ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದಾದ್ಯಂತ ಹಾಲಿ ಚಾಲ್ತಿಯಲ್ಲಿರುವ ಟೋಲ್ #Toll ವ್ಯವಸ್ಥೆ ಶೀಘ್ರ ಅಂತ್ಯಗೊಳ್ಳಲಿದ್ದು, ಹೊಸ ಅತ್ಯಾಧುನಿಕ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ #NitinGadkari ಮಹತ್ವದ ಘೋಷಣೆ ಮಾಡಿದ್ದಾರೆ.
ಎಎನ್’ಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ಘೋಷಣೆ ಮಾಡಿರುವ ಅವರು, ಹಾಲಿ ಚಾಲ್ತಿಯಲ್ಲಿರುವ ಟೋಲ್ ವ್ಯವಸ್ಥೆ ಶೀಘ್ರ ಅಂತ್ಯಗೊಳ್ಳಲಿದ್ದು, ಹೊಸ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು #SatelliteBasedTollCollectionSystem ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ಹೇಳಿದ್ದಾರೆ.
ಮುಂದಿನ ವ್ಯವಸ್ಥೆ ಏನು?
ಈಗಿರುವ ಟೋಲ್ ವ್ಯವಸ್ಥೆಯನ್ನು ಅನ್ನು ಕೊನೆಗೊಳಿಸುತ್ತಿದ್ದು, ಸ್ಯಾಟಲೈಟ್ ಬೇಸ್ ಟೋಲ್ ಸಂಗ್ರಹ ವ್ಯವಸ್ಥೆ ಇರುತ್ತದೆ. ನಿಮ್ಮ ಬ್ಯಾಂಕ್ ಖಾತೆಯಿಂದ #BankAccount ಹಣವನ್ನು ಕಡಿತಗೊಳಿಸಲಾಗುತ್ತದೆ ಮತ್ತು ನೀವು ಪ್ರಯಾಣ ಮಾಡುವ ರಸ್ತೆಯ ಮೊತ್ತಕ್ಕೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತದೆ. ಇದರಿಂದ ವಾಹನ ಸವಾರರಿಗೆ ಹಣದ ಉಳಿತಾಯವೂ ಸಹ ಆಗಲಿದೆ ಎಂದಿದ್ದಾರೆ.
Also read: ಯುಪಿಎ ಅವಧಿಯಲ್ಲಿ ಎಷ್ಟು ಎನ್ ಡಿಆರ್ ಎಫ್ ಹಣ ಬಂದಿದೆ, ರಾಜ್ಯ ಸರ್ಕಾರ ಬಹಿರಂಗಪಡಿಸಲಿ
ಆರ್ಥಿಕ ಕಾರಿಡಾರ್
ಇನ್ನು ದೇಶದಲ್ಲಿ ಸರಿಸುಮಾರು 26,000 ಕಿಮೀ ಆರ್ಥಿಕ ಕಾರಿಡಾರ್’ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಭಾರತಮಾಲಾ ಪರಿಯೋಜನಾ #BharatmalaPariyojana ಕುರಿತು ಚರ್ಚಿಸುತ್ತಾ, ನಿತಿನ್ ಗಡ್ಕರಿ ಅವರು ಚಿನ್ನದ ಚತುಷ್ಪಥ #GoldenQuadrilateral ಮತ್ತು ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಕಾರಿಡಾರ್’ಗಳ ಜೊತೆಗೆ ಹೆಚ್ಚಿನ ಸರಕು ಸಾಗಣೆಯನ್ನು ನಿರ್ವಹಿಸುವಲ್ಲಿ ಅವುಗಳ ಮಹತ್ವವನ್ನು ಒತ್ತಿ ಹೇಳಿದರು.
ಈ ಯೋಜನೆಯು 2024 ರ ವೇಳೆಗೆ ರಾಷ್ಟ್ರದ ಭವಿಷ್ಯವನ್ನು ಕ್ರಾಂತಿಗೊಳಿಸುತ್ತದೆ. ಭಾರತದ ರಾಷ್ಟ್ರೀಯ ಹೆದ್ದಾರಿ ರಸ್ತೆ ಜಾಲವನ್ನು ಅಮೆರಿಕದ ಗುಣಮಟ್ಟಕ್ಕೆ ಏರಿಸುವ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸಿದರು. ಈ ಗುರಿಯನ್ನು ಸಾಧಿಸುವ ಅವರ ಸಾಮರ್ಥ್ಯದ ಬಗ್ಗೆ ಭರವಸೆ ವ್ಯಕ್ತಪಡಿಸಿದರು.
ಹೊಸ ಎನ್’ಎಚ್’ಎಐ ವ್ಯವಸ್ಥೆ
ಇನ್ನು ಪ್ರಮುಖವಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ #NHAI ಶೀಘ್ರ ಹೊಸ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಿದೆ ಎಂದರು.
ಪ್ರಯಾಣಿಕರ ಅನುಕೂಲ, ಸುಗಮಗೊಳಿಸುವ ಹಾಗೂ ಟೋಲ್ ಪ್ಲಾಜಾಗಳನ್ನು ಕಾಯುವ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಅತ್ಯಾಧುನಿಕ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಈ ಸಂಬಂಧಿಸಿದಂತೆ ವಿಶ್ವ ಬ್ಯಾಂಕ್ ಜೊತೆಯಲ್ಲೂ ಸಹ ಚರ್ಚಿಸಲಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post