ಕಲ್ಪ ಮೀಡಿಯಾ ಹೌಸ್ | ನವದೆಹಲಿ |
2024 ರ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಮುಹೂರ್ತ ನಿಗದಿ ಮಾಡಿದ್ದು, ಎಪ್ರಿಲ್ 19ರಿಂದ ಆರಂಭವಾಗಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಈ ಕುರಿತಂತೆ ಮಹತ್ವದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು,
ಒಟ್ಟು 7 ಹಂತದಲ್ಲಿ ಮತದಾನ ನಡೆಯಲಿದ್ದು, ಜೂನ್ 4ರಂದು ದೇಶದಾದ್ಯಂತ ಒಂದೇ ಹಂತದಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದರು.
ದೇಶದಲ್ಲಿ ಎಷ್ಟಿದ್ದಾರೆ ಮತದಾರರು?
ಈ ಬಾರಿ ದೇಶದಲ್ಲಿ 97 ಕೋಟಿ ಮತದಾರರಿದ್ದು, 49 ಕೋಟಿ ಪುರುಷ ಹಾಗೂ 47.15 ಮಹಿಳಾ ಮತದಾರರಿದ್ದಾರೆ. 88 ಲಕ್ಷ ವಿಶೇಷ ಚೇತನ, 1.98 ಕೋಟಿ 80 ವರ್ಷ ದಾಟಿದ ಮತದಾರರು, 2.18 ಲಕ್ಷ ಶತಾಯುಷಿ, 18-19 ವರ್ಷದೊಳಗಿನ ಯುವ ಮತದಾರರು ದೇಶದಲ್ಲಿ 85.3 ಲಕ್ಷ ಹಾಗೂ 1.82 ಕೋಟಿ ಮಂದಿ ಮೊದಲ ಬಾರಿಗೆ ಮತದಾನ ಮಾಡುವವರಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಮುಖವಾಗಿ 17 ವರ್ಷ ತುಂಬದ 13.4 ಲಕ್ಷ ಯುವಕರಿಂದ ಅರ್ಜಿ ಬಂದಿದೆ. ಇದರಲ್ಲಿ ಎಪ್ರಿಲ್ 1ಕ್ಕೆ 18 ವರ್ಷ ಆಗುವವರಿಗೆ ಮಾತ್ರ ಮತದಾನದ ಅವಕಾಶ ನೀಡಲಾಗುತ್ತದೆ ಎಂದರು.
85 ವರ್ಷ ಮೀರಿದವರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದ್ದು, ಇದಕ್ಕೆ ನಿಯಮಾವಳಿಯಂತೆ ನೋಂದಣಿ ಮಾಡಿಕೊಳ್ಳಬೇಕು. ಶೇ.40ಕ್ಕೂ ಅಧಿಕ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದ್ದು, ಈ ಕ್ರಮ ದೇಶದ ಇತಿಹಾಸದಲ್ಲೇ ಮೊದಲು ಎಂದು ಆಯುಕ್ತರು ತಿಳಿಸಿದರು.
ಎಷ್ಟು ಸಿಬ್ಬಂದಿ ಬಳಕೆ?
55 ಲಕ್ಷ ಇವಿಎಂ ಮಷೀನ್ ಬಳಕೆ ಮಾಡುತ್ತಿದ್ದು, 10.5 ಲಕ್ಷ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. 1.5 ಕೋಟಿ ಅಧಿಕಾರಿ ಹಾಗೂ ಭದ್ರತಾ ಸಿಬ್ಬಂದಿಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
Watch LIVE : Press Conference by Election Commission to announce schedule for General Elections 2024 to Lok Sabha & State Assemblies https://t.co/M8MRkdUdod
— Election Commission of India (@ECISVEEP) March 16, 2024
Also read: ನಮ್ಮದು ಯುದ್ಧಕಾಲೇ ಶಸ್ತ್ರಾಭ್ಯಾಸ ಅಲ್ಲ | ಸಂಸದ ರಾಘವೇಂದ್ರ ಖಡಕ್ ಸಂದೇಶ ರವಾನೆ
ಜನಸಂಖ್ಯೆ ಹಾಗೂ ಭೂವಿಸ್ತರ್ಣದಲ್ಲಿ ಬೃಹತ್ ಆಗಿರುವ ಭಾರತದಂತಹ ದೇಶದಲ್ಲಿ ಈ ಚುನಾವಣೆ ನಡೆಯಸಲು ಆಯೋಗ ಸುಮಾರು 2 ವರ್ಷದಿಂದ ಸಿದ್ದತೆ ನಡೆಸಿದೆ. ದೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಕೆಳ ಹಂತದ ಸಿಬ್ಬಂದಿಗಳಿಂದ ಹಿಡಿದು ಕೇಂದ್ರ ಚುನಾವಣಾ ಆಯೋಗದವರೆಗೂ ಎಲ್ಲರೂ ಬಹಳಷ್ಟು ಶ್ರಮ ವಹಿಸಿದ್ದೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post