ಕಲ್ಪ ಮೀಡಿಯಾ ಹೌಸ್ | ಬೀದರ್ |
ಹನ್ನೆರಡನೆಯ ಶತಮಾನದಲ್ಲಿಯೇ ಶರಣರು ರಚಿಸಿದ ಮಹತ್ವದ ವಚನಗಳಲ್ಲಿ ದಿನಕ್ಕೆ ಐದು ವಚನಗಳನ್ನು ಓದಿದರೇ ಸಾಕು ಮನುಷ್ಯನಿಗೆ ಬಿಪಿ, ಶುಗರ್ ಯಾವುದು ಇರುವುದಿಲ್ಲವೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದರು.

ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸವನ್ನು ನಾನು ಮಾಡುತ್ತೇನೆ. ಹಳ್ಳಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಗಬೇಕಾಗಿದೆ. ಆ ಮೂಲಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಬಹುದಾಗಿದೆ. ಅಂಬೇಡ್ಕರ್ ರವರು ಬರೆದಿರುವ ಸಂವಿಧಾನದಲ್ಲಿ ಮೀಸಲಾತಿ ಮೂಲಕ ಎಲ್ಲರಿಗೂ ಸಮಾನತೆ ನೀಡಿದ್ದಾರೆ. ಶರಣರು ಬರೆದಿರುವ ವಚನಗಳು ಬಹಳಷ್ಟು ಅರ್ಥಪೂರ್ಣವಾಗಿವೆ. ಬೀದರ್ ಶರಣರ ನಾಡು. ಇದು ಬಸವಣ್ಣನವರ ಕರ್ಮ ಭೂಮಿಯಾಗಿದೆ. ದೇಶದ ಪ್ರಧಾನಿಗಳ ಸೇರಿದಂತೆ ಎಲ್ಲರೂ ಬಸವಣ್ಣನವರ ಕರ್ಮ ಭೂಮಿ ಬಗ್ಗೆ ಮಾತಾಡ್ತಾರೆ ಎಂದರು.
ಬಸವಣ್ಣ, ಕನಕ, ಬುದ್ಧ, ಅಂಬೇಡ್ಕರ್ ಸೇರಿದಂತೆ ಎಲ್ಲರಿಗೂ ಒಂದೇ ಜನ್ಮ. ಅವರವರ ಅವಧಿಯಲ್ಲಿ ಅವರು ಮಾಡಿರುವ ಕೆಲಸಗಳಿಂದ ಅವರು ಜಗದ್ವಿಖ್ಯಾತ ಪಡೆದಿದ್ದಾರೆ. ಅದರಂತೆ ಪ್ರತಿಯೊಬ್ಬರೂ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕಾಗಿದೆ. ಕಂಗನಕೋಟದ ಅಕ್ಕನ ಬಳಗ ಒಳ್ಳೆಯ ಕೆಲಸ ಮಾಡುತ್ತಿದೆ. ಅಂತಹ ಕೆಲಸಗಳಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕಾಗಿದೆ. ಹನ್ನೆರಡನೆಯ ಶತಮಾನದಲ್ಲಿಯೇ ಬಸವಣ್ಣನವರು ಸಾಮಾಜಿಕ ಸಮಾನತೆಯ ವಿಚಾರವಾಗಿ ಧ್ವನಿ ಎತ್ತಿದ್ದರು. ಅಂತವರ ಮಾರ್ಗದಲ್ಲಿ ಸಾಗುತ್ತಿರುವ ಅಕ್ಕನ ಬಳಗದವರ ಕಾರ್ಯ ಮಾದರಿ ಕಾರ್ಯವಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಇದೇ ವೇಳೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಮಾತೆ ಅಕ್ಕಮಹಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು. ಕೊರೊನಾ ವಾರಿಯರ್ಸ್ ಗಳಾದ ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಂಭುಲಿಂಗ ವಾಲದೊಡ್ಡಿ, ನಿರ್ಮಲಾ ದೇವಿ ಶಂಭು, ಅಮೀರ್ ಶಾವಂತ್, ಕೃಷ್ಣಮ್ಮ ಪುಂಡಲಿಂಕ್, ಸುಗಂದಾ ಶಂಭು, ನೀಲಕಂಠ ರಾಠೋಡ್, ಸಂಗೀತಾ ವತಿ, ರಮೇಶ ಬಿರಾದಾರ, ಸಿದ್ದಮ್ಮ ಸ್ವಾಮಿ, ಸಿದ್ರಾಮಪ್ಪ ಸಿಂಧೆ, ಗೀತಾ ಬುಳ್ಳಾ, ಸುರೇಶ್ ಚನ್ನಶೆಟ್ಟಿ, ಪಾರ್ವತಿ ಬುಳ್ಳಾ, ಶಿವಕುಮಾರ್ ಕಟ್ಟೆ, ಜಗದೇವಿ, ಶಿವಪುತ್ರ ಪಾಟೀಲ್, ಮಹಾದೇವಿ ಪಾಟೀಲ್, ಶಾರದಾದೇವಿ, ಸುರೇಶ ಪಾಟೀಲ್, ರತೀದೇವಿ, ನಯೀಮ್ ಪಾಟೀಲ್, ಸಂಗೀತಾ ವತಿ, ಶಿವಕುಮಾರ್ ಪಂಚಾಳ, ಲಕ್ಷ್ಮೀ ಚಿದ್ರೆ, ಪಾರ್ವತಿ ಬುಳ್ಳಾ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post