ಕಲ್ಪ ಮೀಡಿಯಾ ಹೌಸ್ | ಬೀದರ್ |
ಧರ್ಮಸ್ಥಳ ಶ್ರೀ ಮಂಜುನಾಥ ಕ್ಷೇತ್ರ ಸಮಸ್ತ ಮಾನವ ಕುಲಕೋಟಿಗೆ ಅತ್ಯಂತ ಶೃದ್ಧೆ, ಭಕ್ತಿಯುಳ್ಳ ಪವಿತ್ರ ಧಾರ್ಮಿಕ ಕೇಂದ್ರವಾಗಿದೆ. ಆದರೆ ಇಲ್ಲಿ ಸರ್ಕಾರ ಅಸ್ಥಿಪಂಜರ ಶೋಧ ನೆಪದಲ್ಲಿ ಹಿಂದೂ ವಿರೋಧಿ ಧೋರಣೆ ತಾಳಿ, ಧರ್ಮಸ್ಥಳದ ಪಾವಿತ್ರ‍್ಯಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ #MLA Shylendra Beldale ಕಿಡಿಕಾರಿದ್ದಾರೆ.
ಧರ್ಮಸ್ಥಳದಲ್ಲಿ #Dharmasthala ನೂರಾರು ಹೆಣಗಳು ಹೂತಿರುವೆ. ಅಸ್ಥಿಪಂಜರ ಸಿಗುತ್ತವೆ ಎಂದು ಯಾರೋ ಅನಾಮಿಕ ಹೇಳಿದ ಮಾತ್ರಕ್ಕೆ ಸರ್ಕಾರ ಆತುರಾತುರ ವಿಶೇಷ ತನಿಖಾ ತಂಡವನ್ನೇ (ಎಸ್ಐಟಿ) ರಚಿಸಿದೆ. ಎರಡ್ಮೂರು ವಾರಗಳಿಂದ ನಡೆದ ಶೋಧದಲ್ಲಿ ಏನು ಸಿಕ್ಕಿದೆ? ತನಿಖೆ ಹೆಸರಿನಲ್ಲಿ ಸರ್ಕಾರ ಯಾವ ಘನಂದಾರಿ ಸಾಧನೆ ಮಾಡಿದೆ? ಅನಾಮಿಕ ಹೇಳಿದಂತೆ ಏನೂ ಸಿಗಲಿಲ್ಲ. ತಕ್ಷಣ ಅನಾಮಿಕನ ವಿರುದ್ಧ ಕ್ರಮ ಕೈಗೊಂಡು, ಆತನ ಹಿನ್ನೆಲೆ, ಯಾರು ಹಿಂದಿದ್ದಾರೆ ಎಂಬ ನಿಜಬಣ್ಣ ಬಯಲು ಮಾಡಬೇಕು. ಸರ್ಕಾರಕ್ಕೆ ದಮ್ ಇದ್ದರೆ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಿದವರು ಯಾರು ಎಂಬುದು ಪತ್ತೆ ಹಚ್ಚಿ, ತಪ್ಪಿತಸ್ಥರ ವಿರುದ್ಧ ಶೀಘ್ರ ಕಠಿಣ ಕ್ರಮ ಕೈಗೊಳ್ಳಲು ಎಸ್ ಐಟಿ ರಚಿಸಲಿ ಎಂದು ಇಲ್ಲಿ ಹೊರಡಿಸಿರುವ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಧರ್ಮಸ್ಥಳ ಪ್ರಕರಣ ಮೇಲ್ನೋಟಕ್ಕೆ ಸ್ಪಷ್ಟವಾಗಿ ದೊಡ್ಡ ಪಿತೂರಿ, ಹಿಂದು ಧಾರ್ಮಿಕ ಪವಿತ್ರ ಕ್ಷೇತ್ರಗಳ ಗೌರವ, ಭಕ್ತರ ನಂಬಿಕೆ, ಪರಂಪರೆಗಳಿಗೆ ಧಕ್ಕೆ ತರುವ ಪ್ರಯತ್ನ ಎಂಬುದು ಕಾಣುತ್ತಿದೆ. ರಾಜ್ಯ ಸರ್ಕಾರದ ಪಾಪದ ಕೊಡ ತುಂಬಿದ್ದರಿAದ ಹೀಗೆಲ್ಲ ಮಾಡುತ್ತಿದೆ.
-ಡಾ.ಶೈಲೇಂದ್ರ ಬೆಲ್ದಾಳೆ, ಬೀದರ್ ದಕ್ಷಿಣ ಶಾಸಕ
ಧರ್ಮಸ್ಥಳ ವಿಷಯದಲ್ಲಿ ಬರುತ್ತಿರುವ ಆರೋಪ, ಪೂರ್ವಾಪರವಾಗಿ ವಿಚಾರಿಸದೆ ಸರ್ಕಾರ ಎಸ್ ಐಟಿಯಿಂದ ಮಾಡುತ್ತಿರುವ ತನಿಖೆಯನ್ನು ಅವಲೋಕಿಸಿದರೆ ಇದರ ಹಿಂದೆ ಹಿಂದು ಧಾರ್ಮಿಕ ಸ್ಥಳಗಳ ವಿರುದ್ಧ ಕೆಲಸ ಮಾಡುವ ಕುತಂತ್ರಿಗಳು, ಮತಾಂಧರು, ಮತಾಂತರಿಗಳು ದೊಡ್ಡ ಷಡ್ಯಂತ್ರವನ್ನು ಹೆಣೆದಂತೆ ಕಾಣುತ್ತಿದೆ. ಅಂತೆಯೇ ಸರ್ಕಾರದ ತನಿಖೆ ಸಹ ಹೈಡ್ರಾಮಾ ತರಹ ನಡೆದಿದೆ. ಹಿಂದೂ ಧಾರ್ಮಿಕ ಕ್ಷೇತ್ರಕ್ಕೆ ಅವಮಾನ ಮಾಡುವುದು ಈ ಸಮಾಜ ಯಾವತ್ತೂ ಸಹಿಸಲ್ಲ. ಈ ವಿಷಯದಲ್ಲಿ ಬಿಜೆಪಿ ಶ್ರೀ ಮಂಜುನಾಥ ಅಸಂಖ್ಯಾತ ಭಕ್ತರ ಜೊತೆಗೂಡಿ ದೊಡ್ಡ ಮಟ್ಟದ ಹೋರಾಟ ನಡೆಸಲಿದೆ. ಹಿಂದುಗಳ ಭಾವನೆ ಕೆರಳಿಸುವ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಧರ್ಮಸ್ಥಳದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮವೂ ಧರ್ಮಪರ, ಸೇವಾಪರವಾಗಿವೆ. ಅನಾಮಿಕ ಧರ್ಮ ವಿರೋಧಿ ಮಾತು ಕೇಳಿ ಈ ಕ್ಷೇತ್ರಕ್ಕೆ ಹಾಗೂ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಕಳಂಕ ಹಚ್ಚುವುದು ಸಹಿಸಲಾಗದು. ಹಿಂದು ಧಾರ್ಮಿಕ ಕ್ಷೇತ್ರಗಳನ್ನು ಕಾಪಾಡಲು ಬಿಜೆಪಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post