ಬೆಂಗಳೂರು: ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್(85) ವಿಧಿವಶರಾಗಿದ್ದಾರೆ.
ಚಿತ್ರದುರ್ಗ ಚಳ್ಳಕೆರೆ ಮೂಲದ ಜಾಫರ್ ಷರೀಫ್ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದು, ಕೇಂದ್ರದಲ್ಲಿ ರೈಲ್ವೆ ಸಚಿವರಾಗಿ ದೇಶದಲ್ಲೇ ಅತ್ಯುತ್ತಮ ಕಾರ್ಯಗಳನ್ನು ಕೈಗೊಂಡು ಹೆಸರವಾಸಿಯಾಗಿದ್ದರು.
It is a day of tragedy for the Congress party, with another senior, loved & respected member of our family in Karnataka, Shri Jaffer Sharief Ji, passing away today. My condolences to his family, friends & supporters in their time of grief. #JafferSharief
— Rahul Gandhi (@RahulGandhi) November 25, 2018
1933ರ ನವೆಂಬರ್ 3ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಜನಿಸಿದ ಷರೀಫ್ ಅವರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಬೇರುಮಟ್ಟದಿಂದ ಬೆಳೆದು, ರಾಷ್ಟ್ರ ಮಟ್ಟದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ನಾಯಕರಾಗಿದ್ದರು.
ರಾಜಕೀಯ ಮುತ್ಸದ್ಧಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ಅವರ ನಿಧನದ ಸುದ್ದಿ ಅತೀವ ನೋವು ತರಿಸಿದೆ. ದೇವರು ಇವರ ಆತ್ಮಕ್ಕೆ ಶಾಂತಿ ಕರುಣಿಸಲಿ. ಇವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. pic.twitter.com/1IBIuNuL9H
— B.S. Yeddyurappa (@BSYBJP) November 25, 2018
1991ರಿಂದ 1995ರವರೆಗೂ ಪಿ.ವಿ. ನರಸಿಂಹ ರಾವ್ ಸಂಪುಟದಲ್ಲಿ ರೈಲ್ವೆ ಇಲಾಖೆಯ ಸಚಿವರಾಗಿದ್ದ ಇವರು ರಾಜ್ಯದ ರೈಲ್ವೆ ಇಲಾಖೆಗೆ ನೀಡಿದ ಕೊಡುಗೆ ಅಪಾರವಾದುದು. ಪ್ರಮುಖವಾಗಿ ಮೀಟರ್ ಗೇಜ್ ಹಳಿಗಳಿಂದ ಬ್ರಾಡ್ ಗೇಜ್ ಹಳಿಗಳಿಗೆ ರಾಜ್ಯದಲ್ಲಿ ಪರಿವರ್ತನೆ ಮಾಡಿದ ಹರಿಕಾರ ಷರೀಫ್ ಅವರಾಗಿದ್ದಾರೆ.
My deepest condolences on the passing away of veteran Congress leader and Former Union Minister, Sh C K Jaffer Sharief.
In his long political career, he was particularly instrumental in providing an impetus to the Railways.
My sympathies to his family, friends and followers. pic.twitter.com/MKg51RjS48
— Randeep Singh Surjewala (@rssurjewala) November 25, 2018
ಅತ್ಯಂತ ಪ್ರಮುಖವಾಗಿ ಭಾರತೀಯ ರೈಲ್ವೆಯಲ್ಲಿ ದುಂದುವೆಚ್ಚ ಕಡಿಮೆ ಮಾಡುವಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದ ಷರೀಫ್ ಬೆಂಗಳೂರಿನಲ್ಲಿ ರೈಲು ಹಳಿ ಹಾಗೂ ಆಕ್ಸಲ್ ಪ್ಲಂಟ್ ಕಾರ್ಖಾನೆ ಸ್ಥಾಪನೆಗೆ ಕಾರಣಕರ್ತರಾಗಿದ್ದರು.
One of @INCIndia’s senior most leaders, many times MP and one of India’s most successful Railway minister, Karnataka’s very own son Sri CK Jaffer Shareef has passed away.
A national leader who had a great connect across all communities, a truly secular leader.
My condolences.— Dinesh Gundu Rao (@dineshgrao) November 25, 2018
ನಿಜಲಿಂಗಪ್ಪ ಅವರ ಗರಡಿಯಲ್ಲಿ ಪಳಗಿದ್ದ ಷರೀಫ್, ಇಂದಿರಾಗಾಂಧಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ 6 ಬಾರಿ ಆಯ್ಕೆಯಾದ ಖ್ಯಾತಿ ಷರೀಫ್ ಅವರದ್ದು.
Read more at https://www.udayavani.com/kannada/news/state-news/340810/ormer-union-minister-senior-congress-leader-c-k-jaffer-sharief-no-more#8lCYpgbJ15mF6b3q.99
ಷರೀಫ್ ಅವರು 1999ರಲ್ಲಿ ಕಿರಿಯ ಪುತ್ರ, 2008ರಲ್ಲಿ ಪತ್ನಿ ವಿಯೋಗ ಹೊಂದಿದ್ದರು. ಆನಂತರ 2009ರಲ್ಲಿ ತಮ್ಮ ಹಿರಿಯ ಪುತ್ರನನ್ನೂ ಸಹ ಇವರು ಕಳೆದುಕೊಂಡಿದ್ದರು. 2009ರಲ್ಲಿ ಕೊನೆಯ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಅವರು, ಆನಂತರ ಸಕ್ರಿಯ ರಾಜಕಾರಣದಿಂದು ದೂರವೇ ಉಳಿದಿದ್ದರು.
Discussion about this post