ಕಲ್ಪ ಮೀಡಿಯಾ ಹೌಸ್ | ಭೋಪಾಲ್ |
ದಕ್ಷಿಣ ಆಫ್ರಿಕಾದಿಂದ ತರಿಸಲಾಗಿದ್ದ 12ರಲ್ಲಿ 2ನೆಯ ಚೀತಾ ಸಾವನ್ನಪ್ಪಿದ್ದು, ಹೃದಯ ಹಾಗೂ ಶ್ವಾಸಕೋಶ ವೈಫಲ್ಯವೇ ಇದಕ್ಕೆ ಕಾರಣ ಎಂಬ ಮಾಹಿತಿ ಹೊರಬಿದ್ದಿದೆ.
ಇದೇ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ತರಿಸಲಾಗಿತ್ತು. ಇದರಲ್ಲಿ ಉದಯ್ ಹೆಸರಿನ ಗಂಡು ಚೀತಾ ಕಳೆದ ಭಾನುವಾರ ಸಾವನ್ನಪ್ಪಿತ್ತು. ಇದಕ್ಕೆ ಕಾರಣವೇನು ಎಂಬ ಮಾಹಿತಿ ಈಗ ಹೊರಬಿದ್ದಿದೆ.
ಚೀತಾದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಇದರ ಸಾವಿಗೆ ಹೃದಯ ಹಾಗೂ ಶ್ವಾಸಕೋಶದ ವೈಫಲ್ಯವೇ ಕಾರಣ ಎಂಬ ಮಾಹಿತಿ ತಿಳಿದುಬಂದಿದೆ. ಜಬಲ್ಪುರ ಮತ್ತು ಭೋಪಾಲ್ನ ತಲಾ ಒಬ್ಬ ವಿಧಿವಿಜ್ಞಾನ ತಜ್ಞರನ್ನೊಳಗೊಂಡ ಐವರು ತಜ್ಞರ ಸಮಿತಿ ಶವ ಪರೀಕ್ಷೆ ನಡೆಸಿತು.
Also read: ಐರನ್ ಲೆಗ್ ಎಂದವರಿಗೆ ಸರಿಯಾಗಿ ಟಾಂಗ್ ನೀಡಿದ ಶೃತಿ ಹಾಸನ್


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















