ಬೆಂಗಳೂರು: ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ ಹಿರಿಯ ನಟ ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮೆಗಾಸ್ಟಾರ್ ಚಿರಂಜೀವಿ ಹಾಗೂ ಹಿರಿಯ ನಟ ಮೋಹನ್ ಬಾಬು ಅಕ್ಷರಶಃ ಮಕ್ಕಳಂತೆ ಗಳಗಳನೆ ಅತ್ತಿದ್ದಾರೆ.
ಇಂದು ಮಧ್ಯಾಹ್ನದ ವೇಳೆಗೆ ಕಂಠೀರವ ಕ್ರೀಡಾಂಗಣಕ್ಕೆ ಧಾವಿಸಿ ಬಂದ ಇಬ್ಬರೂ ನಟರು ತಮ್ಮ ಆತ್ಮೀಯ ಮಿತ್ರದ ಪಾರ್ಥಿವ ಶರೀರ ಕಂಡು, ತೀವ್ರ ದುಃಖಿತರಾದರು.
ಪತ್ನಿ ಸುರೇಖಾ ಅವರೊಂದಿಗೆ ಆಗಮಿಸಿದ ಚಿರಂಜೀವಿ ತಮ್ಮ ಸ್ನೇಹಿತನನ್ನು ಈ ರೀತಿಯ ಪರಿಸ್ಥಿತಿಯಲ್ಲಿ ಕಂಡು ದುಃಖ ತಡೆಯಲಾಗದೇ ಗಳಗಳನೆ ಅತ್ತರು. ಸುಮಲತಾ ಅವರೊಂದಿಗೆ ಮಾತನಾಡಿದ ಚಿರಂಜೀವಿ ತಮ್ಮ ದುಃಖವನ್ನು ವ್ಯಕ್ತಪಡಿಸುವ ಜೊತೆಯಲ್ಲೇ, ಸಾಂತ್ವನ ಹೇಳಿದರು.

ಇನ್ನು, ಅಂಬರೀಶ್ ಅವರ ಆತ್ಮೀಯ ಸ್ನೇಹಿತರಲ್ಲಿ ಓರ್ವರಾದ ಮೋಹನ್ ಬಾಬು ಅವರು ಪಾರ್ಥಿವ ಶರೀರದ ಬಳಿ ಆಗಮಿಸುತ್ತಿದ್ದಂತೆಯೇ ತೀವ್ರ ಶೋಕಿತರಾಗಿ ಶರೀರವಿರಿಸಿರುವ ಪೆಟ್ಟಿಗೆಯನ್ನು ಹಿಡಿದು ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತರು.
ತಮ್ಮ ಸ್ನೇಹಿತನನ್ನು ಕಳೆದುಕೊಂಡ ದುಃಖವನ್ನು ಅವರಲ್ಲಿ ವ್ಯಕ್ತವಾದ ರೀತಿಯನ್ನು ಕಂಡರೆ, ಇವರೊಂದಿಗೆಲ್ಲಾ ಅಂಬರೀಶ್ ಎಂತಹ ಉತ್ತಮ ಬಾಂಧವ್ಯ ಹೊಂದಿದ್ದರು ಎನ್ನುವುದು ತಿಳಿಯುತ್ತಿತ್ತು.
Gudi Namana 2026: A Year-Long Musical Tribute to Guru Parampara Across Sacred Spaces
Kalpa Media House | Article by Rasikapriya | Gudinamana 2026, a distinctive classical music and dance initiative curated by renowned...
Read moreDetails





