ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಗೋರನಳ್ಳಿ, ಮರ್ಜಾಪೂರ, ಮನ್ನಾಎಖೇಳ್ಳಿ, ಘೋಡಂಪಳ್ಳಿ, ಬರೂರು, ನಾಗೋರಾ, ನಿರ್ಣಾ, ಕಮಠಾಣಾ, ಸಿಂದೋಲ್, ಬಾವಗಿ, ಬಗದಲ್, ಖಾಶೆಂಪುರ್ ಸಿ, ಕುತ್ತಬಾದ್, ನಿಜಾಂಪೂರ್, ಚಿಂತಲಗೇರಾ, ಬೋರಾಳ, ಬರಿದಾಬಾದ್, ಯದಲಾಪೂರ, ಕಂಗನಕೋಟ್ ಸೇರಿದಂತೆ ವಿವಿಧ ಗ್ರಾಮಗಳ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಯುವಕರು, ಮುಖಂಡರು ನೂರಾರು ಸಂಖ್ಯೆಯಲ್ಲಿ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ 19ಕ್ಕೂ ಹೆಚ್ಚು ಗ್ರಾಮಗಳ ನೂರಾರು ಜನ ಯುವಕರು, ಮುಖಂಡರಿಗೆ ಬುಧವಾರ ಜೆಡಿಎಸ್ ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ಅವರು, ನಮ್ಮ ಪಕ್ಷದ ತತ್ವಸಿದ್ಧಾಂತಗಳನ್ನು ಮೆಚ್ಚಿ ಪ್ರತಿನಿತ್ಯ ಸಾವಿರಾರು ಜನರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ತಳಮಟ್ಟದಿಂದ ಪಕ್ಷಸಂಘಟನೆ, ಬಲವರ್ಧನೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರತಿಯೊಬ್ಬರಿಗೂ ತಿಳಿಸುತ್ತಿದ್ದೇನೆ ಎಂದರು.
Also read: ಈಶ್ವರಪ್ಪ ನಿವೃತ್ತಿ/ಹಿಂದುಳಿದ ವರ್ಗಕ್ಕೆ ಮಣೆ- ಎಲ್ ಸತ್ಯನಾರಾಯಣರಾವ್ ಕಡೆಗೆ ಕಾಂಗೈ ಟಿಕೇಟ್..?
ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಜನಪರ ಕೆಲಸಗಳು, ಅಧಿಕಾರಕ್ಕೆ ಬಂದರೆ ಜಾರಿಗೊಳಿಸಲಿರುವ ಯೋಜನೆಗಳ ಬಗ್ಗೆ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡುವುದು ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ನೂತನವಾಗಿ ಪಕ್ಷಕ್ಕೆ ಸೇರ್ಪಡೆಯಾದವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಗೋರನಳ್ಳಿ, ಮರ್ಜಾಪೂರ, ಮನ್ನಾಎಖೇಳ್ಳಿ, ಘೋಡಂಪಳ್ಳಿ, ಬರೂರು, ನಾಗೋರಾ, ನಿರ್ಣಾ, ಕಮಠಾಣಾ, ಸಿಂದೋಲ್, ಬಾವಗಿ, ಬಗದಲ್, ಖಾಶೆಂಪುರ್ ಸಿ, ಕುತ್ತಬಾದ್, ನಿಜಾಂಪೂರ್, ಚಿಂತಲಗೇರಾ, ಬೋರಾಳ, ಬರಿದಾಬಾದ್, ಯದಲಾಪೂರ, ಕಂಗನಕೋಟ್ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post