ಕಲ್ಪ ಮೀಡಿಯಾ ಹೌಸ್
ಭೋಪಾಲ್: ರೈಲೊಂದು ವೇಗವಾಗಿ ಚಲಿಸಿದ ಪರಿಣಾಮ ರೈಲು ನಿಲ್ದಾಣವೇ ಕುಸಿದುಬಿದ್ದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಚಾಂದನಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ನೇಪಾ ನಗರ ಹಾಗೂ ಆಸಿರ್ ಘಡದ ನಡುವೆ ಸಂಚರಿಸುವ ಪುಷ್ಪಕ್ ರೈಲು ನಿನ್ನೆ ಸಂಜೆ 4 ಗಂಟೆ ವೇಳೆಗೆ ವೇಗವಾಗಿ ಸಂಚರಿಸಿದ ವೇಳೆ ನಿಲ್ದಾಣ ಕುಸಿದುಬಿದ್ದಿದೆ.
ಘಟನೆಯಲ್ಲಿ ಯಾರಿಗೂ, ಯಾವುದೇ ರೀತಿಯಲ್ಲೂ ಹಾನಿಯಾಗಿಲ್ಲ. ಘಟನೆ ಕುರಿತಾಗಿ ತನಿಖೆಗೆ ಆದೇಶಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post