ಕಲ್ಪ ಮೀಡಿಯಾ ಹೌಸ್ | ಭುವನೇಶ್ವರ |
ಸೂರತ್ ಮತ್ತು ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತಮ್ಮ ನಾಮಪತ್ರ ಹಿಂಪಡೆದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ ಬೆನ್ನಲ್ಲೇ ಮತ್ತೋರ್ವ ಕೈ ಅಭ್ಯರ್ಥಿ ಚುನಾವಣಾ ಕಣದಿಂದ ಹಿಂದೆ ಸರಿಯುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ.
ಒಡಿಶಾದ ಹಾಟ್ ಸೀಟ್ ಎಂದು ಪರಿಗಣಿಸಲಾಗಿದ್ದ ಪುರಿಯ ಕಾಂಗ್ರೆಸ್ ಅಭ್ಯರ್ಥಿ ಸುಚರಿತ ಮೊಹಾಂತಿ #Sucharitha Mohanthi ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಹಣದ ಕೊರತೆಯ ಕಾರಣ ನೀಡಿ ಮತದಾನಕ್ಕೂ ಮುನ್ನವೇ ಕ್ಷೇತ್ರ ತೊರೆದಿರುವ ಮೊಹಾಂತಿ, ಕಾಂಗ್ರೆಸ್‌ಗೆ ತನ್ನ ಟಿಕೆಟ್ ವಾಪಾಸ್ ಮಾಡಿದ್ದಾರೆ. ಈ ಸಂಬಂಧ ಸುಚರಿತ ಮೊಹಾಂತಿ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ #K C Venugopal ಅವರಿಗೆ ಪತ್ರ ಬರೆದು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.
ಚುನಾವಣೆಗೆ ಸ್ಪರ್ಧಿಸಲು ಪಕ್ಷ ನೀಡಿರುವ ಮೊತ್ತವನ್ನು ತಮಗೆ ನೀಡಿಲ್ಲ ಎಂದು ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದು, ಹಣದ ಕೊರತೆಯಿಂದ ಪ್ರಚಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
Also read: ಕ್ಷೇತ್ರದ ಹಿತ ಕಾಯಲು ಗೀತಕ್ಕನಿಗೆ ಮತ ನೀಡಿ: ಶಾಸಕ ಪ್ರದೀಪ್ ಈಶ್ವರ್
ಪುರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಸುಚರಿತ ಮೊಹಾಂತಿ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post