ಕಲ್ಪ ಮೀಡಿಯಾ ಹೌಸ್ | ಬೀದರ್ |
ದಕ್ಷಿಣ ಕ್ಷೇತ್ರದ ಬರಿದಾಬಾದ, ಬಕ್ಕಚೌಡಿ ವಿವಿಧ ನಗರದ ಜನರು ಕಲುಷಿತ ನೀರು ಸೇವಸಿ ಅಸ್ವಸ್ಥಗೊಂಡು ನಗರದ ಬ್ರಿಮ್ಸ್ ಆಸ್ಪತ್ರೆಗೆ ಹಾಗೂ ಖಾಸಗಿ ವಾಸು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ ಶೈಲೇಂದ್ರ ಬೆಲ್ದಾಳೆ MLA Shailendra Beldale ಅವರು ಆಸ್ಪತ್ರೆಗೆ ಭೇಟಿ ಆರೋಗ್ಯ ವಿಚಾರಿಸಿದರು.
ಮಳೆ ಅವಾಂತರದಿಂದ ಕಲುಷಿತ ನೀರು ಸೇವಿಸಿದ 25 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದು, ಮೂವರ ಆರೋಗ್ಯ ಸ್ಥಿತಿ ಗಂಭೀರವಾದ ಘಟನೆ ನಡೆದಿದ್ದು ಆಸ್ಪತ್ರೆಗೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ ಅವರು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಮಾತನಾಡಿಸಿ, ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು ವೈದ್ಯರ ಜೋತೆ ಸುದೀರ್ಘ ಚರ್ಚೆ ನಡೆಸಿ ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಬಳಿಕ ಮಾತನಾಡಿದ ಅವರು ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಸಾಮಾನ್ಯರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಇದೀಗ ಎರಡುಮೂರು ದಿನಗಳಿಂದ ಬೀದರ್ ದಕ್ಷಿಣ ಕ್ಷೇತ್ರದ ಬರಿದಾಬಾದ, ಬಕ್ಕಚೌಡಿ, ಚಿಟಗುಪ್ಪ ತಾಲ್ಲೂಕಿನ ಬೆಳಕೇರಾ ಮತ್ತು ಬೀದರ್ ನಗರ ಸೇರಿದ ಹಲವು ಜನರು ಕಲುಷಿತ ನೀರು ಸೇವಸಿ ಅಸ್ವಸ್ಥಗೊಂಡು ವಾಂತಿ ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇದು ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
Also read: ವಿಐಎಸ್’ಎಲ್ ಕಾರ್ಮಿಕರಿಗೆ ದ್ರೋಹ ಮಾಡುವುದಿಲ್ಲ: ಸಂಸದ ರಾಘವೇಂದ್ರ ಭರವಸೆ
ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ತಪಾಸಣೆ ಕುರಿತು ಮೂರು ದಿನಗಳಿಂದ ವೈದ್ಯರ ಸಂಪರ್ಕದಲ್ಲಿದ್ದೇನೆ ಇದೀಗ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವ ಜನರ ಆರೋಗ್ಯದ ಖರ್ಚನ್ನು ಸರ್ಕಾರವೇ ಭರಿಸಬೇಕೆಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಸರ್ಕಾರಕ್ಕೆ ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಬ್ರಿಮ್ಸ್ ಆಸ್ಪತ್ರೆ ನಿರ್ದೇಶಕರಾದ ಶಿವಕುಮಾರ ಶೆಟಕಾರ್, ಡಿಎಚ್ ಓ ರತಿಕಾಂತ ಸ್ವಾಮಿ, ಡಿಎಸ್ ಮಹೇಶ್ ಪಾಟೀಲ್, ವೈದ್ಯರಾದ ವಿಜಯ ಕುಮಾರ್, ಇಮಾನವೇಲ್ ಕೊಡ್ಡೆಕರ್, ವಾಸು ಆಸ್ಪತ್ರೆಯ ವೈದ್ಯರಾದ ಡಾ. ಪ್ರಮೋದ್ ಪಿ, ರಾವ. ಡಾ.ಸಂತೋಷ್, ಡಾ. ಶರಣ ಬುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post