ಕಲ್ಪ ಮೀಡಿಯಾ ಹೌಸ್ | ಬೀದರ್ |
ಕೇಂದ್ರ ಸರ್ಕಾರವು ಗೊಂಡ ಕುರುಬ, ಕುರುಬ ಗೊಂಡ ಎರಡು ಪರ್ಯಾಯ ಪದಗಳು ಎಂದು ಪರಿಗಣಿಸಿ ಆದೇಶ ಹೊರಡಿಸಬೇಕೆಂದು ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ಗೊಂಡ ಸಮಾಜದ ಮುಖಂಡರಾದ ಮಾಳಪ್ಪ ಅಡಸಾರೆರವರ ನೇತೃತ್ವದ ನಿಯೋಗ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಕೇಂದ್ರ ಸಚಿವರಾದ ಭಗವಂತ ಖೂಬಾ ಹಾಗೂ ಪ್ರಲ್ಹಾದ್ ಜೋಷಿರವರನ್ನು Central Minister Bhagavantha Khooba and Pralhad Joshi ಮಂಗಳವಾರ ಬೆಳಗ್ಗೆ ನವದೆಹಲಿಯಲ್ಲಿ ಭೇಟಿಯಾದ ನಿಯೋಗ, ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಬರುವ ಗೊಂಡ ಸಮಾಜವು ಗೊಂಡ ಕುರುಬ, ಕುರುಬ ಗೊಂಡ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಹಾಗಾಗಿ ಗೊಂಡ ಕುರುಬ, ಕುರುಬ ಗೊಂಡ ಎರಡು ಒಂದೇ ಎಂದು ಪರಿಗಣಿಸಬೇಕು ಎಂದು ಮನವಿ ಮಾಡಿತು.

Also read: ರಂಗಪ್ರವೇಶಕ್ಕೆ ಸಿದ್ಧವಾದ ಸ್ತುತಿಶ್ರೀ ತಿರುಮಲೈ | `ನೃತ್ಯ ಕುಸುಮಾಂಜಲಿ’ಯ ಯುವ ಕಲಾವಿದೆ
ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ಭಾಗದಲ್ಲಿರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಎರಡು ಪರ್ಯಾಯ ಪದಗಳೆಂದು ಪರಿಗಣಿಸಿ, ಶೀಘ್ರದಲ್ಲೇ ಆದೇಶ ಹೊರಡಿಸಬೇಕೆಂದು ಬರೆದಿದ್ದ ಮನವಿ ಪತ್ರವನ್ನು ಗೊಂಡ ಸಮಾಜದ ನಿಯೋಗ ಕೇಂದ್ರ ಸಚಿವರಿಗೆ ಸಲ್ಲಿಸಿತು. ಈ ವೇಳೆ ಮಾತನಾಡಿದ ನಿಯೋಗದ ಸದಸ್ಯರು, ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ಪುರಸ್ಕೃರಿಸುವ ವಿಶ್ವಾಸವಿದೆ. ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಷ್ಟು ಬೇಗ ಆದೇಶ ಹೊರಬರುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.











Discussion about this post