ಕಲ್ಪ ಮೀಡಿಯಾ ಹೌಸ್ | ಬೀದರ್ |
65ನೇ ಧಮ್ಮ ಚಕ್ರ ಪರಿವರ್ತನ ಹಾಗೂ ಅಶೋಕ ವಿಜಯ ದಶಮಿಯ ಅಂಗವಾಗಿ ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಮನ್ನಾಎಖೇಳ್ಳಿ ಹತ್ತಿರದ ರೇಕುಳಗಿ ಮೌಂಟ್ ನ ಬುದ್ಧವಚನ ಧಾರ್ಮಿಕ ಅಧ್ಯಯನ ಕೇಂದ್ರ ಟ್ರಸ್ಟ್ ನ ಅನಾಥಪಿಡಂಕ ಬುದ್ಧ ವಿವಾರಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ರೇಕುಳಗಿ ಮೌಂಟ್ ನ ಬುದ್ಧ ವಿಹಾರಕ್ಕೆ ಶುಕ್ರವಾರ ಸಂಜೆ ವೇಳೆಗೆ ಭೇಟಿ ನೀಡಿದ ಅವರು, ಬುದ್ಧನ ದರ್ಶನದ ಬಳಿಕ ಬುದ್ಧ ವಿಹಾರದ ಭಂತೆಗಳೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಬುದ್ಧ ವಿಹಾರದ ಭಂತೆಗಳು, ಮುಖಂಡರು ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಂತೋಷ್ ಎಸ್ ರಾಸೂರು, ಮಲ್ಲಪ್ಪ ಮನ್ನಾಎಖೇಳ್ಳಿ, ಪಾಂಡುರಂಗ ಕಿರಣ್, ಶಿವು ಮನ್ನಾಎಖೇಳ್ಳಿ, ಸಮ್ಮದ್, ಪಾಂಡುರಂಗ ನಿಡವಂಚಿ ಮನ್ನಾಎಖೇಳ್ಳಿ, ವಿಜಯಕುಮಾರ್ ಪಬ್ಬ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post