ನೆಸ್ ಕ್ಲಬ್ ನ.5ರ ದೀಪಾವಳಿ ದಿನದಂದು ಉದ್ಘಾಟನೆಯಾಗಲಿದೆ.
ಅಧುನಿಕ ಸಲಕರಣೆ, ಸ್ಟ್ರಿಂಗ್, ಕಾರ್ಡಿಯೋ ಕ್ರಾಸ್ಟ್ರೈಟ್, ವೈಯಕ್ತಿಕ ತರಬೇತಿ, ಸಪ್ಲಿಮೆಂಟ್ ಸ್ಟೋರ್, ಆಹಾರ ಮಾರ್ಗ ಸೂಚಿಗಳು ವೈಶಿಷ್ಟ್ಯ ಸೇವೆಗಳೂಂದಿಗೆ ಪುರುಷ ಮತ್ತು ಸ್ತ್ರೀಯರಿಗೆ ಮೀಸಲಾದ ಸಮಯಗಳಲ್ಲಿ, ಮಾರಣಾಂತಿಕ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡೋಣ ಎಂಬ ವಾಕ್ಯದೊಂದಿಗೆ ಪ್ರಾರಂಭವಾಗಲಿದೆ.
ನಾಳೆ ಮುಂಜಾನೆ 9 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಹೊಳೆಲ್ಕೆರೆ ಶಾಸಕ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಎಂ. ಚಂದ್ರಪ್ಪ ಅವರು ಈ ಕ್ಲಬ್ ಅನ್ನು ಉದ್ಘಾಟಿಸಲಿದ್ದಾರೆ.
ಜಿ.ಎ. ಚಂದನ್ ಅವರು ಕ್ಲಬ್ ಮಾರ್ಗದರ್ಶಕರಾಗಿದ್ದು, ಇವರು ಗೋಲ್ಡ್ ಜಿಮ್ ಮತ್ತು ಸಿಪಿಡಿ ಸರ್ಟಿಪೈಡ್ ಪರ್ಸನಲ್ ಇನ್ಸ್ಟ್ರಕ್ಟರ್ ಆಗಿರುತ್ತಾರೆ. ಸಿ.ಜಿ. ಅಶೋಕ್ ಅವರು ಇದರ ಮಾಲೀಕರಾಗಿದ್ದು, ದೀಪಾವಳಿಯನ್ನು ಫಿಟ್ನೆಸ್’ನೊಂದಿಗೆ ಆಚರಿಸಿ, ಜನರೇಶನ್ ಅರೇನಾ ಯುನಿಸೆಕ್ಸ್ ಫಿಟ್ನೆಸ್ ಕ್ಲಬ್’ಗೆ ಶುಭವಾಗಲಿ.
(ವರದಿ: ಮುರುಳೀಧರ್ ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post