ಕಲ್ಪ ಮೀಡಿಯಾ ಹೌಸ್ | ಬೀದರ್ |
ದೇವರಿಗೆ ಕೊಡುವಷ್ಟು ನಾವ್ಯಾರು ದೊಡ್ಡವರಲ್ಲ. ದೇವರು ಯಾವ್ಯಾವ ಕೆಲಸಗಳನ್ನು ಯಾರ್ಯಾರ ಕೈಯಿಂದ ಮಾಡಿಸಿಕೊಳ್ಬೇಕು ಅವರಿಂದ ಆ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ MLA Bandeppa Khashempur ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬರಿದಾಬಾದ್ ಗ್ರಾಮದಲ್ಲಿ ಮಂಗಳವಾರ ನಡೆದ ಶ್ರೀ ಮಹಾಲಕ್ಷ್ಮಿ ಮಹಾದ್ವಾರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇವರಿಗೆ ದಾನ ಮಾಡುವಷ್ಟು ನಾವುಗಳು ದೊಡ್ಡವರಲ್ಲ. ದೇವರ ಅನುಗ್ರಹದಂತೆ ಕೆಲಸ ಕಾರ್ಯಗಳು ನಡೆಯುತ್ತಿರುತ್ತವೆ ಎಂದರು.
ಮಹಾಲಕ್ಷ್ಮಿ ತಾಯಿಯ ಮಹಾದ್ವಾರ ನಿರ್ಮಿಸಿರುವುದು ಉತ್ತಮ ಕಾರ್ಯವಾಗಿದೆ. ಗ್ರಾಮದವರೆಲ್ಲರೂ ಒಗ್ಗೂಡಿ ಈ ಕೆಲಸ ಮಾಡಿದ್ದಾರೆ. ಮಹಾಲಕ್ಷ್ಮಿ ತಾಯಿ ಗ್ರಾಮಸ್ಥರಿಗೆ ಸುಖ, ಶಾಂತಿ, ನೆಮ್ಮದಿ ಕರುಣಿಸಲಿ. ಗ್ರಾಮದಲ್ಲಿ ಸದಾಕಾಲವೂ ಒಳ್ಳೆಯ ಕೆಲಸಗಳು ನಡೆಯುವಂತಾಗಲಿ. ನಾಡಿನ ಜನತೆಗೆ ಒಳಿತಾಗಲಿ ಎಂದು ನಾನು ಕೂಡ ತಾಯಿ ಮಹಾಲಕ್ಷ್ಮಿಯಲ್ಲಿ ಪ್ರಾರ್ಥಿಸಿದ್ದೇನೆ. ನಾವೆಲ್ಲರೂ ಸೇರಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಸಾಗಬೇಕಾಗಿದೆ ಎಂದು ಹೇಳಿದರು.
Also read: ಭದ್ರಾ ಜಲಾಶಯದಿಂದ ನೀರು ಬಿಡುಗಡೆ ನದಿ ಪಾತ್ರದ ಜನರು ಎಚ್ಚರಿಕೆಯಿಂದಿರಲು ಸೂಚನೆ
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆನಂದಾಶ್ರಮದ ಮಾತೆ ಜಗದೇಶ್ವರಿ ಅಮ್ಮನ್ನವರು ವಹಿಸಿದ್ದರು. ಪ್ರಮುಖರಾದ ಮಾಣಿಕ್ಯಪ್ಪ ಎಸ್ ಲದ್ದೇಕರ್, ಬಸವರಾಜ ಪಾಟೀಲ್, ಬಾಬುರಾವ್ ಎಸ್ ಲದ್ದೇಕರ್, ಸುಭಾಷ್ ನಾಗೋರೆ, ಶ್ರೀದೇವಿ ಎಸ್ ಪರಿತಾಬಾದೆ, ತಿಪ್ಪಣ್ಣ ಬಿ ಪಾಟೀಲ್, ದೇವಪ್ಪ ಎಮ್ ಚಾಂಗಲೇರಾ, ತುಕ್ಕಾರಾಮ್ ಚಿಮ್ಕೊಡೆ, ಸಂಗ್ರಾಮ್ ಬೋರಾಳಕರ್, ಗಾಳೆಪ್ಪ ಸಕ್ರೆ, ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್, ಶ್ರೀಪತಿ ಲದ್ದೇಕರ್, ಬಸವರಾಜ್ ಹಾಲರೆಡ್ಡಿ, ಲಕ್ಮಣ ದೇವಿಂದ್ರಪ್ಪ ಲದ್ದೇಕರ್, ನವೀನ್ ಕುಮಾರ್, ಅಣ್ಣಪ್ಪ, ಅಶೋಕ್, ವೈಶಾಲಿ, ರಮೇಶ್ ಬುದೇರಾ, ಲಕ್ಷ್ಮೀಬಾಯಿ, ಸರಸ್ವತಿ, ಸಂಗೀತಾ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post