ಕಲ್ಪ ಮೀಡಿಯಾ ಹೌಸ್
ಬೀದರ್ : ಸೆ.3ರಂದು ನಡೆಯಲಿರುವ ಬೀದರ್ ನಗರ ಸಭೆಯ ವಾರ್ಡ್ ನಂಬರ್ 26 ಮತ್ತು 32ರ ಚುನಾವಣೆಯ ಸಿದ್ದತೆ ವಿಚಾರವಾಗಿ ಶಾಸಕ ಬಂಡೆಪ್ಪ ಖಾಶೆಂಪುರ್, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಪುರ್ ಅವರ ನೇತೃತ್ವದಲ್ಲಿ ಜೆಡಿಎಸ್ ನಾಯಕರು ಸಭೆ ನಡೆಸಿದರು.
ಶಾಸಕ ಬಂಡೆಪ್ಪ ಖಾಶೆಂಪುರ್ ಅವರ ನಿವಾಸದಲ್ಲಿ ಸಭೆ ನಡೆಸಿದ ಜೆಡಿಎಸ್ ನಾಯಕರು, ಮುಂಬರುವ ನಗರ ಸಭೆ ಚುನಾವಣೆಯ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಕಾರ್ಯ, ಗೆಲುವಿನ ತಂತ್ರಗಳು, ಪಕ್ಷದ ಬೆಳವಣಿಗೆ, ಮುಂಬರುವ ಚುನಾವಣೆಗಳ ಸಿದ್ದತೆ ಸೇರಿದಂತೆ ಅನೇಕ ವಿಷಯಗಳ ಸಂಬಂಧ ಚರ್ಚಿಸಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಇದೇ ವೇಳೆ ನಗರಸಭೆ ಚುನಾವಣೆಯಲ್ಲಿ ವಿಜೇತರಾದ ಪಕ್ಷದ ಸದಸ್ಯರಾದ (ಅವರ ಕುಟುಂಬಸ್ಥರು) ರಾಜು ಚಿಂತಾಮಣಿ, ಸೈಯದ್ ಸೌದ್, ದ್ರೌಪದಿ ಕಾಳೆ, ಹಿಂದುಮತಿ ಚಿದ್ರಿ, ಅರುಣ್, ದಾವೂದ್, ಶಿವಕುಮಾರ್ ಬಾವಿಕಟ್ಟಿರವರನ್ನು ಸನ್ಮಾನಿಸಿ ಗೌರವಿಸಿದರು.


ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ರಾಜಶೇಖರ್ ಜಾವಳೆ, ನಬಿ ಖುರೇಸಿ, ಅಶೋಕ್ ಕೊಡ್ಗೆ, ರಾಜು ಚಿಲರ್ಗಿ, ಸೌದ್ ಖಾದ್ರಿ, ಸುದರ್ಶನ್, ಸುರ್ಯಕಾಂತ ದಂಡಿನ್, ಅಭಿ ಕಾಳೆ, ಸಾಹೇಬ್ ರೇಕುಳಗಿ, ಅತಿಕ್ ಅಹ್ಮದ್, ದೇವೆಂದ್ರ ಸೋನಿ, ಅನಿಲ್ ಸುರಳಿ, ಬಸವರಾಜ್ ಪಾಟೀಲ್ ಆರೋಗೇರಿ, ಬಾಬು ಗಾದ್ಗಿ, ಅಬೇದ್ ಹಲಿ ಸೇರಿದಂತೆ ಅನೇಕರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















