ಕಲ್ಪ ಮೀಡಿಯಾ ಹೌಸ್ | ಬೀದರ್ |
ಮಾಜಿ ಮುಖ್ಯಮಂತ್ರಿಗಳು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ H D Kumaraswamy ಹಾಗೂ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರ Bandeppa Khashempur ಸಮ್ಮುಖದಲ್ಲಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆಗೆ ಬೃಹತ್ ಜನ ಬೆಂಬಲ ವ್ಯಕ್ತವಾಗಿದೆ.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಮಲಾಪೂರ ಗ್ರಾಮದಿಂದ ಶುಕ್ರವಾರ ಬೆಳಗ್ಗೆ ಆರಂಭವಾದ ರಥಯಾತ್ರೆಯನ್ನು ಕ್ಷೇತ್ರದ ಜನತೆ ವಿಶಿಷ್ಟ ಹಾರಗಳು, ವಿವಿಧ ಕಲಾ ತಂಡಗಳೊಂದಿಗೆ ಸ್ವಾಗತಿಸಿಕೊಂಡರು. ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಲಕ್ಷಾಂತರ ಜನರು ಮಾಜಿ ಸಚಿವ ಕುಮಾರಣ್ಣರವರ ಸ್ವಾಗತಕ್ಕಾಗಿ ಕಾತರದಿಂದ ಕಾಯ್ದುಕೊಂಡು ಅವರನ್ನು ತಮ್ಮೂರಿಗೆ ಬರಮಾಡಿಕೊಂಡರು.
ಯಾತ್ರೆ ನಡೆದುಬಂದ ದಾರಿ:
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಮಲಾಪೂರ ಗ್ರಾಮದಿಂದ ಆರಂಭವಾದ ದಕ್ಷಿಣ ಕ್ಷೇತ್ರದ ಪಂಚರತ್ನ ರಥಯಾತ್ರೆಯನ್ನು ಗ್ರಾಮಸ್ಥರು ಎತ್ತಿನ ಬಂಡಿಯೊಂದಿಗೆ ಸ್ವಾಗತಿಸಿ, ಬೈಕ್ ರ್ಯಾಲಿ ನಡೆಸಿ ವಿವಿಧ ಹೂವಿನ ಹಾರಗಳನ್ನು ಹಾಕಿದರು. ಇದೇ ವೇಳೆ ಹೆಚ್ಡಿಕೆ ಮತ್ತು ಖಾಶೆಂಪುರ್ ಎತ್ತಿನ ಗಾಡಿಯಲ್ಲಿಯೇ ಸಾಗಿದರು. ಇದೇ ವೇಳೆ ಗ್ರಾಮಸ್ಥರು ಮೊಸಂಬಿ (ಕಿತ್ತಾಳೆ) ಹಣ್ಣಿನ ವಿಶೇಷ ಹಾರ ಹಾಕಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಕುಮಾರಸ್ವಾಮಿರವರು, ಬಡವರ, ರೈತರ, ಗ್ರಾಮೀಣ ಜನರ ಒಳಿತಿಗಾಗಿ ಅನೇಕ ಯೋಜನೆಗಳನ್ನು, ರೈತರಿಗಾಗಿ ಮತ್ತು ಗ್ರಾಮೀಣ ಭಾಗದ ಜನರಿಗೆ ಶಾಶ್ವತ ಕಾರ್ಯಕ್ರಮಗಳನ್ನು ತರುವ ಉದ್ದೇಶದಿಂದ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಸ್ತ್ರೀ ಶಕ್ತಿ ಸ್ವಸಾಹಯ ಗುಂಪುಗಳ ಸಾಲವನ್ನು ನಾವು ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ ಮಾಡುತ್ತೇವೆ. ಬಿದಿಬದಿಯ ವ್ಯಾಪಾರಿಗಳಿಗೆ ಸರ್ಕಾರದಿಂದ ಬಡ್ಡಿ ರಹಿತ ನೇರವು ನೀಡುತ್ತೇವೆಂದರು.
ಬಂಡೆಪ್ಪ ಖಾಶೆಂಪುರ್ ರವರು ಈಗಾಗಲೇ ಎರಡು ಬಾರಿ ಸಚಿವರಾಗಿ ಅನೇಕ ಜನ ಪರ ಕೆಲಸಗಳನ್ನು ಮಾಡಿದ್ದಾರೆ. ಅವರು ನಿಮ್ಮೆಲ್ಲರಿಗೆ ಆತ್ಮೀಯರಾಗಿದ್ದಾರೆ. ಅವರಿಗೆ ನಿಮ್ಮ ಮತ ನೀಡಿ ಎಂದು ಹೆಚ್ಡಿಕೆ ಮನವಿ ಮಾಡಿದರು.
ನಾಗೋರಾ ಗ್ರಾಮಕ್ಕೆ ಆಗಮಿಸಿದ ಪಂಚರತ್ನ ರಥಯಾತ್ರೆ
ಅಮಲಾಪೂರದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದ ಗ್ರಾಮಸ್ಥರು ಬಳಿಕ ನಾಗೋರಾ ಕಡೆಗೆ ಪಂಚರತ್ನ ರಥಯಾತ್ರೆಯ ರಥವನ್ನು ಕಳಿಸಿಕೊಟ್ಟರು. ಅಮಲಾಪೂರ – ನಾಗೋರಾದವರೆಗೂ ಅದ್ದೂರಿಯಾಗಿ ಸಾಗಿದ ರ್ಯಾಲಿಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.
ಪುದಿನ ಹಾರದೊಂದಿಗೆ ನಾಗೋರಾಕ್ಕೆ ಅದ್ದೂರಿ ಸ್ವಾಗತ*
ಪಂಚರತ್ನ ರಥಯಾತ್ರೆಯ ರಥತವನ್ನ ನಾಗೋರಾ ಗ್ರಾಮಸ್ಥರು ಪುದೀನಾ ಹಾರದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ರಸ್ತೆಯೂದ್ದಕ್ಕೂ ಸಾವಿರಾರು ಬೈಕ್, ಕಾರ್ ಗಳ ರ್‍ಯಾಲಿಯಲ್ಲಿದ್ದವು. ಬಳಿಕ ಯಾಕತಪೂರ್ ದಲ್ಲೂ ಪುದಿನಾ ಹಾರದೊಂದಿಗೆ ಸ್ವಾಗತಿಸಿದರು. ಮಾರ್ಗ ಮಧ್ಯದ ಯಾಕತಪೂರ್ ದ ಲಿಟಲ್ ಪ್ಲಾವರ್ ಶಾಲೆಯ ಮಕ್ಕಳು ಹೆಚ್ಡಿಕೆ ಅವರಿಗೆ ಸನ್ಮಾನಿಸಿದರು.
ಮನ್ನಳಿಗೆ ಅದ್ದೂರಿಯಾಗಿ ಸ್ವಾಗತ
ಹೆಚ್ಡಿಕೆ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಮನ್ನಳ್ಳಿ ಗ್ರಾಮಸ್ಥರು. ಕಂಬಳಿ ಹಾರದೊಂದಿಗೆ ಅದ್ದೂರಿ ಸ್ವಾಗತಿಸಿದರು. ಕಳಸ, ಕುಂಭಮೇಳದೊಂದಿಗೆ ಮಹಿಳೆಯರು ಪಾಲ್ಗೊಂಡಿದ್ದರು.
Also read: ನೂತನ ಟವರ್ ಅಳವಡಿಕೆ ಹಿನ್ನೆಲೆ ಬಿಎಸ್‌ಎನ್‌ಎಲ್ ಅಧಿಕಾರಿಗಳೊಂದಿಗೆ ಶಾಸಕ ಹಾಲಪ್ಪ ಸಭೆ
ಮನ್ನಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿರವರು, ನಾವು ರೈತರ, ಬಡವರ, ಶ್ರಮಿಕರ ಪರವಾಗಿ ಕೆಲಸ ಮಾಡುವ ಪಣ ತೊಟ್ಟಿದ್ದೇವೆ. ನಾವು ಅಧಿಕಾರಕ್ಕೆ ಬಂದರೇ ಪಂಚ ಯೋಜನೆಗಳನ್ನು ಜಾರಿಗೆ ತರುತ್ತೇವೆ. ನಾಡಿನ ಒಳಿತಿಗಾಗಿ ಶ್ರಮಿಸುತ್ತೇವೆ. ನಮಗೆ ಮತ ನೀಡಿ ಸಂಪೂರ್ಣ ಐದು ವರ್ಷಗಳ ಸರ್ಕಾರ ತರಲು ಅನುಕೂಲ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಮನ್ನಳ್ಳಿ ಗ್ರಾಮದಲ್ಲಿ ಇಷ್ಟೊಂದು ದೊಡ್ಡಮಟ್ಟದ ಜನಸೇರಿ ನಮ್ಮ ಪಕ್ಷವನ್ನು ಬೆಂಬಲಿಸಿದ್ದಿರಿ. ಪಕ್ಷದ ಪರವಾಗಿ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು. ಬಳಿಕ ಸಿಂದೋಲ್ ನಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಕಂಬಳಿ ಹಾಕಿ ರಥಯಾತ್ರೆಯನ್ನು ಸ್ವಾಗತಿಸಿದರು. ಸಿಂದೋಲ್, ರಾಜಗಿರ, ಪಾತರಪಳ್ಳಿ ಸುತ್ತಮುತ್ತಲಿನ ಗ್ರಾಮಗಳ ಜನರು ಅಲ್ಲಿದ್ದರು.
ಐದು ತಿಂಗಳ ಬಳಿಕ 24 ತಾಸು ಕರೆಂಟ್
ಐದು ತಿಂಗಳು ತಡೆಯಿರಿ, ಕುಮಾರಣ್ಣ ಮುಖ್ಯಮಂತ್ರಿಯಾದ ನಂತರ ದಿನದ 24 ತಾಸು ರೈತರಿಗೆ ವಿದ್ಯುತ್ ಪೂರಕೆ ಮಾಡಲಾಗುತ್ತದೆ. ಎಲ್ಲಾ ರೀತಿಯಿಂದಲ್ಲೂ ಜನಪರ ಯೋಜನೆಗಳನ್ನು ಅವರು ಅಧಿಕಾರಕ್ಕೆ ಬಂದ ನಂತರ ಜಾರಿಗೆ ತರುತ್ತೇವೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.
ಸ್ಪಷ್ಟವಾದ ಬಹುಮತದ ಸರ್ಕಾರವನ್ನು ತಾವು ತಂದರೆ ನಿಜವಾದ ರೈತಪರವಾದ ಯೋಜನೆಗಳನ್ನು ಜಾರಿಗೆ ತರುತ್ತೇವೆ. ರೈತರು ಸಾಲಗಾರರಾಗದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೆಚ್ಡಿಕೆ ಭರವಸೆ ನೀಡಿದರು.
ಬಳಿಕ ಪಂಚರತ್ನ ರಥಯಾತ್ರೆ ಬಂಗೂರು, ಬೇಮಳಖೇಡ, ಉಡಮನಳ್ಳಿ, ಕರಕನಳ್ಳಿ, ಚಾಂಗಲೇರಾ ಸೇರಿದಂತೆ ವಿವಿಧ ಗ್ರಾಮಗಳಿಗೆ ತಲುಪಿತು. ಇದೇ ವೇಳೆ ಕರಕನಳ್ಳಿಯ ಗಂಗಾಧರ ಬುಕ್ಕ ಪ್ರಭು ದೇವಸ್ಥಾನ, ಚಾಂಗಲೇರಾದ ವೀರಭದ್ರೇಶ್ವರ ದೇವಸ್ಥಾನಗಳಿಗೆ ರಥಯಾತ್ರೆ ಸಾಗಿತು. ಜೆಡಿಎಸ್ ಜಿಲ್ಲಾಧ್ಯಕ್ಷ, ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಮೇಶ ಪಾಟೀಲ್ ಸೋಲಪೂರ್ ರವರು ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post