ಕಲ್ಪ ಮೀಡಿಯಾ ಹೌಸ್ | ಭುವನೇಶ್ವರ್ |
ಹೊತ್ತು ಹೋಗಿದ್ದ ಆಮೆ ಕರಿಯನ್ನು ಬಡಿಸಿದ್ದಕ್ಕೆ ಪತ್ನಿಯೊಂದಿಗೆ ಜಗಳವಾಡಿ ಆಕೆಯನ್ನು ಕೊಂದು ಮನೆಯ ಹಿತ್ತಲಿನಲ್ಲಿ ಹೂತಿಟ್ಟ ಘಟನೆ ಪಶ್ಚಿಮ ಓಡಿಶಾದ ಸಂಬಲ್‍ಪುರ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಹಿನ್ನೆಲೆ:
ಬದ್ಮಾಲ್ ಪಂಚಾಯತ್‍ನ ರೌತ್‍ಪಾರಾ ಗ್ರಾಮದ ರಂಜನ್ ಬಡಿಂಗ್ (36) ಎಂಬಾತ ತನ್ನ ಮನೆಗೆ ಆಮೆಯನ್ನು ತಂದಿದ್ದನು. ಬಳಿಕ ಸಾಬಿತ್ರಿ (35) ಬಳಿ ಕರಿ ಮಾಡಿಕೊಡಲು ಹೇಳಿದ್ದಾನೆ. ಕರಿ ಮಾಡುವಾಗ ಆಮೆಯ ಪೀಸ್ ಸ್ವಲ್ಪ ಹೊತ್ತು ಹೋಗಿತ್ತು. ಘಟನೆಗೆ ಸಂಬಂಧಿಸಿದಂತೆ ರಂಜನ್ ಪತ್ನಿಯನ್ನು ತೀವ್ರವಾಗಿ ಥಳಿಸಿದ್ದಾನೆ. ಪ್ರಜ್ಞಾ ಹೀನಸ್ಥಿತಿಗೆ ತಲುಪಿದ ಪತ್ನಿಯನ್ನು ಅಲ್ಲಿಯೇ ಬಿಟ್ಟು ಹೊರಗೆ ಬಂದಿದ್ದಾನೆ. ಸ್ವಲ್ಪ ಸಮಯದ ನಂತರ ಮನೆಗೆ ಬಂದಾಗ ಆಕೆ ಮೃತ ಪಟ್ಟಿರುವುದನ್ನು ಗಮನಿಸಿದ ರಂಜನ್ ಶವವನ್ನು ಹಿತ್ತಲಿನಲ್ಲಿ ಹೂತು ಹಾಕಿದ್ದಾನೆ. ನಂತರ ಸಾಬಿತ್ರಿ ಕೋಪದಿಂದ ಮನೆಬಿಟ್ಟು ಹೊರಟು ಹೋಗಿದ್ದಾಳೆ ಎಂದು ಪ್ರಚಾರ ಮಾಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಸಾಬಿತ್ರಿ ತಾಯಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭಿಸಿ, ರಂಜನ್‍ನ್ನು ವಿಚಾರಣೆ ನಡೆಸಿದಾಗ ರಂಜನ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post