ಕಲ್ಪ ಮೀಡಿಯಾ ಹೌಸ್ | ಭೋಪಾಲ್ |
ರಾಜ್ಯದಿಂದ ಮಹಾಕುಂಭ ಮೇಳ #Mahakumbhamela ನಡೆಯುತ್ತಿರುವ ಪ್ರಯಾಗರಾಜ್’ಗೆ ತೆರಳುತ್ತಿದ್ದ ವಿಶೇಷ ರೈಲಿನ ಮೇಲೆ ಹಲವರು ಕಲ್ಲು ತೂರಾಟ ನಡೆಸಿರುವ ಘಟನೆ ಇಂದು ನಸುಕಿನಲ್ಲಿ ನಡೆದಿದೆ.
ಮಧ್ಯಪ್ರದೇಶದ ಹರ್ಪಾಲ್ಪುರ ರೈಲು ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಮಹಾಕುಂಭ ಮೇಳದ ವಿಶೇಷ ರೈಲಿಗೆ ಹತ್ತಲು ಹೋದಾಗ ಬಾಗಿಲು ಮುಚ್ಚಿದಕ್ಕೆ ಪ್ರಯಾಣಿಕರು ಆಕ್ರೋಶಗೊಂಡು ರೈಲಿಗೆ ಕಲ್ಲು ಎಸೆದಿದ್ದಾರೆ #Stone Pelted on Train ಎನ್ನಲಾಗಿದೆ.
Also read: ಪುರಂದರಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಮ್…
ಹರ್ಪಾಲ್ಪುರ ಮಹಾ ಕುಂಭಮೇಳಕ್ಕೆ ಹೋಗುವ ವಿಶೇಷ ರೈಲಿಗಾಗಿ ಪ್ರಯಾಣಿಕರು ಕಾಯುತ್ತಿದ್ದರು. ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪ್ರಯಾಣಿಕರು ಹತ್ತಲು ಹೋದಾಗ ಬಾಗಿಲು ಲಾಕ್ ಆಗಿದೆ. ಇದರಿಂದ ಕೋಪಗೊಂಡ ಪ್ರಯಾಣಿಕರು ಬೋಗಿಗಳ ಮೇಲೆ ಹಾಗೂ ಬಾಗಿಲು, ಕಿಟಕಿಗಳ ಮೇಲೂ ಕಲ್ಲು ಎಸೆದಿz್ದÁರೆ. ಇದರಿಂದ ರೈಲಿನೊಳಗಿದ್ದ ಪ್ರಯಾಣಿಕರು ಭಯಭೀತರಾಗಿ ಕಿರುಚಾಡಿದ್ದಾರೆ,
ಪ್ರಯಾಣಿಕರು ರೈಲಿಗೆ ಕಲ್ಲು ಎಸೆದಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹರಿದಾಡುತ್ತಿದೆ.
ಮಹಾ ಕುಂಭಮೇಳಕ್ಕೆ ಹೋಗುತ್ತಿದ್ದ ವಿಶೇಷ ರೈಲು ಝಾನ್ಸಿ ರೈಲ್ವೆ ನಿಲ್ದಾಣದಿಂದ ರಾತ್ರಿ 8 ಗಂಟೆಗೆ ಹೊರಟಿತ್ತು. ಹರ್ಪಾಲ್ಪುರ ನಿಲ್ದಾಣಕ್ಕೆ ಬರುತ್ತಿದ್ದಂತೆ ರೈಲಿನ ಬಾಗಿಲು ಹಾಕಿದ್ದರಿಂದ ಪ್ರಯಾಣಿಕರಿಗೆ ಹತ್ತಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡ ಪ್ರಯಾಣಿಕರು ರೈಲಿಗೆ ಕಲ್ಲು ಎಸೆದಿದ್ದಾರೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post