No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Thursday, April 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ರಂಗಪ್ರವೇಶಕ್ಕೆ ಸಿದ್ಧವಾದ ಸ್ತುತಿಶ್ರೀ ತಿರುಮಲೈ | `ನೃತ್ಯ ಕುಸುಮಾಂಜಲಿ’ಯ ಯುವ ಕಲಾವಿದೆ

ವಿದುಷಿ ವೈ.ಜಿ. ಶ್ರೀಲತಾ ಮಾರ್ಗದರ್ಶನ | ಜೆಎಸ್‌ಎಸ್ ಸಭಾಂಗಣದಲ್ಲಿ ಆ. 6ರಂದು ಕಾರ್ಯಕ್ರಮ ಆಯೋಜನೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 1, 2023
in ಬೆಂಗಳೂರು ನಗರ
0
ರಂಗಪ್ರವೇಶಕ್ಕೆ ಸಿದ್ಧವಾದ ಸ್ತುತಿಶ್ರೀ ತಿರುಮಲೈ | `ನೃತ್ಯ ಕುಸುಮಾಂಜಲಿ’ಯ ಯುವ ಕಲಾವಿದೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   | ಬೆಂಗಳೂರು |

ನಟನ ತರಂಗಿಣಿ -ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ನ ಗುರು ವಿದುಷಿ ವೈ.ಜಿ. ಶ್ರೀಲತಾ ಅವರ ಶಿಷ್ಯೆ ಸ್ತುತಿಶ್ರೀ ತಿರುಮಲೈ ಭರತನಾಟ್ಯ ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ.

ರಾಜಧಾನಿಯ ಜಯನಗರ 8ನೇ ಬಡಾವಣೆಯ ಜೆಎಸ್‌ಎಸ್ ಸಭಾಂಗಣದಲ್ಲಿ ಆ. 6ರ ಸಂಜೆ 5.30ಕ್ಕೆ ಆಯೋಜನೆಗೊಂಡಿರುವ `ನೃತ್ಯ ಕುಸುಮಾಂಜಲಿ’ ಶೀರ್ಷಿಕೆಯಡಿ ಯುವ ಕಲಾವಿದೆ ಸ್ತುತಿಶ್ರೀ ಹೊಸ ಭರವಸೆಯನ್ನು ಮೂಡಿಸಲು ಅಡಿ ಇಡುತ್ತಿರುವುದು ಬಹು ವಿಶೇಷ. ಮೈಸೂರಿನ ನೃತ್ಯಗಿರಿ ಪರ್ಫಾಮಿಂಗ್ ಆಟ್ಸ್ ಸೆಂಟರ್ ನಿರ್ದೇಶಕಿ ವಿದುಷಿ ಕೃಪಾ ಫಡ್ಕೆ, ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ಪ್ರವಚನ ರತ್ನ ವಿದ್ವಾನ್ ಜಿ.ಎನ್. ರಾಮಪ್ರಸಾದ್, ಬೇಕಲ್‌ನ ಗೋಕುಲಂ ಗೋಶಾಲಾ ಆಚಾರ್ಯ ವಿದ್ಯಾಪೀಠದ ವಿದ್ವಾನ್ ವಿಷ್ಣು ಪ್ರಸಾದ್ ಹೆಬ್ಬಾರ್ ಈ ಸಂದರ್ಭಕ್ಕೆ ಸಾಕ್ಷಿಯಾಗಲಿದ್ದಾರೆ.
ಪ್ರತಿಭಾ ಪರಿಚಯ:
ಬೆಂಗಳೂರಿನ ಹಾರ್ಡ್ವೇರ್ ಇಂಜಿನಿಯರ್ ವೆಂಕಟೇಶ್ ಮತ್ತು ಮಾಧುರಿ ಮೈಸೂರು ಅವರ ಪುತ್ರಿ ಸ್ತುತಿಶ್ರೀಗೆ ಈಗ `ನೃತ್ಯ ಕುಸುಮಾಂಜಲಿ’ ಹೊಸ ಕನಸುಗಳ ಹೊಂಗಿರಣ ಮೂಡಿಸಿದೆ. ನಗರದ ಎ.ಎಸ್.ಸಿ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಸ್ತುತಿಶ್ರೀ ನೃತ್ಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದು ಶಿಶುವಿಹಾರದ ಹಂತದಲ್ಲಿ. ವಿದುಷಿ ರಂಜನಿ ಉಮೇಶ್ ಅವರಲ್ಲಿ ಪ್ರಾಥಮಿಕ ಅಭ್ಯಾಸಗಳನ್ನು ಮಾಡಿದ ಈಕೆ ನಾಟ್ಯ ನಿಕೇತನದ ಗುರು ವಿದುಷಿ ರೇವತಿ ನರಸಿಂಹನ್ ಅವರಲ್ಲಿ ಕೆಲವರ್ಷ ನೃತ್ಯದ ಪಟ್ಟುಗಳನ್ನು ಕಲಿತರು. ಸದ್ಯ ಬಹುಶ್ರುತ ವಿದುಷಿ ವೈ.ಜಿ. ಶ್ರೀಲತಾ ಅವರ ಕಲಾ ಶಾಲೆಯಲ್ಲಿ ನೃತ್ಯದ ತಾಲೀಮು ಮುಂದುವರಿಸಿದ್ದಾರೆ.

Also read: ಅಪರೂಪದ ಸಂಗತಿಗೆ ಸಾಕ್ಷಿಯಾದ ಬೀಳ್ಕೊಡುಗೆ ಕಾರ್ಯಕ್ರಮ

ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ಸ್ತುತಿಶ್ರೀ, ಈಗ ಸೀನಿಯರ್ ಪರೀಕ್ಷೆಗೆ ಅಭ್ಯಾಸ ನಡೆಸಿದ್ದಾರೆ. ಗುರು ಮೈಥಿಲಿ ಮತ್ತು ಹೇಮಾ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನವನ್ನೂ (ಜ್ಯೂನಿಯರ್ ಪಾಠ) ಕಲಿತ ಸ್ತುತಿಶ್ರೀ, ನರ್ತನ ಅಭ್ಯಾಸಕ್ಕೆ ಹೆಚ್ಚು ಸಮಯ ನೀಡುತ್ತಿರುವುದು ಗಮನಾರ್ಹ. ಪಠ್ಯ ವಿಷಯದಲ್ಲೂ ಚುರುಕಾಗಿರುವ ಈಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಅತ್ಯುನ್ನತ ಶ್ರೇಣಿ ತನ್ನದಾಗಿಸಿಕೊಂಡಿದ್ದು, ಮುಂದೆ ನೃತ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ ಮತ್ತು ನ್ಯಾಯಶಾಸ್ತç (ಲಾ) ಓದುವ ಗುರಿ ಇಟ್ಟುಕೊಂಡಿದ್ದಾರೆ.
ಬಹುಮಾನ- ವೇದಿಕೆ
ಅರಳು ಪ್ರತಿಭೆ ಸ್ತುತಿಶ್ರೀ ನೃತ್ಯಾಸಕ್ತಿಗೆ ಹಲವು ವೇದಿಕೆಗಳು ಪ್ರೋತ್ಸಾಹ ನೀಡಿದವು. ಕೆಲವು ಬಹುಮಾನಗಳೂ ಪ್ರೇರಣೆ ತುಂಬಿದವು. ಬೆಂಗಳೂರು ಇಸ್ಕಾನ್ ಹೆರಿಟೇಜ್ ಫೆಸ್ಟಿವಲ್‌ನ ಶಾಸ್ತ್ರೀಯ ನೃತ್ಯದಲ್ಲಿ ವಿನ್ನರ್ ಆದ ಸ್ತುತಿಶ್ರೀಗೆ ರೋಟರಿ ಇಂದಿರಾನಗರ ಆಯೋಜಿಸಿದ್ದ ನೃತ್ಯ ಸ್ಪರ್ಧೆಯಲ್ಲೂ ಪದಕ ದೊರಕಿತು. ನೃತ್ಯ ಶಾಲೆ ವಾರ್ಷಿಕೋತ್ಸವಗಳು, ಜಯನಗರ ರಾಘವೇಂದ್ರ ಸ್ವಾಮಿಗಳ ಮಠ, ಕಟೀಲು ದುರ್ಗಾ ಪರಮೇಶ್ವರಿ ಸನ್ನಿಧಿ, ಸತ್ಯಗಾಲಂ ಕೋಟೆ ವೆಂಕಟರಮಣ ದೇಗುಲ, ಪುತ್ತೂರಿನ ಮಹಾಬಲ ಲಲಿತಕಲಾ ಸಭಾ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನಕ್ಕೆ ಅವಕಾಶ ದೊರೆತಿದ್ದು ದೈವಿಕ ಕೃಪೆಯೇ ಸರಿ ಎಂದು ಭಾವ ಭರಿತರಾಗಿ ಹೇಳುತ್ತಾರೆ ಆಕೆಯ ತಾಯಿ ಮಾಧುರಿ ಮೈಸೂರು.

ತುಂಬು ಕುಟುಂಬದ ಸಂಸ್ಕೃತಿ :
ಸಂಸ್ಕಾರವಂತ ವಂಶದಲ್ಲಿ, ಸಂಸ್ಕೃತಿ ಮತ್ತು ಸದ್ವಿಚಾರಗಳಿರುವ ಪರಿಸರದಲ್ಲಿ ಜನಿಸಿದ ಮಕ್ಕಳು ಯಾವತ್ತೂ ನಮ್ಮ ಪರಂಪರೆಯ ಪ್ರತೀಕಗಳೇ ಆಗಿರುತ್ತಾರೆ ಎಂಬುದಕ್ಕೆ ಸ್ತುತಿಶ್ರೀ ಒಂದು ಮಾದರಿ. ಮೈಸೂರಿನ ಶೆಲ್ವ ನಾರಾಯಣ ಮತ್ತು ಮೈಥಿಲಿ ಅವರಿಗೆ ಸಂಗೀತ, ವೇದ ರಂಗದಲ್ಲಿ ಇರುವ ಶ್ರದ್ಧಾ ಭಕ್ತಿಗಳು ಅವರ ಪುತ್ರಿ ಮಾಧುರಿ ಅವರಲ್ಲಿ ಮೇಳೈಸಿದವು. ಸಾಕಷ್ಟು ಸಂಗೀತ ಕಛೇರಿಗಳಿಗೆ ಹೋಗಿ ತನ್ಮಯತೆಯಿಂದ ಗಾಯನ ಮಾಧುರ್ಯ ಆಲಿಸುವುದು ಮಾಧುರಿಯ ಪರಮಾಪ್ತ ಹವ್ಯಾಸವಾಯಿತು. ಮಗಳು ಸ್ತುತಿಶ್ರೀಗೂ ಈ ಮೂಲಕ ತಾಳ- ಶೃತಿಗಳ ಪರಿಚಯವಾಯಿತು. ಸಂಗೀತ ಕೇಳ್ಮೆ ದಿನಚರಿಯೇ ಆಗಿಬಿಟ್ಟಿತು. ಇದರ ಫಲವೇ ಸ್ತುತಿ ಈಗ ನೃತ್ಯ ರಂಗದ ಯುವ ಪ್ರತಿಭೆ. ಅಜ್ಜ ರಂಗಸ್ವಾಮಿ (ವೆಂಕಟೇಶ್ ಅವರ ತಂದೆ) ಬಾಲ್ಯದಲ್ಲಿ ಹೇಳುತ್ತಿದ್ದ ಪೌರಾಣಿಕ ಕಥೆಗಳನ್ನು ಕೇಳುತ್ತಲೇ ತುಂಬು ಕುಟುಂಬದಲ್ಲಿ ಬೆಳೆದ ಸ್ತುತಿಶ್ರೀಗೆ ಸಹಜವಾಗಿಯೇ ರಾಮಾಯಣ, ಮಹಾಭಾರತ, ಭಾಗವತದ ಪಾತ್ರಗಳ ಬಗ್ಗೆ ಕುತೂಹಲಾಸಕ್ತಿ ಹೆಚ್ಚಾಯಿತು. ಇವೆಲ್ಲವುಗಳ ಫಲವೇ ಆಕೆಗೆ ಸಂಗೀತ ಮತ್ತು ನೃತ್ಯದ ಅಭಿರುಚಿ ಮೂಡಿಸಲು ಕಾರಣೀಭೂತವಾಗಿವೆ.
ಸ್ತುತಿಶ್ರೀ ತಂದೆ ವೆಂಕಟೇಶ್ ವೃತ್ತಿಯಲ್ಲಿ ಹಾರ್ಡ್’ವೇರ್ ಇಂಜಿನಿಯರ್ ಆಗಿದ್ದರೂ ಪ್ರವೃತ್ತಿಯಲ್ಲಿ ವೇದಾಧ್ಯಯನಕಾರರು. ಮಗಳ ಆಸಕ್ತಿಗಳಿಗೆ ಅವರು ಬೆನ್ನೆಲುಬಾಗಿದ್ದಾರೆ. ಒಟ್ಟಾರೆ ಸುಸಂಸ್ಕೃತ-ತುಂಬು ಕುಟುಂಬದ ಪ್ರತಿಭೆಯೊಂದು ಸಜ್ಜನ ಬಂಧುಗಳ, ವಿವಿಧ ರಂಗದ ವಿದ್ವಾಂಸರ ಸಮ್ಮುಖ ರಂಗಾರೋಹಣ ಮಾಡುತ್ತಿರುವುದು ಒಂದು ಸುಕೃತ- ಸಮ್ಮಿಲನ- ಸತ್ಸಂಗವೇ ಆಗಿದೆ.

http://kalpa.news/wp-content/uploads/2023/05/VID-20230516-WA0005-1.mp4

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited

Tags: BangaloreKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaಬೆಂಗಳೂರು
Share198Tweet123Send
Previous Post

ಅಪರೂಪದ ಸಂಗತಿಗೆ ಸಾಕ್ಷಿಯಾದ ಬೀಳ್ಕೊಡುಗೆ ಕಾರ್ಯಕ್ರಮ

Next Post

ಗೊಂಡ ಕುರುಬ, ಕುರುಬ ಗೊಂಡ ಪರ್ಯಾಯ ಪದಗಳೆಂದು ಪರಿಗಣಿಸಿ: ಕೇಂದ್ರಕ್ಕೆ ಗೊಂಡ ಸಮಾಜದಿಂದ ಮನವಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಗೊಂಡ ಕುರುಬ, ಕುರುಬ ಗೊಂಡ ಪರ್ಯಾಯ ಪದಗಳೆಂದು ಪರಿಗಣಿಸಿ: ಕೇಂದ್ರಕ್ಕೆ ಗೊಂಡ ಸಮಾಜದಿಂದ ಮನವಿ

ಗೊಂಡ ಕುರುಬ, ಕುರುಬ ಗೊಂಡ ಪರ್ಯಾಯ ಪದಗಳೆಂದು ಪರಿಗಣಿಸಿ: ಕೇಂದ್ರಕ್ಕೆ ಗೊಂಡ ಸಮಾಜದಿಂದ ಮನವಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯ, ಅಭಿವೃದ್ಧಿ ಶೂನ್ಯ: ಶಾಸಕ ಚನ್ನಬಸಪ್ಪ ವಾಗ್ದಾಳಿ

ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸಂಪೂರ್ಣ ನಿರ್ನಾಮ: ಶಾಸಕ ಚನ್ನಬಸಪ್ಪ ಗುಡುಗು

April 23, 2026
ಬೇಸಿಗೆ ದಟ್ಟಣೆ ನಿರ್ವಹಣೆ: ಹುಬ್ಬಳ್ಳಿ–ಗಾಜಿಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

ಮೈಸೂರು-ತಾಳಗುಪ್ಪ, ಶಿವಮೊಗ್ಗ ಸೇರಿ 4 ರೈಲುಗಳು ಸಂಚಾರದಲ್ಲಿ ವ್ಯತ್ಯಯ

April 23, 2026
ಕ್ರೈಸ್ಟ್‌ಕಿಂಗ್: ಎಸ್‌ಎಸ್‌ಎಲ್‌ಸಿಯಲ್ಲಿ ಅಮೋಘ ಸಾಧನೆ | ಸತತ 17ನೇ ಬಾರಿಗೆ ಶೇ.100 ಫಲಿತಾಂಶ

ಕ್ರೈಸ್ಟ್‌ಕಿಂಗ್: ಎಸ್‌ಎಸ್‌ಎಲ್‌ಸಿಯಲ್ಲಿ ಅಮೋಘ ಸಾಧನೆ | ಸತತ 17ನೇ ಬಾರಿಗೆ ಶೇ.100 ಫಲಿತಾಂಶ

April 23, 2026
ಶಿವಮೊಗ್ಗ | ರಾಮಕೃಷ್ಣ ವಿದ್ಯಾ ಸಂಸ್ಥೆಯ ಮೂರೂ ಶಾಲೆಗಳಲ್ಲಿ ಶೇ.100 ಫಲಿತಾಂಶ

ಶಿವಮೊಗ್ಗ | ರಾಮಕೃಷ್ಣ ವಿದ್ಯಾ ಸಂಸ್ಥೆಯ ಮೂರೂ ಶಾಲೆಗಳಲ್ಲಿ ಶೇ.100 ಫಲಿತಾಂಶ

April 23, 2026
ಡಿ.17ರಂದು ಗಾಮ ಗ್ರಾಮದ ಶ್ರೀವೀರಭದ್ರೇಶ್ವರ ಸ್ವಾಮಿ ರಥೋತ್ಸವ

ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯ ಎರಡೂ ಕಾಲು ಮುರಿತ | ಇಬ್ಬರಿಗೆ ಗಂಭೀರ ಗಾಯ

April 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL