ನವದೆಹಲಿ: ಲೋಕಸಭಾ ಚುನಾವಣೆ ಸನಿಹದಲ್ಲೆ ಇರುವ ಬೆನ್ನಲ್ಲೆ ಆಡಳಿತ ಪಕ್ಷ ಬಿಜೆಪಿಯ ಅಧಿಕೃತ ವೆಬ್’ಸೈಟನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿರುವ ಘಟನೆ ನಡೆದಿದೆ.
ಮಂಗಳವಾರ ಬೆಳಿಗ್ಗೆ 11.30ರ ಸುಮಾರಿಗೆ ಹ್ಯಾಕರ್ಸ್ ಗಳು ಬಿಜೆಪಿ ಜಾಲತಾಣವನ್ನು ಹ್ಯಾಕ್ ಮಾಡಿದ್ದಾರೆ. ಆದರೆ ಇದುವರೆಗೆ ಈ ಸಂಬಂದ ಪಕ್ಷದ ನಾಯಕರಾರೂ ದೂರು ಸಲ್ಲಿಸಿಲ್ಲ. ಆದರೆ ಈ ಕುರಿತಂತೆ ಕಾರ್ಯಕರ್ತರಿಗೆ ಹೇಳಿಕೆ ನೀಡಿರುವ ಪಕ್ಷ, ಯಾರೂ ಗಾಬರಿಯಾಗಬೇಕಾದ ಅಗತ್ಯವಿಲ್ಲ. ನಮ್ಮ ಐಟಿ ತಂಡ ತಾಂತ್ರಿಕ ಸಮಸ್ಯೆಯನ್ನು ಪರಿಹಾರ ಮಾಡಲು ಪ್ರಯತ್ನಿಸುತ್ತಿದೆ. ಶೀಘ್ರದಲ್ಲೆ ವೆಬ್’ಸೈಟ್ ಮತ್ತೆ ನಿಮ್ಮ ಮುಂದೆ ಬರಲಿದೆ ಎಂದು ಹೇಳಿದೆ.
ಭಾರತ ಹಾಗೂ ಪಾಕಿಸ್ಥಾನ ನಡುವಿನ ವಿವಾದಗಳು ಭುಗಿಲೆದ್ದ ಬೆನ್ನಲ್ಲೆ ಪಾಕಿಸ್ಥಾನದ ಅಧಿಕೃತ ವೆಬ್’ಸೈಟ್’ಗಳನ್ನು ಭಾರತದ ಯುವಕನೊಬ್ಬ ಹ್ಯಾಕ್ ಮಾಡಿದ್ದ. ಇದರ ಹಿನ್ನೆಲೆಯಲ್ಲೆ ಆಡಳಿತ ಪಕ್ಷ ಬಿಜೆಪಿಯ ವೆಬ್’ಸೈಟ್ ಹ್ಯಾಕ್ ಆಗಿರುವುದು ಕುತೂಹಲ ಮೂಡಿಸಿದೆ.
Discussion about this post