ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಪೂರ್ ಗ್ರಾಮದ ಕಾಂಗ್ರೆಸ್ ಹಾಗೂ ಬಿಜೆಪಿಯ ನೂರಾರು ಜನ ಕಾರ್ಯಕರ್ತರು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ MLA Bandeppa Khashempur ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ ಶಾಪೂರ್ ಗ್ರಾಮದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನೂರಾರು ಜನ ಕಾರ್ಯಕರ್ತರಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ಜೆಡಿಎಸ್ ಪಕ್ಷದ ಧ್ವಜ ನೀಡುವ ಮೂಲಕ ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡು, ಪಕ್ಷ ಸಂಘಟನೆ, ಬಲವರ್ಧನೆ, ಚುನಾವಣೆ ಸಿದ್ಧತೆ ಸೇರಿದಂತೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ನೂತನ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.

ನಾವೆಲ್ಲರೂ ಸೇರಿ ಬೂತ್ ಮಟ್ಟದಲ್ಲಿ, ಗ್ರಾಮೀಣ ಭಾಗದಲ್ಲಿನ ಜನರಿಗೆ ನಮ್ಮ ಪಕ್ಷದ ಗುರಿಗಳ ಬಗ್ಗೆ ಮತ್ತು ನಾವು ಅಧಿಕಾರದಲ್ಲಿದ್ದಾಗ ಮಾಡಿದ್ದ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಿ ಹೇಳುವ ಕೆಲಸವನ್ನು ಸಹ ಮಾಡಬೇಕಾಗಿದೆ. ಕುಮಾರಣ್ಣರವರು ಹಗಲು ರಾತ್ರಿ ಎನ್ನದೇ ಪಕ್ಷ ಸಂಘಟನೆಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅವರ ಕೈ ಬಲಪಡಿಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ.

ಈ ಸಂದರ್ಭದಲ್ಲಿ ಬಸವರಾಜ ನಿರಂಜಪ್ಪ ಶಾಪೂರೆ, ಪಿರಪ್ಪ ಝರೇಪ್ಪ ಶಾಪೂರ್, ರಸೂಲ್ ಮಿಯ್ಯಾ ಶಾಪೂರ್, ಸಂಜುಕುಮಾರ್, ಚಕ್ಕಿನಂದರ್ ಬಸ್ಸಣ್ಣೋರ್, ಜಗನಾಥ ಆಡಕ್, ನರಸಪ್ಪ ರಾಮರ್ಥ, ಚಂದ್ರಕಾಂತ ಮಾಥಂಡ್, ಸಿದ್ದು ತಿಪ್ಪಣ್ಣ, ನಾಮದೇವ, ಚಂದ್ರಕಾಂತ ಗಜರ್, ಧನರಾಜ್ ಭೀಮಣ್ಣ, ಸಂತೋ? ಬಸ್ಸಣ್ಣೋರ್, ಆನಂದ್ ಕಡಿಮಟ್ಟಿ, ಲಾಲಪ್ಪ ಘಾಳೆಪ್ಪ, ಮಲ್ಲಪ್ಪ ಮಲ್ಕಾಪೂರೆ, ರಾಜಕುಮಾರ ಹಾಸಗೊಂಡ, ಗೌರೀಶ ಬಿರಾದಾರ, ಸಂಗಮೇಶ ನಿರಂಜಪ್ಪ, ಅಭಿಷೇಕ ಅನಿಲ್, ಅಂಬದಾಸ್ ಝರೇಪ್ಪ, ತುಕ್ಕರಾಮ್ ರಾಮಚಂದ್ರ, ಸಿದ್ದು ಹಾಸಗೊಂಡ, ಭಗವಂತ ಹಾಸಗೊಂಡ, ರಾಜಕುಮಾರ ಗಜಿರೆ, ಚಂದ್ರಕಾಂತ ಜಗನಾಥ, ಅನಿಲ್ ಭೀಮಣ್ಣ, ಜಗನಾಥ ಲದ್ದಿ, ಮಹೇಶ್ ಹುಲಿ, ಅಭಿಷೇಕ ಬಿ, ಪಂಡಿತ್, ಗಣಪತಿ, ರಾಜು, ಶಿವಾನಂದ ಸೇರಿದಂತೆ ಶಾಪೂರದ ನೂರಾರು ಜನ ಕಾರ್ಯಕರ್ತರು, ಮುಖಂಡರು ಇದ್ದರು.












Discussion about this post