ಬೀದರ್: ಸೆ:17;
ಜೋಡಿ ಕೊಲೆ: ಆರೋಪಿ ಬಂಧನ
ಬೀದರ ನಗರ ಬೆಚ್ಚಿ ಬಿಳಿಸಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನ ಎರಡೇ ದಿನದಲ್ಲಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಸೆ.14 ರಂದಷ್ಟೇ ನಗರದ ನೆಹರು ಕ್ರೀಡಾಂಗಣ ಪಕ್ಕದ ಮನೆಯಲ್ಲಿ ಸುಮೀತ್ ಮತ್ತು ಶಿವಕುಮಾರ ಇಬ್ಬರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ನಂತರ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಸಚ್ಚಿನ್(28) ಬಂಧಿತ ಆರೋಪಿ.
ಪ್ರಕರಣ ಗಂಭೀರವಾಗಿ ತೆಗೆದುಕೊಂಡ ಎಸ್.ಪಿ ಪ್ರಕಾಶ ನಿಕ್ಕಂ ಇಂದು ಅರೋಪಿ ಸಚ್ಚಿನನ್ನ ಬಂಧಿಸಿದ್ದಾರೆ.
ಬಂಧಿತ ಸಚ್ಚಿನ ಹತ್ಯೆ ಮಾಡಿದ್ದ ಇಬ್ಬರೊಂದಿಗೆ ಬೆಳಗಿನ ಜಾವ ಆರು ಗಂಟೆವರೆಗೂ ಕುಡಿದು ಆನಂತರ ಹುಡುಗಿ ಸಲುವಾಗಿ ಜಗಳ ಆಡಿಕೊಂಡಿದ್ದಾರೆ. ಆದ್ರೇ ವಿಕೋಪಕ್ಕೆ ಜಗಳ ಹೋಗಿ ಸಚ್ಚಿನ್ ಮೊದಲು ಸುಮೀತ್ ಗೆ ಹೊಡೆದಿದ್ದಾನೆ. ಆನಂತರ ಅದನ್ನ ಪ್ರಶ್ನಿಸಿದ ಶಿವಕುಮಾರ ಗೆ ಹೊಡೆದು ಗ್ಯಾಸ್ ಬ್ಲಾಸ್ಟ್ ಮಾಡಲು ಪ್ರಯತ್ನಿಸಿದ ಸಚ್ಚಿನ್ ಅದು ಆಗದಿದ್ದಾಗ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರ್ಯಾಗಿಂಗ್ ಕಿರುಕುಳ: ಯುವತಿ ಆತ್ಮಹತ್ಯೆ
ಬಿ.ಇ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬೀದರನ ಗುರುನಾನಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಪ್ರಥಮ ಓದುತ್ತಿದ್ದ ಐಶ್ವರ್ಯ (25) ಸಂಜೆ ಹಾಸ್ಟೆಲ್ ನ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ರ್ಯಾಗಿಂಗ್ ಹಿನ್ನೆಲೆ ಮತ್ತು ವಸತಿ ನಿಲಯದ ವಾರ್ಡನ್ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಹಾಸ್ಟೆಲ್ ಪ್ರವೇಶ ಪಡೆದಾಗಿನಿಂದ ಹಿರಿಯ ವಿದ್ಯಾಥರ್ಿಗಳಿಂದ ರ್ಯಾಗಿಂಗ್ ಮಾಡುತ್ತಿದ್ದನ್ನ ತಂದೆಗೆ ಹೇಳಿಕೊಂಡಿದ್ದಳು ಎನ್ನಲಾಗಿದೆ.
ಬಿಜಾಪುರ ಮೂಲದ ಯುವತಿಯಾಗಿದ್ದು ಆದ್ರೇ ತಂದೆ ತಾಯಿ ಬರುವ ಮುನ್ನವೇ ಕಾಲೇಜು ಆಡಳಿತ ಮಂಡಳಿ ಹಾಗೂ ವಸತಿ ನಿಲಯದ ಸಿಬ್ಬಂದಿಗಳು ತರಾತುರಿಯಲ್ಲಿ ಮೃತದೇಹ ಕೆಳಗಿಳಿಸಿ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಿ ಕೇಸ್ ಮುಚ್ಚಿ ಹಾಕಲು ಯತ್ನ ಮಾಡಿದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಸಂಜೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಯುವತಿ ಮೈಮೆಲಿದ್ದ ಒಡವೆಗಳು ಕೂಡ ಕಾಣೆಯಾಗಿವೆ.
Discussion about this post