ಕಲ್ಪ ಮೀಡಿಯಾ ಹೌಸ್ | ಬೀದರ್ |
ಶಕ್ತಿ ಯೋಜನೆ ಉಚಿತ ಬಸ್ #Shakthi Yojana Free Bus ಸೀಟಿಗಾಗಿ ಮಹಿಳೆಯರಿಬ್ಬರು ಅಕ್ಷರಶಃ ಬಟ್ಟೆ ಎಳೆದಾಡಿಕೊಂಡು, ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.
ಬೀದರ್’ನಿಂದ ಕಲಬುರಗಿ ತೆರಳುವ ಬಸ್’ನಲ್ಲಿ ಶಕ್ತಿ ಯೋಜನೆಯಡಿ ಉಚಿತ ಟಿಕೇಟ್ ಪಡೆದ ಮಹಿಳೆಯರಿಬ್ಬರು ಸೀಟಿಗಾಗಿ ಹೊಡೆದಾಡಿಕೊಂಡಿದ್ದಾರೆ.
ಈ ಕುರಿತ ವೀಡಿಯೋವೊಂದು ವೈರಲ್ ಆಗಿದೆ. ಓರ್ವ ಮಹಿಳೆ, ಸೀಟು ಬಿಡು, ಇದು ನನ್ನದು ಎಂದು ಹೇಳಿದ್ದರೆ ಮತ್ತೊಬ್ಬಳು, ನಾನು ಸೀಟ್ ಬಿಡಲ್ಲ. ಏನ್ ಮಾಡ್ತಿ ಎಂದು ಪ್ರಶ್ನಿಸಿದ್ದಾಳೆ.
Also read: ಲೋಕಸಭಾ ಚುನಾವಣೆ | ಮೋದಿ ಅವರು ಈಗಾಗಲೇ ಬಹುಮತ ಪಡೆದಿದ್ದಾರೆ | ಅಮಿತ್ ಶಾ ವಿಶ್ವಾಸ
ಇಬ್ಬರ ನಡುವಿನ ಮಾತಿನ ಜಗಳ ಜೋರಾಗಿದ್ದು, ಇದರಲ್ಲಿ ಓರ್ವ ಮಹಿಳೆ ತನ್ನ ಚಪ್ಪಲಿ ತೆಗೆದುಕೊಂಡು ಎದುರು ಜಗಳ ಮಾಡುತ್ತಿದ್ದ ಮಹಿಳೆಗೆ ಹೊಡೆದಿದ್ದಾಳೆ.
ಜಗಳ ವಿಕೋಪಕ್ಕೆ ಹೋಗಿದ್ದು, ಚಪ್ಪಲಿಯಲ್ಲಿ ಹೊಡೆದ ಮಹಿಳೆ ಮೈಮೇಲೆ ಹಾಕಿದ ಬಟ್ಟೆ ಹಿಡಿದು, ಎಳೆದಾಡಿ ಇಬ್ಬರೂ ಮಹಿಳೆಯರು ಹೊಡೆದಾಡಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post