ಕಲ್ಪ ಮೀಡಿಯಾ ಹೌಸ್ | ಬೀದರ್ |
ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಬ್ಯಾಂಕ್ ಸಾಲ ಹಿಂತಿರುಗಿಸಲು ಹೆಚ್ಚಿನ ಕಾಲಾವಕಾಶ ನೀಡಿ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ MLA Shylendra Beldale ಮನವಿ ಮಾಡಿದರು.
ಬೆಳಗಾವಿ ಸುವರ್ಣವಿಧಾನಸೌಧ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಕರ್ನಾಟಕದ ಅಭಿವೃದ್ಧಿ ಕುರಿತು ಹಾಗೂ ರಾಜ್ಯದ ಬರಗಾಲದ ಕುರಿತು ಚರ್ಚಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಷ್ಟದಲ್ಲಿರುವ ರೈತರಿಗೆ ಡಿಸಿಸಿ ಬ್ಯಾಂಕ್ನಿಂದ ಸಾಲದ ನೋಟಿಸ್ ನೀಡಲಾಗುತ್ತಿದೆ ಮತ್ತು ಕೆಲ ರೈತರು ಖಾಸಗಿಯವರಲ್ಲಿಯೂ ವಿವಿಧ ಸಂಸ್ಥೆಯಲ್ಲಿ ಸಹ ಸಾಲ ಪಡೆದಿದ್ದಾರೆ ಅಂತವರಿಗೆ ಸಾಲ ವಸುಲಿಗಾರರು ತೊಂದರೆ ನೀಡುತ್ತಿದ್ದಾರೆ ಅದನ್ನು ತಡೆಹಿಡಿಯಬೇಕು ಡಿಸಿಸಿ ಬ್ಯಾಂಕನಿAದ ಸಹ ಕಾಲಾವಕಾಶ ಕಲ್ಪಿಸಬೇಕು. ಇದೀಗ ತೀವ್ರ ಬರಗಾಲ ಇರುವ ಕಾರಣ ರೈತರ ಬಳಿ ಹಣವಿಲ್ಲ ಹೀಗಾಗಿ ಸಾಲ ಹಿಂತಿರುಗಿಸಲು ಕಾಲಾವಕಾಶ ಮಾಡಿಕೊಡಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
Also read: ಮೋದಿಯವರು ಏನೇ ಮಾಡಿದ್ದರೂ ಅದು ದೇಶದ ಜನರಿಗಾಗಿಯೇ ಹೊರತು, ತಮ್ಮ ಪಕ್ಷಕ್ಕಾಗಿಯಲ್ಲ : ಅಮಿತ್ ಶಾ
ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿ ರೈತರು ಸಂಕಷ್ಟದಲ್ಲಿ ಇರುವ ಕಾರಣ ಅವರಿಗೆ ಶೀಘ್ರವೇ ಪರಿಹಾರ ನೀಡಬೇಕು ಹಾಗೂ ಸಾಲತಿರಿಸಲು ಹೆಚ್ಚಿನ ಕಾಲಾವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಮತ್ತು ಕಲ್ಯಾಣ ಕರ್ನಾಟಕ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ನಡೆದಿದೆ ಅದರಲ್ಲಿ ಪರಿಶೀಲನೆ ನಡೆಸಿ ಕ್ಷೇತ್ರವಾರು ಸಮನಾಗಿ ಅನುದಾನ ನೀಡಬೇಕು ಎಂದರು.
ಶುದ್ಧ ಕುಡಿಯುವ ನೀರಿನ ಘಟಕದಿಂದ ಬಹು ಹಳ್ಳಿಗೆ ನೀರು ಸರಬರಾಜು ಯೋಜನೆ ಕುರಿತು ಅಧಿವೇಶನದಲ್ಲಿ ಯಾವುದೆ ರೀತಿಯ ಚರ್ಚೆ ನಡೆದಿಲ್ಲ ಈ ವಿಷಯ ಕುರಿತು ಚರ್ಚಿಸಿ ಹೆಚ್ಚಿನ ಅನುದಾನ ನೀಡುವುದು ಅಗತ್ಯವಿದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post