ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ನಗರದ ಒಲ್ಡ್ ಸಿಟಿಯ (ಮನಿಯಾರ್ ತಾಲಿಮ್) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ಜಿಲ್ಲಾ ಸರ್ಕಾರಿ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆ ಕಟ್ಟಡ) ಲ್ಲಿನ ಮತಗಟ್ಟೆಯಲ್ಲಿ ಮಾಜಿ ಸಚಿವ, ಜೆಡಿಎಸ್ ಪಕ್ಷದ ಹಿರಿಯ ನಾಯಕ ಬಂಡೆಪ್ಪ ಖಾಶೆಂಪುರ್ #Bandeppa Khashempur ಕುಟುಂಬಸ್ಥರೊಂದಿಗೆ ಮತದಾನ ಮಾಡಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬುದು ಎಲ್ಲದಕ್ಕಿಂತ ದೊಡ್ಡ ಹಬ್ಬವಾಗಿದೆ. ಆಗಾಗಿ ಪ್ರತಿಯೊಬ್ಬರೂ ಕೂಡ ತಪ್ಪದೇ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಪೆನ್ ಡ್ರೈವ್ ಹಗರಣ ಕಾಂಗ್ರೆಸ್ ನವ್ರ ಇನ್ನೊಂದು ಮುಖವಾಗಿದೆ:
ಪೆನ್ ಡ್ರೈವ್ ಹಗರಣವು ಕಾಂಗ್ರೆಸ್ ನವ್ರ ಇನ್ನೊಂದು ಮುಖವಾಗಿದೆ. ಈ ಹಗರಣದ ಮೂಲಕ ಅವರ ಇನ್ನೊಂದು ಮುಖ ಈಗ ಹೊರಗಡೆ ಬರುತ್ತಿದೆ. ಸಿಡಿ ವಿಚಾರದಲ್ಲಿ ಅವರು ಯಾವ ರೀತಿ ಷಡ್ಯಂತ್ರ ಮಾಡಿದ್ದಾರೆ ಎಂಬುದು ಗೊತ್ತಾಗುತ್ತಿದೆ. ಆರೋಪಿ ತಪ್ಪು ಮಾಡಿದ್ರೆ ಕಾನೂನು ಪ್ರಕಾರ ಶಿಕ್ಷೆ ಆಗಲಿ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ.
Also read: ಈಶ್ವರಪ್ಪಗೆ ಓಟ್ ಹಾಕೋಣ ಅಂತಿದ್ದೆ, ಈ ಕಾರಣಕ್ಕೆ ಕಾಂಗ್ರೆಸ್ ಗೆ ಹಾಕಿದೆ: ಆಯನೂರು ಮಂಜುನಾಥ್ ಹೇಳಿದ್ದೇನು
ಆದರೇ ಕಾಂಗ್ರೆಸ್ ನವ್ರು ಚುನಾವಣೆ ನಿಮಿತ್ತವಾಗಿ ಷಡ್ಯಂತ್ರ ಮಾಡಿದ್ದಾರೆ. ಈ ಷಡ್ಯಂತ್ರದಲ್ಲಿ ಯಾವ ಮಹಾನ್ ನಾಯಕನ ಕೈವಾಡವಿದೆ. ಹೇಗೆಲ್ಲಾ ಷಡ್ಯಂತ್ರ ನಡೆದಿದೆ ಎಂಬುದನ್ನು ನಿನ್ನೆ ವಕೀಲರು ಹೇಳಿದ್ದಾರೆ ಎಂದರು.
ಕಾಂಗ್ರೆಸ್ ನವ್ರು ಗಾಬರಿಗೊಂಡಿದ್ದಾರೆ:
ಕಾಂಗ್ರೆಸ್ ನವ್ರ ಗ್ಯಾರಂಟಿ ಎಲ್ಲಿಯೂ ವರ್ಕ್ ಆಗದೆ ಇರುವ ಕಾರಣದಿಂದ ಅವರು ಗಾಬರಿಗೊಂಡಿದ್ದಾರೆ. ದೇಶದ ಬಗ್ಗೆ ಜನರು ಚಿಂತನೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಒಂದೋ ಎರಡೋ ಕಾಂಗ್ರೆಸ್ ಬಂದ್ರು ಬಾಳ್ ದೊಡ್ ಮಾತಿದೆ. ದೇಶದ ಜನರ ಒಲವು ಎನ್‌ಡಿಎ ಪರವಾಗಿದೆ. ಎನ್‌ಡಿಎಗೆ ಒಳ್ಳೆಯ ರಿಸಲ್ಟ್ ಬರುತ್ತದೆ.
ಕಾಂಗ್ರೆಸ್ ನವ್ರು ದೇವೇಗೌಡರ ಕುಟುಂಬದ ವಿರುದ್ಧ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ನಾವು ಮಹಿಳೆಯರಿಗೆ, ತಾಯಂದಿರಿಗೆ ಗೌರವ ಕೊಟ್ಟಿದ್ದೇವೆ. ಆದರೆ ಕಾಂಗ್ರೆಸ್ ನವ್ರು ಈ ವಿ?ಯದಲ್ಲಿ ಷಡ್ಯಂತ್ರ ಮಾಡಿದ್ದಾರೆ ಎಂದು ಬಂಡೆಪ್ಪ ಖಾಶೆಂಪುರ್ ರವರು ಆರೋಪಿಸಿದರು.
ಪೆನ್ ಡ್ರೈವ್ ಪ್ರಕರಣವನ್ನು ಸಿಬಿಐಗೆ ಕೊಡ್ರಿ:
ಪೆನ್ ಡ್ರೈವ್ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸಲಿ. ಸಿಬಿಐಗೆ ಕೊಟ್ಟು ತನಿಖೆ ಮಾಡಿಸಲಿ. ವಕೀಲರು ಬಿಡುಗಡೆ ಮಾಡಿದ ದಾಖಲೆಗಳನ್ನು ಸಿಬಿಐಗೆ ಕೊಡಲಿ. ಈ ಕಾಂಗ್ರೆಸ್ ಸರ್ಕಾರವು ಮಹಾನ್ ನಾಯಕನನ್ನು ಅಷ್ಟೇ ಅಲ್ಲ, ಅವರಿಗೆ ಬೇಕಾದವರೆಲ್ಲರನ್ನೂ ರಕ್ಷಣೆ ಮಾಡುತ್ತಿದೆ.
ಪೆನ್ ಡ್ರೈವ್ ಹಂಚಿದವರಿಗೂ ಶಿಕ್ಷೆಯಾಗಲಿ:
ಪೆನ್ ಡ್ರೈವ್ ತಯಾರು ಮಾಡಿದವರು ಯಾರು, ಅವುಗಳನ್ನು ಹಂಚಿಕೊಂಡವರು ಯಾರು ಎಂಬುದರ ಮೇಲೆ ಕೂಡ ಸಿಬಿಐ ತನಿಖೆ ಆಗಲಿ. ಅವರಿಗೂ ಶಿಕ್ಷೆ ಆಗಬೇಕು. ಕಾಂಗ್ರೆಸ್ ನವ್ರು ಕರ್ನಾಟಕದಲ್ಲಿ ಹಣ ಬಲ, ಅಧಿಕಾರ ಬಲ, ತೋಳ್ ಬಲದೊಂದಿಗೆ ಚುನಾವಣೆ ಮಾಡುತ್ತಿದ್ದಾರೆ. ಆದರೆ ಅದ್ಯಾವುದು ನಡೆಯಲ್ಲ. ಈಗ ಏನಿದ್ದರೂ ದೇಶದಲ್ಲಿ, ರಾಜ್ಯದಲ್ಲಿ ಮೋದಿ ಹವಾ ಇದೆ ಎಂದು ಮಾಧ್ಯಮದವರ ಪ್ರಶ್ನೆಗಳಿಗೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಉತ್ತರಿಸಿದರು.
ಈ ಸಂದರ್ಭದಲ್ಲಿ ಬಂಡೆಪ್ಪ ಖಾಶೆಂಪುರ್ ರವರ ಪತ್ನಿ ನಳಿನಿ ಖಾಶೆಂಪುರ್, ಸಹೋದರ ರವಿ ಖಾಶೆಂಪುರ್ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post