ಕಲ್ಪ ಮೀಡಿಯಾ ಹೌಸ್ | ಬೀದರ್ |
ಬಸವಕಲ್ಯಾಣದ ಶ್ರೀ ಬಸವೇಶ್ವರ ಜಾತ್ರಾ ರಥೋತ್ಸವದಲ್ಲಿ Shri Basaveshwara Jathra Rathothsava ರಥದ ಚಕ್ರಕ್ಕೆ ವ್ಯಕ್ತಿಯೋರ್ವನ ಸಿಲುಕಿ ಎರಡೂ ಕಾಲು ಕಟ್ ಆಗಿದ್ದು, ಇಬ್ಬರ ಕಾಲಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ನಡೆ ದಿದೆ.
ನಗರದ ಥೇರು ಮೈದಾನದಲ್ಲಿ ಶ್ರೀ ಬಸವೇಶ್ವರ ಜಾತ್ರಾ ರಥೋತ್ಸವ ನಡೆಯುತ್ತಿತ್ತು. ಲಕ್ಷಾಂತರ ಭಕ್ತ ಸಮೂಹ ಥೇರು ನೋಡಲು ಆಗಮಿಸಿತ್ತು. ಉತ್ಸಾಹದಿಂದ ರಥವನ್ನು ಎಳೆಯಲು ಬಸವಭಕ್ತರು ಮುಂದಾಗಿದ್ದು, ಈ ವೇಳೆ ಏಕಾಏಕಿ ನುಕಾಟ ತಳ್ಳಾಟ ಆಗಿದ್ದರಿಂದ ಘಟನೆ ಸಂಭವಿಸಿದೆ.
ಜಾತ್ರಾ ರಥದಡಿ ಸಿಲುಕಿ ಧನರಾಜ್ ಎಂಬುವವರ ಎರಡೂ ಕಾಲು ಕತ್ತರಿಸಿದೆ. ಇಬ್ಬರು ವ್ಯಕ್ತಿಗಳ ಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಭೀಮಾಶಂಕರ ಎಂಬಾತನಿಗೆ ಸಣ್ಣಪುಟ್ಟ ಗಾಯವಾಗಿದೆ. ಸದ್ಯ ಗಾಯಾಳುಗಳನ್ನು ಬಸವಕಲ್ಯಾಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಓರ್ವ ಗಾಯಾಳುವನ್ನು ಕಲಬುರಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















