ಕಲ್ಪ ಮೀಡಿಯಾ ಹೌಸ್ | ಬೀದರ್ |
ರಾಜಕೀಯ ರಂಗದಲ್ಲಿ ಹೆಚ್ಚೆಚ್ಚು ಮಹಿಳೆಯರು ಬರಬೇಕು. ಮಹಿಳೆಯರಿಗೆ ವಿಶೇ? ಮೀಸಲಾತಿ ಕಲ್ಪಿಸಬೇಕೆಂಬ ಕನಸನ್ನು ದೇವೇಗೌಡರು ಕಂಡಿದ್ದರು. ಮಹಿಳಾ ಮೀಸಲಾತಿ ದೇವೇಗೌಡರ ಕನಸಿನ ಕೂಸು ಆಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ Bandeppa Khashempur ಅಭಿಪ್ರಾಯ ಪಟ್ಟಿದ್ದಾರೆ.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜಕೀಯ ರಂಗದಲ್ಲಿ ಮಹಿಳಾ ಮೀಸಲಾತಿ ತರಲು ಮುಂದಾಗಿರುವುದನ್ನು ನಾನು ಸ್ವಾಗತಿಸುತ್ತೇನೆ. ದೇವೇಗೌಡರ ಕನಸು ನನಸಾಗುವುದನ್ನು ಕಾಣುವುದಕ್ಕಾಗಿ ನಾನು ಕೂಡ ಕಾಯುತ್ತಿದ್ದೇನೆ. ಮಹಿಳಾ ಸಬಲೀಕರಣಕ್ಕೆ ಮೀಸಲಾತಿ ಅಗತ್ಯವಾಗಿದೆ ಎಂದರು.
ರಾಷ್ಟ್ರದ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಜಾರಿಗೆ ತರಲು ಮುಂದಾಗಿರುವುದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.
ಹೆಚ್.ಡಿ ದೇವೇಗೌಡರು 1996 ಸೆಪ್ಟೆಂಬರ್ 12ರಂದು ತಾವು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲೇ ಈ ಐತಿಹಾಸಿಕ ಮಸೂದೆಯನ್ನು ಜಾರಿಗೆ ತರಲು ಮುಂದಾಗಿ, ರಾಜಸಭೆಯಲ್ಲಿ ಮಸೂದೆ ಮಂಡಿಸಲಾಗಿತ್ತು. ಆದರೇ ಕೆಲವರ ವಿರೋಧದಿಂದ ಮಸೂದೆ ಅಂಗೀಕಾರವಾಗಿರಲಿಲ್ಲ ಎಂದರು.
ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅದನ್ನು ಜಾರಿಗೆ ತರಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಸರ್ಕಾರ, ವಿರೋಧ ಪಕ್ಷಗಳು ಸರ್ವಾನುಮತದಿಂದ ಮಸೂದೆಯನ್ನು ಅಂಗೀಕರಿಸಿ ಮಹಿಳಾ ಸಬಲೀಕರಣಕ್ಕೆ ಕೈಜೋಡಿಸಬೇಕೆಂಬುದು ನನ್ನ ಒತ್ತಾಯವಾಗಿದೆ. ಮಹಿಳೆಯರ ಒಳಿತಿಗಾಗಿ ಜಾರಿಗೆ ತರಲಾಗುತ್ತಿರುವ ಈ ಮಸೂದೆ ಆದ? ಬೇಗ ಅಂಗೀಕಾರವಾಗಿ, ಕೂಡಲೇ ಜಾರಿಯಾಗಲಿ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಗಣೇಶ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಕೆ
ಮಾಜಿ ಸಚಿವಬಂಡೆಪ್ಪ ಖಾಶೆಂಪುರ್ ರವರು ಗಣೇಶ ಚತುರ್ಥಿಯ ಅಂಗವಾಗಿ ಬುಧವಾರ ಗಣೇಶ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಮಠಾಣಾ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದ ವಿವಿಧೆಡೆ ಪ್ರತಿ?ಪನೆ ಮಾಡಲಾಗಿದ್ದ ಗಣೇಶ ದೇವರ ದರ್ಶನ ಪಡೆದು, ನಾಡಿನ ಜನರ ಒಳಿತಿಗಾಗಿ ಪ್ರಾರ್ಥಿಸಿ, ವಿಶೇಷ ಪೂಜೆ ಸಲ್ಲಿಸಿದರು.
Also read: ಹಬ್ಬ, ಉತ್ಸವಗಳು ಶಾಂತಿ-ಸೌಹಾರ್ದತೆ ಬಿತ್ತಲಿ: ಮುಹಮ್ಮದ್ ತಾಹೀರ್ ಹುಸೇನ್ ಆಶಯ
ಈ ಸಂದರ್ಭದಲ್ಲಿ ಕಮಠಾಣಾ ಗ್ರಾಮ ಪಂಚಾಯತಿ ಅಧ್ಯಕ್ಷ ರವಿಕುಮಾರ್ ಶಂಕರ್ ನಡುವಿನದೊಡ್ಡಿ, ಪ್ರಮುಖರಾದ ಬೋಮಗೊಂಡ ಚಿಟ್ಟಾವಾಡಿ, ಮನೋಹರ ದಂಡೆ, ರೇವಣಸಿದ್ದಪ್ಪ ಬಾವಗಿ, ವಿಜಯಕುಮಾರ್, ಗಣಪತಿ ದೇವದತ್ತ, ಗೋಪಾಲ್, ವಿಜಯಕುಮಾರ್ ಮೈನಳ್ಳಿ, ಪಾಂಡು ಕಮಠಾಣಾ, ನಾಗೇಶ ಬಾವ್ಗೆ, ಸಂಜು ಮೈನಳ್ಳಿ, ಗಣಪತಿ ಚಟ್ನಳ್ಳಿ, ರಾಹುಲ್ ಬಾವ್ಗೆ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post