No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Friday, October 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ಮುಳ್ಳಿನಿಂದ ಶಾಲನ್ನು ಬಿಡಿಸಿ ಹೊದೆಸುವ ಮೂಲಕ ಕಷ್ಟದಲ್ಲಿದ್ದ ಕುಟುಂಬಕ್ಕೆ ರಾಮಚಂದ್ರಾಪುರ ಮಠ ಶ್ರೀರಕ್ಷೆ

ಸಂನ್ಯಾಸ ಸ್ವೀಕಾರದ ಶುಭ ನೆನಪಿನಲ್ಲಿ ನಡೆದ ವಿಶಿಷ್ಟ 'ಜೀವನದಾನ' | ನೆಮ್ಮದಿಗಾಗಿ ಬದುಕಿ, ಹಣಕ್ಕಾಗಿ ಅಲ್ಲ - ರಾಮಚಂದ್ರಾಪುರ ಶ್ರೀ

kalpa News by kalpa News
March 23, 2026
in ಉತ್ತರ ಕನ್ನಡ
0
ಮುಳ್ಳಿನಿಂದ ಶಾಲನ್ನು ಬಿಡಿಸಿ ಹೊದೆಸುವ ಮೂಲಕ ಕಷ್ಟದಲ್ಲಿದ್ದ ಕುಟುಂಬಕ್ಕೆ ರಾಮಚಂದ್ರಾಪುರ ಮಠ ಶ್ರೀರಕ್ಷೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಸಿದ್ದಾಪುರ  |

ಪ್ರತಿಯೊಬ್ಬರ ಬದುಕಿಗೂ ಬೇಕಿರುವುದು ನೆಮ್ಮದಿ. ಆ ನೆಮ್ಮದಿಗಾಗಿ ಬದುಕಿ ಹೊರತು ಹಣ, ಕೀರ್ತಿ, ಅಧಿಕಾರಕ್ಕಾಗಿ ಅಲ್ಲ. ಹಣ – ಅಧಿಕಾರದಿಂದ ಎಂದೂ ನೆಮ್ಮದಿ ಸಿಗುವುದಿಲ್ಲ. ನೆಮ್ಮದಿ ಸಿಗುವುದು ನಮ್ಮಲ್ಲಿ ಇರುವುದನ್ನು ಹಂಚಿದಾಗ ಮಾತ್ರ ಅರ್ಥತ್ ದಾನ – ಧರ್ಮದಲ್ಲಿ ಮಾತ್ರ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಸಿದ್ದಾಪುರ ತಾಲ್ಲೂಕಿನ ಭಾನ್ಕುಳಿ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀಗಳ ಸಂನ್ಯಾಸ ಸ್ವೀಕಾರ ದಿನದ ಅಂಗವಾಗಿ ನಡೆದ ‘ಜೀವನ ದಾನ’ ವಿಶೇಷ ಕಾರ್ಯಕ್ರಮದಲ್ಲಿ ಜೀವನರಕ್ಷೆ ಅನುಗ್ರಹ ನೀಡಿ ಮಾತನಾಡಿದರು.

ದಾನದಲ್ಲಿ ಎರಡು ಕ್ರಮ ಇದೆ. ಒಂದು ತಪಸ್ವಿಗಳು ಅಥವಾ ಸಾಧಕರಿಗೆ ದಾನ ಮಾಡುವುದು. ಇನ್ನೊಂದು ಯಾರಿಗೆ ಅಗತ್ಯ ಇದೆಯೋ ಅಂತವರಿಗೆ ದಾನ ಮಾಡುವುದು. ಮೊದಲಿನದು ಇಂದಿನ ದಿನಮಾನದಲ್ಲಿ ಕಷ್ಟ. ಆದರೆ ಎರಡನೆಯದು ಸರಳ. ಅಂತಹ ಕಾರ್ಯ ಪ್ರತಿಯೊಬ್ಬರೂ ಮಾಡಿ. ಆರ್ತರಿಗೆ ಸಹಾಯ ಮಾಡುವುದೆ ನಿಜವಾದ ವೈಭವ, ಅದು ನಮಗೂ ಸಂತೋಷ ನೀಡಲಿದೆ. ಖಂಡಿತವಾಗಿಯೂ ನಮಗೆ ಚಿನ್ನದ ಕಿರೀಟ, ಪಲ್ಲಕ್ಕಿ ಮೆರವಣಿಗೆ ಸಂತೋಷ ನೀಡುವುದಿಲ್ಲ. ಆದರೆ ಕಷ್ಟದಲ್ಲಿ ಇರುವವರನ್ನು ನಮ್ಮ ಸಮಾಜ ಗುರುತಿಸಿ ಸಹಾಯ ಮಾಡುವುದಕ್ಕೆ ಮುಂದಾಗಿರುವುದು ಅದಕ್ಕಿಂತ ಸಂತೋಷ ಬೇರೆ ಯಾವುದೂ ಇಲ್ಲ ಎಂದರು.ತ್ಯಾಗದಲ್ಲಿ ನೆಮ್ಮದಿ ಇದ್ದರೂ ಇಂದಿನವರು ಅದಕ್ಕೆ ಸಿದ್ದರಿಲ್ಲದಿರುವುದು ವಿಪರ್ಯಾಸ. ಹಿಂದಿನ ಕಾಲದಲ್ಲಿ ರಾಜ್ಯವನ್ನಾಳುತ್ತಿದ್ದ ರಾಜರು ಕೂಡ ತಮಗೆಲ್ಲವೂ ಇದ್ದರೂ ವಯಸ್ಸಾಗುತ್ತಿರುವಂತೆ ವನಪ್ರಸ್ಥಕ್ಕೆ ತೆರಳಿ ನಂತರ ಸಂನ್ಯಾಸ ಜೀವನ ನಡೆಸುತ್ತಿದ್ದರು. ತ್ಯಾಗದಲ್ಲಿ ನೆಮ್ಮದಿ ಇದೆ ಎಂದು ರಾಜಾದಿರಾಜರೂ ಕಂಡು ಕೊಂಡಿದ್ದರು. ಆದರೆ ಇಂದು ಅದನ್ನು ಕಾಣುವುದಕ್ಕೆ ಸಾಧ್ಯವೇ ಇಲ್ಲ, ಕೊನೆಯ ಉಸಿರಿನವರೆಗೂ ಅಧಿಕಾರದ ಆಸೆ ನೆಮ್ಮದಿಯನ್ನು ಹಾಳು ಮಾಡಿದೆ. ಕೂಡುವ ಲೆಕ್ಕಕ್ಕಿಂತ ಕಳೆಯುವ ಲೆಕ್ಕದಲ್ಲಿರುವ ಸುಖವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

Also Read: ಬೆಂಗಳೂರು-ತಿರುಪತಿ, ಸುಬ್ರಹ್ಮಣ್ಯ-ಮಂಗಳೂರು ಸೇರಿ 9 ಪ್ರಮುಖ ರೈಲುಗಳ ಮಹತ್ವದ ಅಪ್ಡೇಟ್

ಮುಳ್ಳಿನಿಂದ ಶಾಲನ್ನು ಬಿಡಿಸಿ ಹೊದೆಸುವ ಮೂಲಕ ಜೀವನರಕ್ಷೆ 
ಮುಳ್ಳಿನ ಗಿಡದಿಂದ ಶಾಲನ್ನು ಬಿಡಿಸಿದ ಶ್ರೀಗಳು, ಆ ಶಾಲನ್ನು ಶ್ರೀರಕ್ಷೆಯಾಗಿ ಕಷ್ಟದಲ್ಲಿದ್ದ ಕುಟುಂಬಕ್ಕೆ ಹೊದೆಸುವ ಮೂಲಕ ಜೀವನದಾನ ನಡೆಯಿತು. ಹೊಸನಗರದ ಸಂಪೇಕಟ್ಟೆಯ ಮತ್ತೀಕೈ ಗ್ರಾಮದ ರಾಮಚಂದ್ರ ಭಟ್ ಕುಟುಂಬಕ್ಕೆ ಜೀವನದಾನ ನೀಡಲಾಯಿತು. ಅವರಿಗೆ 88 ವರ್ಷ ವಯಸ್ಸಾಗಿದ್ದು, ಅಡುಗೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ದುಡಿಯುತ್ತಿದ್ದ ಮಗನನ್ನು ಕಳೆದು ಕೊಂಡಿದ್ದು, ಈ ಕುಟುಂಬ ಸಂಕಷ್ಟದಲ್ಲಿತ್ತು.

ಇದೇ ಸಂದರ್ಭದಲ್ಲಿ ಶಂಕರ ಪಂಚಮಿ ಆಹ್ವಾನ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಶಾಸನ ತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಜೀವನದಾನದ ಕುರಿತು ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಜೀವನದಾನ ಟ್ರಸ್ಟಿನ ಡಾ. ಶಾರದಾ ಜಯಗೋವಿಂದ, ಮಂಜಪ್ಪ ಗುಂಡಿ, ಆರ್.ಜಿ. ಹೆಗಡೆ ಹೊಸಾಕುಳಿ, ಚಂದ್ರಮತಿ ಹರಗಿ, ರಾಜಲಕ್ಷ್ಮೀ ಹೆಗಡೆ ಹೊಸ್ಮನೆ, ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಶಾಂತಾರಾಮ ಹಿರೇಮನೆ, ರಮೇಶ್ ಹೆಗಡೆ ಗುಂಡೂಮನೆ, ಪ್ರಮುಖರಾದ ಆರ್.ಎಸ್.ಹೆಗಡೆ, ಪ್ರಮೋದ ಪಂಡಿತ್, ತಿಮ್ಮಪ್ಪ ಗುಡ್ಡೆದಿಂಬ ಮತ್ತಿತರರು ಇದ್ದರು.

ಏನಿದು ಜೀವನ ದಾನ?
ಸಂನ್ಯಾಸ ಸ್ವೀಕರಿಸಿದ ಶುಭ ನೆನಪಿಗಾಗಿ ಪ್ರತಿವರ್ಷ ದೀನ ದುಃಖಿತರಿಗೆ ಅಭಯ ನೀಡುವ, ಜೀವನಕ್ಕೆ ನೆರವಾಗುವ ಜೀವಕಾರುಣ್ಯದ ಕಾರ್ಯಕ್ರಮ “ಜೀವನದಾನ”. ಜನ್ಮದಿನವನ್ನು ಹಲವರು ದೀಪವನ್ನು ಆರಿಸಿ ಆಚರಿಸುತ್ತಾರೆ, ಕೆಲವರು ದೀಪವನ್ನು ಬೆಳಗಿಸಿ ಆಚರಿಸುತ್ತಾರೆ, ಆದರೆ ಶ್ರೀರಾಮಚಂದ್ರಾಪುರ ಮಠದ ಶ್ರೀಗಳು ತಾವು ಸಂನ್ಯಾಸ ಸ್ವೀಕರಿಸಿದ ದಿನದಂದು ಕಷ್ಟದಲ್ಲಿರುವವರ ಬಾಳಿಗೆ ಬೆಳಕಾಗುವ ಮೂಲಕ ಸಂನ್ಯಾಸ ಸ್ವೀಕಾರದಿನವನ್ನು ಆಚರಿಸುತ್ತಾರೆ.

ಜೀವನದಾನ ಪಡೆದ ಕುಟುಂಬದ ಎಲ್ಲಾ ಅಗತ್ಯಗಳನ್ನು ಶ್ರೀಮಠ ನೋಡಿ ಕೊಳ್ಳುತ್ತದೆ. ಅವರಿಗೆ ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಜೀವನಪರ್ಯಂತ ಶ್ರೀಮಠದಿಂದ ಒದಗಿಸಲಾಗುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

https://kalpa.news/wp-content/uploads/2024/04/VID-20240426-WA0008.mp4

Tags: Kannada News WebsiteLatest News KannadaRamachandrapura muttShankara PanchamiSiddhapuraUttara Kannadaಭಾನ್ಕುಳಿ ಮಠಶಂಕರ ಪಂಚಮಿಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಶ್ರೀರಾಮಚಂದ್ರಾಪುರ ಮಠಸಿದ್ದಾಪುರ
Share295Tweet184Send
Aniruddha Vasishta S R

Aniruddha Vasishta S R

Editor-in-Chief

Previous Post

Sagara Engulfed In The Ocean of Music

Next Post

ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸಲು ಶಿಬಿರಗಳು ಅತ್ಯವಶ್ಯ

kalpa News

kalpa News

Next Post
ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸಲು ಶಿಬಿರಗಳು ಅತ್ಯವಶ್ಯ

ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸಲು ಶಿಬಿರಗಳು ಅತ್ಯವಶ್ಯ

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL