ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ #BidarSouth ವಿಧಾನಸಭಾ ಕ್ಷೇತ್ರದ ಸುಕ್ಷೇತ್ರ ಚಾಂಗಲೇರಾದ ಐತಿಹಾಸಿಕ ಸ್ಥಳ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಂಗಲೇರಾ ಗ್ರಾಮದಿಂದಲೇ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ #JDS ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು, ಜೆಡಿಎಸ್ ಅಭ್ಯರ್ಥಿಯಾಗಿರುವ ಬಂಡೆಪ್ಪ ಖಾಶೆಂಪುರ್ ರವರು #BandeppaKashempur 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಮತಯಾಚನೆ ಯಾತ್ರೆ (ಪ್ರಚಾರ ಕಾರ್ಯ) ಆರಂಭಿಸಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಸುಕ್ಷೇತ್ರ ಚಾಂಗಲೇರಾ ಗ್ರಾಮಕ್ಕೆ ಭಾನುವಾರ ಕುಟುಂಬ ಸಮೇತವಾಗಿ ಭೇಟಿ ನೀಡಿ, ವೀರಭದ್ರೇಶ್ವರ ದೇವರ ದರ್ಶನ ಪಡೆದ ಅವರು, ಚಾಂಗಲೇರಾ ಗ್ರಾಮದಿಂದಲೇ ಚುನಾವಣಾ ಪ್ರಚಾರ ಆರಂಭಿಸಿದರು. ಗ್ರಾಮದ ವಿವಿಧ ಏರಿಯಾಗಳಿಗೆ ಭೇಟಿ ನೀಡಿ ಮತಯಾಚಿಸಿದ ಅವರು, ನಾಡಿನ ಒಳಿತಿಗಾಗಿ ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡುವಂತೆ ಮನವಿ ಮಾಡಿದರು.
ಚಾಂಗಲೇರಾ ಗ್ರಾಮದ ಮತಯಾಚನೆಯ ಬಳಿಕ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಚೌಕಿ ತಾಂಡ ಎ ಮತ್ತು ಬಿ, ದೇವಗಿರಿ ತಾಂಡ ಎ ಮತ್ತು ಬಿ ಸೇರಿದಂತೆ ವಿವಿಧ ತಾಂಡಗಳಿಗೆ, ಗ್ರಾಮಗಳಿಗೆ ಭೇಟಿ ನೀಡಿ ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ್ದ ಜನಪರ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದರೇ ಏನೆಲ್ಲಾ ಕೆಲಸಗಳನ್ನು ಮಾಡಲಿದೆ ಎಂಬುದರ ಮಾಹಿತಿಯನ್ನು ಜನರೊಂದಿಗೆ ಹಂಚಿಕೊಂಡರು. ಬಳಿಕ ಅವರು, ಸುಕ್ಷೇತ್ರ ದುರ್ಗಮ್ಮ ತಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಖಾಶೆಂಪುರ್ ಪ್ರಚಾರಕ್ಕೆ ಅದ್ಬುತ ಜನಬೆಂಬಲ
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಶಾಸಕ ಬಂಡೆಪ್ಪ ಖಾಶೆಂಪುರ್ #BandeppaKashempur ರವರು ನಡೆಸಿದ ಮತಯಾಚನೆ ಯಾತ್ರೆಗೆ ಚಾಂಗಲೇರಾ, ಚೌಕಿ ತಾಂಡ ಎ ಮತ್ತು ಬಿ, ದೇವಗಿರಿ ತಾಂಡ ಎ ಮತ್ತು ಬಿ ಗಳಲ್ಲಿ ಅದ್ಬುತ ಜನಬೆಂಬಲ ವ್ಯಕ್ತವಾಯಿತು. ಬಾಜಾ ಭಜಂತ್ರಿಯೊಂದಿಗೆ ಗ್ರಾಮಸ್ಥರು, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಬಂಡೆಪ್ಪ ಖಾಶೆಂಪುರ್’ರವರೊಂದಿಗೆ ಹೆಜ್ಜೆ ಹಾಕಿದರು.
ವಿವಿಧ ದೇವಸ್ಥಾನ, ಚರ್ಚ್’ಗಳಿಗೆ ಭೇಟಿ
ಬಂಡೆಪ್ಪ ಖಾಶೆಂಪುರ್ ರವರು ಮತಯಾಚನೆಯ ವೇಳೆ ಗ್ರಾಮಗಳಲ್ಲಿ ವಿವಿಧ ದೇವಸ್ಥಾನಗಳಿಗೆ #Temple ಭೇಟಿ ನೀಡಿ ದರ್ಶನ ಪಡೆದರು. ಚರ್ಚ್’ಗಳಲ್ಲಿ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಪ್ರಚಾರದ ವೇಳೆಯಲ್ಲಿ ವಿವಿಧ ಗ್ರಾಮಗಳ ವಿವಿಧ ಪಕ್ಷಗಳ ಯುವಕರು, ಮುಖಂಡರು, ಮಹಿಳೆಯರನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ, ತಾಲೂಕು ಮಟ್ಟದ, ಹೋಬಳಿ ಮಟ್ಟದ ಪ್ರಮುಖರು, ವಿವಿಧ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು, ಚಾಂಗಲೇರಾ, ಚೌಕಿ ತಾಂಡ, ದೇವಗಿರಿ ತಾಂಡಗಳ ಪ್ರಮುಖರು, ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post